ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸವಕಲ್ಯಾಣ ಕ್ಷೇತ್ರ ಫಲಿತಾಂಶ: ಬಿಜೆಪಿ ಅಭ್ಯರ್ಥಿಗೆ ಮುನ್ನಡೆ

|
Google Oneindia Kannada News

ಬೀದರ್, ಮೇ 2: ತೀವ್ರ ಕುತೂಹಲ ಕೆರಳಿಸಿರುವ ಬಸವಕಲ್ಯಾಣ ಉಪ ಚುನಾವಣೆ ಮತ ಎಣಿಕೆ ಕಾರ್ಯ ಬೀದರ್ ನಗರದ ಬಿ.ವಿ ಭೂಮರೆಡ್ಡಿ ಕಾಲೇಜು ಮೈದಾನದಲ್ಲಿ ಆರಂಭವಾಗಿದ್ದು, ಡಜನ್ ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.

ತೀವ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದ ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಬೇಕಿದ್ದು, ಆದರೆ ಮತ ಎಣಿಕೆ ಕಾರ್ಯ ತಾಂತ್ರಿಕ ಕಾರಣದಿಂದ ಇನ್ನೂ ಆರಂಭವಾಗಿಲ್ಲ.

Karnataka By Elections Results 2021 Live Updates: ಮತ ಎಣಿಕೆ ಆರಂಭ, ಯಾರಿಗೆ ಮುನ್ನಡೆ?Karnataka By Elections Results 2021 Live Updates: ಮತ ಎಣಿಕೆ ಆರಂಭ, ಯಾರಿಗೆ ಮುನ್ನಡೆ?

ಕೆಲವು ತಾಂತ್ರಿಕ ತೊಂದರೆಗಳ ಕಾರಣದಿಂದ ಮತ ಏಣಿಕೆ ಕಾರ್ಯ ತಡವಾಗಿದೆ ಎಂದು ಹೇಳಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಅಂಚೆ ಮತ ಏಣಿಕೆ ಕಾರ್ಯ ಆರಂಭವಾಗಿದೆ.

https://kannada.oneindia.com/news/bidar/basavakalyana-by-election-result-2021-voting-count-delayed-221666.html

ಬಸವಕಲ್ಯಾಣ ಉಪ ಚುನಾವಣೆಯ ಮತ ಎಣಿಕೆಯ ಕಾರ್ಯಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಬೀದರ್ ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ತಿಳಿಸಿದ್ದಾರೆ.

ಬೀದರ್ ನಗರದ ಬಿ.ವಿ.ಭೂಮರೆಡ್ಡಿ ಕಾಲೇಜಿನಲ್ಲಿ ಮೇ.2ರಂದು ಬೆಳಗ್ಗೆ 8ರಿಂದ ಮೂರು ಕೌಂಟಿಂಗ್ ಕೇಂದ್ರದಲ್ಲಿ ಮತ ಎಣಿಕೆಯು ಆರಂಭವಾಗಲಿದೆ. ಪ್ರತಿ ಕೌಂಟಿಂಗ್ ಕೇಂದ್ರದಲ್ಲಿ ತಲಾ ನಾಲ್ಕು ಟೇಬಲ್‌ಗಳನ್ನು ಅಳವಡಿಸಲಾಗಿದೆ.

Basavakalyana By Election Result 2021: Voting Count Delayed

ಕಾಂಗ್ರೆಸ್ ಶಾಸಕರಾಗಿದ್ದ ಬಿ. ನಾರಾಯಣರಾವ್ ಅವರ ನಿಧನದಿಂದ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಲಾಗಿತ್ತು.

ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆ ಮತ ಎಣಿಕೆಯ ಮೊದಲ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಒಂದು ಗಂಟೆ ತಡವಾಗಿ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ 3736, ಕಾಂಗ್ರೆಸ್ ಅಭ್ಯರ್ಥಿ 1562 ಹಾಗೂ ಜೆಡಿಎಸ್ 254 ಮತಗಳು ಮಾತ್ರ ಲಭಿಸಿವೆ. ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್ 2174 ಮತಗಳ ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ.

Basavakalyana By Election Result 2021: Voting Count Delayed

ಬಿಜೆಪಿ ಅಭ್ಯರ್ಥಿಗೆ ಮುಂದುವರೆದ ಮುನ್ನಡೆ
ಬಿಜೆಪಿ ಅಭ್ಯರ್ಥಿ ಒಟ್ಟು 6440 ಮತಗಳು ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಮಲ್ಲಮ್ಮ ಬಿ ನಾರಾಯಣರಾವ್‌ಗೆ 3188 ಹಾಗೂ ಜೆಡಿಎಸ್ ಅಭ್ಯರ್ಥಿ ಯಾಸ್ರಬ್ ಖಾದ್ರಿಗೆ ಕೇವಲ 549 ಮತಗಳು ಮಾತ್ರ ಲಭಿಸಿವೆ. ಬಿಜೆಪಿ ಅಭ್ಯರ್ಥಿಯ ಒಟ್ಟು ಮುನ್ನಡೆ 3252.

ಬಿಜೆಪಿ ಬಂಡಾಯ ಅಭ್ಯರ್ಥಿ ಖುಬಾಗೆ ಭಾರೀ ಹಿನ್ನೆಡೆ
ಬಸವಕಲ್ಯಾಣ ಉಪ ಚುನಾವಣೆಗೆ ಬಿಜೆಪಿ ಟಿಕೆಟ್ ವಂಚಿತ ಮಾಜಿ ಶಾಸಕ ಮಲ್ಲಿಕಾರ್ಜುನ ಖುಬಾ ಬಂಡಾಯವಾಗಿ ಸ್ಪರ್ಧಿಸಿ ಸಾಕಷ್ಟು ಪೈಪೋಟಿ ನೀಡಿದರಾದರೂ, ಮತ ಗಳಿಕೆಯಲ್ಲಿ ತೀರಾ ಹಿನ್ನಡೆ ಅನುಭವಿಸುತ್ತಿದ್ದಾರೆ.

ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಹುಟ್ಟಿಸಿದ ಮಲ್ಲಿಕಾರ್ಜುನ ಖುಬಾ ಎರಡು ಸುತ್ತಿನ ಮತ ಎಣಿಕೆಯಲ್ಲಿ ಕೇವಲ 618 ಮತಗಳನ್ನು ಮಾತ್ರ ಪಡೆದಿದ್ದಾರೆ. ಇದು ಮುನ್ನಡೆ ಸಾಧಿಸಿದ ಬಿಜೆಪಿ ಅಭ್ಯರ್ಥಿಗಿಂತ 5822 ಮತಗಳಿಂದ ಹಿಂದೆ ಬಿದ್ದಿದ್ದಾರೆ. ಎರಡು ಬಾರಿ ಬಸವಕಲ್ಯಾಣ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಗೆದ್ದು ಬಂದಿದ್ದರು. ಕಳೆದ ಬಾರಿ ದಿವಂಗತ ಶಾಸಕ ಬಿ.ನಾರಾಯಣರಾವ್ ಎದುರು ಸೋಲನುಭವಿಸಿದರು. ಆದರೆ, ಗಣನೀಯ ಮತಗಳನ್ನು ಪಡೆದಿದ್ದರು.

English summary
Basavakalyana By Election Result 2021: Voting Count Delayed due to some technical issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X