ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸವಕಲ್ಯಾಣ ಉಪ ಚುನಾವಣೆ; ಒಳ ಒಪ್ಪಂದ ರಹಸ್ಯ ಬಯಲು!

|
Google Oneindia Kannada News

ಬೀದರ್, ಮಾರ್ಚ್ 26; ಮೂರು ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಜೆಡಿಎಸ್ ಪಕ್ಷ ಬಸವಕಲ್ಯಾಣದಲ್ಲಿ ಮಾತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ಕುರಿತು ಟೀಕಿಸಿದ್ದಾರೆ.

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಏಪ್ರಿಲ್ 17ರಂದು ನಡೆಯಲಿದೆ. ಜೆಡಿಎಸ್ ಅಭ್ಯರ್ಥಿಯಾಗಿ ಯಸ್ರಬ್ ಅಲಿ ಖಾದ್ರಿ ಗುರುವಾರ ನಾಮಪತ್ರ ಸಲ್ಲಿಸಿದರು. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕ್ಷೇತ್ರದಲ್ಲಿ ಸಮಾವೇಶ ನಡೆಸುವ ಮೂಲಕ ಪ್ರಚಾರ ಆರಂಭಿಸಿದರು.

ಬಸವಕಲ್ಯಾಣ; ಉಪ ಚುನಾವಣಾ ಕಣಕ್ಕಿಳಿದ ಸ್ವಾಮೀಜಿ ಬಳಿ 45 ಕೆಜಿ ಚಿನ್ನ! ಬಸವಕಲ್ಯಾಣ; ಉಪ ಚುನಾವಣಾ ಕಣಕ್ಕಿಳಿದ ಸ್ವಾಮೀಜಿ ಬಳಿ 45 ಕೆಜಿ ಚಿನ್ನ!

ಶುಕ್ರವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಜೆಡಿಎಸ್ ವಿರುದ್ಧ ಆರೋಪವನ್ನು ಮಾಡಿದ್ದಾರೆ. "ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 40,000 ಅಲ್ಪಸಂಖ್ಯಾತ ಮತಗಳಿವೆ. ಜೆಡಿಎಸ್ ನವರು ಬಿಜೆಪಿ ಜೊತೆ ಒಳ‌ಒಪ್ಪಂದ ಮಾಡಿಕೊಂಡು ಮುಸ್ಲಿಂ‌ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ನಮ್ಮ ಮತಗಳನ್ನು ವಿಭಜಿಸುವ ಹುನ್ನಾರ ಮಾಡುತ್ತಿದ್ದಾರೆ. ಇದನ್ನು ಕ್ಷೇತ್ರದ ಜನ ಅರ್ಥಮಾಡಿಕೊಳ್ಳಬೇಕು" ಎಂದು ಆರೋಪಿಸಿದ್ದಾರೆ.

ಮೂರು ಕ್ಷೇತ್ರಗಳ ಉಪ ಚುನಾವಣೆ; ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಮೂರು ಕ್ಷೇತ್ರಗಳ ಉಪ ಚುನಾವಣೆ; ಬಿಜೆಪಿ ಅಭ್ಯರ್ಥಿಗಳ ಪಟ್ಟಿ

Basavakalyan By Election Siddaramaiah Tweet Against JDS

ಬಸವಕಲ್ಯಾಣದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ್ದ ಎಚ್. ಡಿ. ಕುಮಾರಸ್ವಾಮಿ, "ಸಮಾನತೆ ಸಂದೇಶ ಸಾರಿದ ಬಸವಣ್ಣನವರ ಕಾರ್ಯಕ್ಷೇತ್ರವಾದ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸುವ ಮೂಲಕ ನಮ್ಮ ಪಕ್ಷ ಬಲಿಷ್ಠವಾಗಿದೆ ಎಂಬ ಸಂದೇಶ ರಾಜ್ಯಕ್ಕೆ ರವಾನಿಸುವ ಉದ್ದೇಶವಿದೆ" ಎಂದು ಹೇಳಿದರು.

ಬಸವಕಲ್ಯಾಣ ಉಪ ಚುನಾವಣೆ; ಯಡಿಯೂರಪ್ಪ ಸ್ಪಷ್ಟನೆ ಬಸವಕಲ್ಯಾಣ ಉಪ ಚುನಾವಣೆ; ಯಡಿಯೂರಪ್ಪ ಸ್ಪಷ್ಟನೆ

ಬಸವಕಲ್ಯಾಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಲ್ಲಮ್ಮ, ಬಿಜೆಪಿಯಿಂದ ಶರಣು ಸಲಗಾರ್ ಅಭ್ಯರ್ಥಿಯಾಗಿದ್ದಾರೆ. ಏಪ್ರಿಲ್ 17ರಂದು ಚುನಾವಣೆ ನಡೆಯಲಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

Recommended Video

ನಾಳೆ ಇಂದ ನನ್ನ ಆಟ ಶುರು ಎಂದ ರಮೇಶ್ ಜಾರಕಿಹೊಳಿ | Oneindia Kannada

2018ರಲ್ಲಿ ಕಾಂಗ್ರೆಸ್‌ನ ಬಿ. ನಾರಾಯಣರಾವ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಕೋವಿಡ್ ಸೋಂಕಿತರಾಗಿದ್ದ ಅವರು ಮೃತಪಟ್ಟ ಕಾರಣ ಉಪ ಚುನಾವಣೆ ಎದುರಾಗಿದೆ. ಬಿ. ನಾರಾಯಣರಾವ್ ಪತ್ನಿ ಮಲ್ಲಮ್ಮಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.

English summary
Opposition leader Siddaramaiah tweet against JD(S) in the issue of the Basavakalyan by election. By poll scheduled on April 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X