ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಬೀದರ್‌ ನೇರ ವಿಮಾನ ಸೇವೆ ಆರಂಭ

|
Google Oneindia Kannada News

ಬೆಂಗಳೂರು, ಜೂ. 15: ಭಾರತದ ಪ್ರಮುಖ ನಗರಗಳಲ್ಲಿ ಈಗಾಗಲೇ ಸಕ್ರಿಯ ಕಾರ್ಯಾಚರಣೆ ನಡೆಸುತ್ತಿರುವ ವಿಮಾನಯಾನ ಸಂಸ್ಥೆ ಸ್ಟಾರ್‌ ಏರ್‌ ಬೆಂಗಳರು-ಬೀದರ್ ನಡುವೆ ನೇರ ವಿಮಾನ ಸೇವೆ ಆರಂಭಿಸಿದೆ.

ಮುಂಬೈ, ಬೆಂಗಳೂರು, ಅಹಮದಾಬಾದ್, ತಿರುಪತಿ, ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಸ್ಟಾರ್ ಏರ್ ಕಾರ್ಯ ನಿರ್ವಹಿಸುತ್ತಿದೆ. ಈಗ ಹೊಸ ಮಾರ್ಗದಲ್ಲಿ ವಿಮಾನ ಸಂಚಾರವನ್ನು ಜೂನ್ 15ರಂದು ಪ್ರಾರಂಭಿಸಿದೆ.

Bengaluru Airport: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಕರೆBengaluru Airport: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಕರೆ

ಕರ್ನಾಟಕದ ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸುವ ಬಲಿಷ್ಠ ಪ್ರಯತ್ನದ ಭಾಗವಾಗಿ ಸ್ಟಾರ್ ಏರ್ ಬ್ರಾಂಡ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಘೋಡಾವತ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ತನ್ನ ಹೊಸ ಪ್ರಾದೇಶಿಕ ತಾಣವಾದ ಬೀದರ್ ಅನ್ನು ಬೆಂಗಳೂರಿನಿಂದ ಸಂಪರ್ಕಿಸಿದೆ.

ವಾಸ್ತುಶೈಲಿಯಲ್ಲಿ ಶ್ರೀಮಂತ ಹೆಸರು ಪಡೆದಿರುವ ನಗರವಾದ ಬೀದರ್‌ಗೆ ಸದ್ಯ ಕಡಿಮೆ ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿವೆ. ಸ್ಟಾರ್ ಏರ್ ಸ್ಮಾರಕಗಳ ನಗರ ಬೀದರ್‌ಗೆ ಪ್ರವಾಸಿಗರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲು ಈ ಮಾರ್ಗದಲ್ಲಿ ಸಂಚಾರ ಆರಂಭಿಸಿದೆ.

ಬೆಳಗಾವಿ-ನವದೆಹಲಿ ನಡುವೆ ಪ್ರತಿದಿನ ವಿಮಾನ; ವೇಳಾಪಟ್ಟಿ ಬೆಳಗಾವಿ-ನವದೆಹಲಿ ನಡುವೆ ಪ್ರತಿದಿನ ವಿಮಾನ; ವೇಳಾಪಟ್ಟಿ

ಬಿದರಿ ಕರಕುಶಲ ಕಲೆಯ ಶ್ರೀಮಂತ ಇತಿಹಾಸ ಮತ್ತು ಸಿಖ್ ಸಮುದಾಯಕ್ಕೆ ಧಾರ್ಮಿಕ ಪ್ರಾಮುಖ್ಯತೆಗೆ ಹೆಸರುವಾಸಿಯಾದ ಬೀದರ್ ನಗರ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಪರಂಪರೆಯ ಸಂಗಮವಾಗಿ ಮಾರ್ಪಟ್ಟಿದೆ.

ಸದ್ಯ ಈ ಉಡಾವಣೆಯೊಂದಿಗೆ ಸ್ಟಾರ್ ಏರ್ ಬೀದರ್‌ನ ತಂಪಾದ ಮತ್ತು ಸುಂದರವಾದ ಬೆಟ್ಟಗಳಿಗೆ ತನ್ನ ಎಂಬ್ರೇರ್ 145 ಜೆಟ್‌ಗಳನ್ನು ಹಾರಿಸಲಿದೆ. ಇದು ರಜೆಗೆ ಪರಿಪೂರ್ಣ ತಾಣವಾಗಿದೆ. ಬೀದರ್‌ಗೆ ವಾಯು ಸಂಪರ್ಕವು ಆರ್ಥಿಕ ಚಟುವಟಿಕೆ ಮತ್ತು ಉದ್ಯೋಗದ ಬೆಳವಣಿಗೆಯ ಜೊತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ.

