ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೋಕಾರ್ಪಣೆಗೆ ಸಿದ್ಧವಾದ ಬೀದರ್ ವಿಮಾನ ನಿಲ್ದಾಣ

|
Google Oneindia Kannada News

ಬೀದರ್, ಜನವರಿ 30 : ವಿಮಾನದಲ್ಲಿ ಹಾರಾಟ ನಡೆಸುವ ಬೀದರ್ ಜಿಲ್ಲೆಯ ಜನರ ಕನಸು ಶೀಘ್ರವೇ ನನಸಾಗಲಿದೆ. ಫೆಬ್ರವರಿ 7ರಂದು ಬೀದರ್ ವಿಮಾನ ನಿಲ್ದಾಣ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.

ಗುರುವಾರ ಬೀದರ್ ನಗರದ ಚಿದ್ರಿ ಬಳಿ ಇರುವ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವನ್ನು ಸರ್ಕಾರದ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಪಿಲ ಮೋಹನ್ ವೀಕ್ಷಣೆ ಮಾಡಿದರು. ಬೀದರ್ ಜಿಲ್ಲಾಧಿಕಾರಿ ಎಚ್.ಸಿ. ಮಹಾದೇವ ಜೊತೆಯಲ್ಲಿದ್ದರು.

ಶೀಘ್ರದಲ್ಲೇ ಬೀದರ್‌ನಲ್ಲಿ ವಿಮಾನ ಹಾರಾಟಶೀಘ್ರದಲ್ಲೇ ಬೀದರ್‌ನಲ್ಲಿ ವಿಮಾನ ಹಾರಾಟ

ಮೊದಲು ಬೀದರ್ ವಿಮಾನ ನಿಲ್ದಾಣವನ್ನು ಜನವರಿ 26ರಂದು ಲೋಕಾರ್ಪಣೆಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ, ಅದು ಮುಂದಕ್ಕೆ ಹೋಗಿದ್ದು, ಫೆಬ್ರವರಿ 7ರಂದು ಉದ್ಘಾಟನೆಗೊಳ್ಳುವುದು ಬಹುತೇಕ ಖಚಿತವಾಗಿದೆ.

ಹುಬ್ಬಳ್ಳಿ-ಮುಂಬೈ ನಡುವೆ ಹೊಸ ವಿಮಾನ, ವೇಳಾಪಟ್ಟಿ ಹುಬ್ಬಳ್ಳಿ-ಮುಂಬೈ ನಡುವೆ ಹೊಸ ವಿಮಾನ, ವೇಳಾಪಟ್ಟಿ

Bidar airport all set for inauguration

"ಬೀದರ್‌ನಿಂದ ವಿಮಾನ ಹಾರಾಟ ಆರಂಭವಾಗಬೇಕು ಎಂಬುದು ಜಿಲ್ಲೆಯ ಜನರ ಬಹುದಿನದ ಆಶಯವಾಗಿದೆ. ಹತ್ತಾರು ವರ್ಷಗಳಿಂದ ಇದಕ್ಕೆ ಪ್ರಯತ್ನ ನಡೆದಿದೆ. ಈಗ ಆ ದಿನಗಳು ಹತ್ತಿರವಾಗುತ್ತಿವೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್ ಹೇಳಿದ್ದಾರೆ.

ಕಲಬುರಗಿ-ಬೀದರ್ ರೈಲು ಮಾರ್ಗ ವಿದ್ಯುತೀಕರಣಕ್ಕೆ ಒಪ್ಪಿಗೆ ಕಲಬುರಗಿ-ಬೀದರ್ ರೈಲು ಮಾರ್ಗ ವಿದ್ಯುತೀಕರಣಕ್ಕೆ ಒಪ್ಪಿಗೆ

ಬೀದರ್ ವಿಮಾನ ನಿಲ್ದಾಣ ಕಾಮಗಾರಿ ಚುರುಕುಗೊಳಿಸಲು ಸರ್ಕಾರ ಮುಂದಾಗಿತ್ತು. ಮೊದಲ ಹಂತದಲ್ಲಿ ಎಟಿಎಸ್ -72 ಕಾರ್ಯಾಚರಣೆಗೆ 5.39 ಎಕರೆ ಭೂ ಸ್ವಾಧೀನಕ್ಕೆ 4.23 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು.

ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಬೀದರ್ ವಿಮಾನ ನಿಲ್ದಾಣ ಕಾಮಗಾರಿಗೆ ಚಾಲನೆ ಸಿಕ್ಕಿತ್ತು. ಈಗ ಅವರು ಮುಖ್ಯಂತ್ರಿಯಾಗಿದ್ದಾಗಲೇ ವಿಮಾನ ನಿಲ್ದಾಣ ಲೋಕಾರ್ಪಣೆಗೊಳ್ಳುತ್ತಿದೆ.

English summary
Bidar airport all set for inauguration. Karnataka chief minister B. S. Yediyurappa will inaugurate airport on February 7, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X