ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೀದರ್: ಜೂಜುಅಡ್ಡೆ ಮೇಲೆ ದಾಳಿ ಮಾಡಿದ 17 ಪೊಲೀಸರಿಗೆ ಕ್ವಾರೆಂಟೈನ್!

|
Google Oneindia Kannada News

ಬೀದರ್, ಮೇ.25: ಜೂಜು ಅಡ್ಡಿ ಮೇಲೆ ದಾಳಿ ನಡೆಸಿದ 17 ಮಂದಿ ಪೊಲೀಸರನ್ನು ಎರಡು ವಾರಗಳ ಕಾಲ ಕ್ವಾರೆಂಟೈನ್ ನಲ್ಲಿ ಇರಿಸುವಂತಾ ಸಂದಿಗ್ಧ ಪರಿಸ್ಥಿತಿಯನ್ನು ನೊವೆಲ್ ಕೊರೊನಾ ವೈರಸ್ ಮಹಾಮಾರಿಯು ಹುಟ್ಟು ಹಾಕಿದೆ.

Recommended Video

ಲಾಕ್ ಡೌನ್ ನಲ್ಲಿ ಮಧುಮೇಹ ರೋಗಿಗಳ ಆರೋಗ್ಯ ಅಪಾಯದಲ್ಲಿ!! | Exercise is must in Lockdown | Oneindia Kannada

ಬೀದರ್ ನಲ್ಲಿ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು 12 ಮಂದಿ ಜೂಜುಕೋರರನ್ನು ಬಂಧಿಸಿದ್ದರು. ಈ ಪೈಕಿ ಒಬ್ಬನಿಗೆ ಕೊರೊನಾ ವೈರಸ್ ಸೋಂಕಿತನ ಸಂಪರ್ಕ ಇರುವುದು ವಿಚಾರಣೆ ವೇಳೆ ಪತ್ತೆಯಾಗಿದೆ.

ಬ್ರೇಕಿಂಗ್ ನ್ಯೂಸ್: ಕರುನಾಡಿನಲ್ಲಿ 130 ಕೊರೊನಾ ವೈರಸ್ ಹೊಸ ಕೇಸ್! ಬ್ರೇಕಿಂಗ್ ನ್ಯೂಸ್: ಕರುನಾಡಿನಲ್ಲಿ 130 ಕೊರೊನಾ ವೈರಸ್ ಹೊಸ ಕೇಸ್!

ಕೊರೊನಾ ವೈರಸ್ ಸೋಂಕು ಪೊಲೀಸರಿಗೂ ತಗಲಿರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆ ಚಿಟ್ಟಗುಪ್ಪ ಪೊಲೀಸ್ ಠಾಣೆಯ ಸಿಪಿಐ, ಇಬ್ಬರು ಪಿಎಸ್ಐ ಹಾಗೂ 14 ಮಂದಿ ಪೊಲೀಸ್ ಕಾನ್ಸ್ ಟೇಬಲ್ ಗಳನ್ನು ಕ್ವಾರೆಂಟೈನ್ ನಲ್ಲಿ ಇರಿಸಲಾಗಿದೆ.

 Bidar Police Attacked Gambling Point And Arrest 12 People; But 17 Police Gone to Quarantine

14 ದಿನ ಪೊಲೀಸರಿಗೆ ಕ್ವಾರೆಂಟೈನ್:

ಜೂಜುಕೋರರಿಂದ ಪೊಲೀಸರಿಗೆ ಕೊರೊನಾ ವೈರಸ್ ಸೋಂಕು ಹರಡಿರುವ ಆತಂಕದ ಹಿನ್ನೆಲೆಯಲ್ಲಿ 17 ಪೊಲೀಸರನ್ನು 14 ದಿನಗಳ ಕಾಲ ಕ್ವಾರೆಂಟೈನ್ ನಲ್ಲಿ ಇರಿಸಲಾಗಿದೆ. ಈಗಾಗಲೇ ಎಲ್ಲ ಪೊಲೀಸರ ರಕ್ತ ಹಾಗೂ ಗಂಟಲು ದ್ರವ್ಯದ ಮಾದರಿ ಸಂಗ್ರಹಿಸಲಾಗಿದೆ. ವೈದ್ಯರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಕ್ವಾರೆಂಟೈನ್ ಅವಧಿ ಮುಗಿದ ನಂತರವೂ ಮಗದೊಮ್ಮೆ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ಅನಂತರವಷ್ಟೇ ಕ್ವಾರೆಂಟೈನ್ ನಿಂದ ಹೊರಬಿಡಲಾಗುತ್ತದೆ.

ಇನ್ನು, ಬೀದರ್ ಜಿಲ್ಲೆಯಲ್ಲಿ ಈವರೆಗೂ 85 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಇಬ್ಬರು ಮಹಾಮಾರಿಗೆ ಬಲಿಯಾಗಿದ್ದಾರೆ. 21 ಸೋಂಕಿತರು ಗುಣಮುಖರಾಗಿದ್ದರೆ ಬಾಕಿ ಉಳಿದ 61 ಜನರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.

English summary
Coronavirus Effect: Bidar Police Attacked Gambling Point And Arrest 12 People. But 17 Police Gone to Quarantine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X