ಜನರಿಗೆ ವಿಮಾನಯಾನದ ಸುಲಭ ಅನುಕೂಲ

ಜನರಿಗೆ ವಿಮಾನಯಾನದ ಸುಲಭ ಅನುಕೂಲ

ಸ್ಟಾರ್ ಏರ್ ವ್ಯವಸ್ಥಾಪಕ ನಿರ್ದೇಶಕ ಶ್ರೆನಿಕ್ ಘೋಡಾವತ್ ಮಾತನಾಡಿ, "ಬೀದರ್ ಅನ್ನು ನಮ್ಮ 18 ನೇ ತಾಣವಾಗಿ ಘೋಷಿಸಲು ನಾವು ಸಂತೋಷಪಡುತ್ತೇವೆ. ಬೀದರ್‌ನಿಂದ ಬೆಂಗಳೂರಿಗೆ ವ್ಯಾಪಾರ ಮತ್ತು ವಿರಾಮದ ರಜೆ ಪ್ರಯಾಣವನ್ನು ಸಕ್ರಿಯಗೊಳಿಸಲಾಗುತ್ತದೆ. ಈ ನಗರಗಳ ನಡುವೆ ಬೆಳವಣಿಗೆ ಸಾಮಾನ್ಯ ಜನರಿಗೆ ವಿಮಾನಯಾನದ ಸುಲಭ ಅನುಕೂಲವನ್ನು ಒದಗಿಸಲು ನಾವು ಉದ್ದೇಶಿಸಿರುವ ಕಾರಣ ಈಗ ಪ್ರಾದೇಶಿಕ ಸ್ಥಳಗಳ ಬೆಳವಣಿಗೆಗೆ ಕೊಡುಗೆ ನೀಡಲು ನಾವು ಹೆಮ್ಮೆಪಡುತ್ತೇವೆ. ಮುಂಬರುವ ದಿನಗಳಲ್ಲಿ ಭಾರತದ ಇನ್ನೂ ಹಲವು ನಗರಗಳಿಗೆ ಸೇವೆ ನೀಡಲಾಗುವುದು" ಎಂದು ಹೇಳಿದರು.

ಉಡಾನ್ ಯೋಜನೆಯಡಿಯಲ್ಲಿ ಪ್ರಯಾಣ

ಉಡಾನ್ ಯೋಜನೆಯಡಿಯಲ್ಲಿ ಪ್ರಯಾಣ

ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಬೀದರ್ ಮತ್ತು ಬೆಂಗಳೂರು ನಡುವೆ ಸ್ಟಾರ್ ಏರ್ ವಿಮಾನ ಕಾರ್ಯನಿರ್ವಹಿಸಲಿದೆ. ಜನಪ್ರಿಯ ಉಡಾನ್ ಯೋಜನೆಯಡಿಯಲ್ಲಿ ಪ್ರಯಾಣಿಕರಿಗೆ ಅತ್ಯಂತ ಸಮಂಜಸವಾದ ಪ್ರಯಾಣ ದರಗಳೊಂದಿಗೆ ಈ ವಿಮಾನಗಳ ವೇಳಾಪಟ್ಟಿಯನ್ನು ಯೋಜಿಸಲಾಗಿದೆ. ಬೆಂಗಳೂರು ಮತ್ತು ಬೀದರ್ ನಡುವಿನ ವಿಮಾನ ಸೇವೆಯು ಇತರ ಸಾರಿಗೆ ವಿಧಾನಗಳ ಮೂಲಕ 8- 12 ಗಂಟೆ. ಆದರೆ ಕೇವಲ 1 ಗಂಟೆ 10 ನಿಮಿಷಗಳಲ್ಲಿ 520 ಕಿ.ಮೀ. ದೂರವನ್ನು ವಿಮಾನದ ಮೂಲಕ ತಲುಪಬಹುದು. ಪ್ರವಾಸಿಗರು ಬೀದರ್‌ಗೆ ಸಮೀಪದಲ್ಲಿರುವುದರಿಂದ ಕಲಬುರಗಿ, ನಾಂದೇಡ್, ನಿಜಾಮಾಬಾದ್ ಮತ್ತು ಹೈದರಾಬಾದ್‌ಗೂ ಭೇಟಿ ನೀಡಬಹುದು.

