• search
  • Live TV
ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

5 ದಿನದಲ್ಲಿ 5000 ಕೊರೊನಾ ಪರೀಕ್ಷೆಗೆ ಮುಂದಾದ ಬೀದರ್ ಜಿಲ್ಲಾಡಳಿತ

By ಬೀದರ್ ಪ್ರತಿನಿಧಿ
|

ಬೀದರ್, ಮೇ 09: ಕೊರೊನಾ ವೈರಸ್ ವೇಗವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸರ್ಕಾರದ ಅನುಮತಿಯೊಂದಿಗೆ ಐದು ದಿನದಲ್ಲಿ 5000 ಸಾವಿರ ಜನರಿಗೆ ಕೊರೊನಾ ಸೋಂಕು ಪರೀಕ್ಷೆಗೆ ಬೀದರ್ ಜಿಲ್ಲಾಡಳಿತ ಮುಂದಾಗಿದೆ.

ಜಿಲ್ಲೆಯ ಓಲ್ಡ್ ಸಿಟಿಯಲ್ಲಿ ಬರೊಬ್ಬರಿ 21 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಒಂದು ಬೆಳವಣಿಗೆಯಿಂದ ಆತಂಕ ಉಂಟಾಗಿದ್ದು, ಇದರ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಹೀಗಾಗಿ ಸರ್ಕಾರದ ಅನುಮತಿ ಪಡೆದು ಐದೇ ದಿನದಲ್ಲಿ ಐದು ಸಾವಿರ‌ ಜನರ‌ ಸ್ಯಾಂಪಲ್ ಪರೀಕ್ಷೆಗೆ ಮುಂದಾಗಿರುವುದಾಗಿ ಬೀದರ್ ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ್ ತಿಳಿಸಿದ್ದಾರೆ. ರಾಜ್ಯದಲ್ಲೇ ಇಂಥ ಪ್ರಯತ್ನ ಪ್ರಥಮ ಬಾರಿ ನಡೆಯುತ್ತಿದೆ. ಇಷ್ಟು ಮಂದಿಗೆ ಇಷ್ಟು ಕಡಿಮೆ ಸಮಯಾವಕಾಶದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.

ಬೀದರ್‌ನಲ್ಲಿ 11 ಮಂದಿಗೆ ಕೊರೊನಾ ವೈರಸ್ ಪಾಸಿಟಿವ್

ಮೊದಲು ನಗರದ ಮನಿಯಾರ್ ತಾಲೀಮ್, ಗೋಲೆಖಾನ್, ಪಾತಾಳನಗರ ಪ್ರದೇಶಗಳಲ್ಲಿ ಪ್ರತಿದಿನ‌ ಸಾವಿರ ಕೊರೊನಾ ಸೋಂಕು ಪತ್ತೆ ಪರೀಕ್ಷೆ ನಡೆಸುವುದಾಗಿ ತಿಳಿದುಬಂದಿದೆ. ಜಿಲ್ಲೆಯ ಬ್ರಿಮ್ಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ‌ಇಲಾಖೆ ಅಧಿಕಾರಿಗಳಿಗೆ ಪರೀಕ್ಷೆಗೆ ಸಿದ್ಧತೆ ಕೈಗೊಳ್ಳುವಂತೆ ಡಿಸಿ ಮಹದೇವ್ ಆದೇಶ ನೀಡಿದ್ದಾರೆ.

English summary
Bidar district administration has decided to do 5000 corona test in 5days,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X