ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಶಾ ಕಾರ್ಯಕರ್ತೆಯರಿಗೆ ವೈಯಕ್ತಿಕ ನೆರವು ನೀಡಿದ ಈಶ್ವರ ಖಂಡ್ರೆ

By ಬೀದರ್ ಪ್ರತಿನಿಧಿ
|
Google Oneindia Kannada News

ಬೀದರ್, ಮೇ 24; ಕೋವಿಡ್ ಮಾಹಾಮಾರಿ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್‌ಗಳಲ್ಲಿ ಆಶಾ ಕಾರ್ಯಕರ್ತೆಯರು ಸೇರಿದ್ದಾರೆ. ಭಾಲ್ಕಿ ತಾಲೂಕಿನ 247 ಆಶಾ ಕಾರ್ಯಕರ್ತರಿಗೆ ತಲಾ 2 ಸಾವಿರ ರೂ. ಪ್ರೋತ್ಸಾಹ ಧನವನ್ನು ಶಾಸಕ ಈಶ್ವರ ಖಂಡ್ರೆ ವೈಯಕ್ತಿಕವಾಗಿ ನೀಡಿದ್ದಾರೆ.

ಕೊರೊನಾ ಕಾಣಿಸಿಕೊಂಡ ದಿನದಿಂದಲೂ ಮನೆ ಮನೆಗೆ ತೆರಳಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಿ, ರೋಗ ಲಕ್ಷಣ ಇರುವವರನ್ನು ಪರೀಕ್ಷಿಸಿ, ಅವರಿಗೆ ಸೂಕ್ತ ಚಿಕಿತ್ಸೆ ಪಡೆಯಲು ಮನವೊಲಿಸು ಕಾರ್ಯವನ್ನು ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ.

ಸಂಬಳಕ್ಕೆ ಕಾಯುತ್ತಿರುವ 42 ಸಾವಿರ ಆಶಾ ಕಾರ್ಯಕರ್ತೆಯರುಸಂಬಳಕ್ಕೆ ಕಾಯುತ್ತಿರುವ 42 ಸಾವಿರ ಆಶಾ ಕಾರ್ಯಕರ್ತೆಯರು

ಅವರ ಕಾರ್ಯದಿಂದಾಗಿ ಜನರ ಪ್ರಾಣ ಉಳಿಯುತ್ತಿದೆ ಮತ್ತು ಸೋಂಕು ಸಮುದಾಯಕ್ಕೆ ಹರಡದಂತೆ ಬೇರು ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆ ಪರಿಗಣಿಸಿ ಈ ಸಹಾಯ ಮಾಡಲಾಗಿದೆ.

ಕೋಲಾರ; ಶಿಕ್ಷಕಿ, ಆಶಾ ಕಾರ್ಯಕರ್ತೆ ಬೆದರಿಸಿ ದರೋಡೆ ಕೋಲಾರ; ಶಿಕ್ಷಕಿ, ಆಶಾ ಕಾರ್ಯಕರ್ತೆ ಬೆದರಿಸಿ ದರೋಡೆ

Bhalki MLA Eshwar Khandre Helps 247 Asha Worker

ಕಳೆದ 3 ತಿಂಗಳಿಂದಲೂ ಆಶಾ ಕಾರ್ಯಕರ್ತರಿಗೆ ಸರ್ಕಾರದಿಂದ ಬರಬೇಕಾದ ಗೌರವ ಧನವೂ ಬರುತ್ತಿಲ್ಲ ಎಂಬ ವಿಷಯ ಈಶ್ವರ ಖಂಡ್ರೆಗೆ ತಿಳಿದಿತ್ತು. ಆದ್ದರಿಂದ ತಮ್ಮ ಕಡೆಯಿಂದ ಕಿರು ಅಭಿನಂದನಾ ಕಾಣಿಕೆಯನ್ನು ಕೊರೊನಾ ವಾರಿಯರ್‌ಗಳಾದ ಆಶಾ ಕಾರ್ಯಕರ್ತರಿಗೆ ನೀಡಲಾಗುತ್ತಿದೆ ಎಂದು ಶಾಸಕರು ಹೇಳಿದ್ದಾರೆ.

 ಮಧ್ಯರಾತ್ರಿ ಆಟೋ ಓಡಿಸಿಕೊಂಡು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ ಆಶಾ ಕಾರ್ಯಕರ್ತೆ ಮಧ್ಯರಾತ್ರಿ ಆಟೋ ಓಡಿಸಿಕೊಂಡು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ ಆಶಾ ಕಾರ್ಯಕರ್ತೆ

"ಸರ್ಕಾರ ಕೂಡಲೇ ಆಶಾ ಕಾರ್ಯಕರ್ತರಿಗೆ ಕೊಡಬೇಕಾಗಿರುವ ಸಂಭಾವನೆಯನ್ನು ಬಿಡುಗಡೆ ಮಾಡಬೇಕು. ಕೊರೊನಾ ವಾರಿಯರ್ಸ್‌ಗಳಾದ ಅವರಿಗೆ ಪ್ರೋತ್ಸಾಹ ಧನವನ್ನು ನೀಡಬೇಕು" ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Recommended Video

ಮಗನ ತೋಟದಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ HDD ದಂಪತಿ | Oneindia Kannada

ಶಾಸಕರ ಪರವಾಗಿ ಈಶ್ವರ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಪ್ರೋತ್ಸಾಹ ಧನ ವಿತರಣೆ ಮಾಡಿದರು. ಒಟ್ಟು 5 ಲಕ್ಷ ರೂ. ವಿತರಣೆ ಮಾಡಿದರು. ಭಾಲ್ಕಿ ತಹಸೀಲ್ದಾರ್, ಡಿವೈಎಸ್ಪಿ, ತಾಲೂಕಾ ಆರೋಗ್ಯ ಅಧಿಕಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

English summary
Working president of KPCC and Congress MLA from Bhalki Eshwar Khandre help the 247 asha worker with Rs 2000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X