ಮಾಹಿತಿಗಾಗಿ ವೆಬ್‌ ಸೈಟ್‌ಗೆ ಭೇಟಿ ಕೊಡಿ

ಮಾಹಿತಿಗಾಗಿ ವೆಬ್‌ ಸೈಟ್‌ಗೆ ಭೇಟಿ ಕೊಡಿ

ಪ್ರಸ್ತುತ ಸ್ಟಾರ್ ಏರ್ ಅಹಮದಾಬಾದ್, ಅಜ್ಮೀರ್ (ಕಿಶನ್‌ಗಢ), ಬೆಂಗಳೂರು, ಬೆಳಗಾವಿ, ದೆಹಲಿ (ಹಿಂಡಾನ್), ಹುಬ್ಬಳ್ಳಿ, ಇಂದೋರ್, ಜೋಧ್‌ಪುರ, ಕಲಬುರಗಿ, ಮುಂಬೈ, ನಾಸಿಕ್, ಸೂರತ್, ತಿರುಪತಿ, ಜಾಮ್‌ನಗರ, ಹೈದರಾಬಾದ್ ನಾಗ್ಪುರ, ಭುಜ್ ಮತ್ತು ಬೀದರ್ ಸೇರಿದಂತೆ 18 ಭಾರತೀಯ ಸ್ಥಳಗಳಿಗೆ ನಿಗದಿತ ವಿಮಾನ ಸೇವೆಗಳನ್ನು ನೀಡುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್ ಸೈಟ್ ನೋಡಬಹುದಾಗಿದೆ. ಅಲ್ಲದೆ ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟಾರ್ ಏರ್‌ ಅನ್ನು ಫಾಲೋ ಮಾಡಿ ಮಾಹಿತಿ ಪಡೆಯಬಹುದು.

1993 ರಲ್ಲಿ ಎಸ್‌ಜಿಜಿ ಪ್ರಾರಂಭ

1993 ರಲ್ಲಿ ಎಸ್‌ಜಿಜಿ ಪ್ರಾರಂಭ

ಸಂಜಯ್ ಘೋಡಾವತ್ ಗ್ರೂಪ್ ಒಂದು ಪ್ರಮುಖ ಭಾರತೀಯ ವ್ಯಾಪಾರ ಸಮೂಹವಾಗಿದೆ. ಇದು ವಿವಿಧ ಉನ್ನತ ವ್ಯಾಪಾರದ ಅಸ್ತಿತ್ವವನ್ನು ಹೊಂದಿದೆ. ವಾಯುಯಾನ, ಗ್ರಾಹಕ ಉತ್ಪನ್ನಗಳು, ಶಿಕ್ಷಣ, ಶಕ್ತಿ, ಗಣಿಗಾರಿಕೆ, ಚಿಲ್ಲರೆ ಮತ್ತು ಜವಳಿ ಅದರ ಕೆಲವು ಪ್ರಮುಖ ವ್ಯಾಪಾರ ಕ್ಷೇತ್ರಗಳಾಗಿವೆ. ಘೋಡಾವತ್ ಗ್ರೂಪ್ ಅನ್ನು 1993 ರಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ ಇದು ಅದರ ಸಂಸ್ಥಾಪಕ ಮತ್ತು ಅಧ್ಯಕ್ಷ ಸಂಜಯ್ ಘೋಡಾವತ್ ಅವರ ಉಸ್ತುವಾರಿಯಲ್ಲಿ ಪ್ರಭಾವಶಾಲಿ ಬೆಳವಣಿಗೆಯನ್ನು ಕಂಡಿದೆ. ಇದು ಜಾಗತಿಕವಾಗಿ ಲಕ್ಷಾಂತರ ಗ್ರಾಹಕರ ಬಲವಾದ ನೆಲೆಯನ್ನು ಹೊಂದಿದೆ. 10,000 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಮತ್ತು 16,000 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಇದು ಹೊಂದಿದೆ.

Recommended Video

Mekedatu Project ನಲ್ಲಿ ಕರ್ನಾಟಕ ರಾಜಕೀಯ ನಾಯಕರು ಮಾಡಿರೋ ತಪ್ಪುಗಳು| *India| OneIndia Kannada

English summary
Star Air which is already active in major cities of India, has now launched direct flight service from Bengaluru to Bidar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X