ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ರೇಕಿಂಗ್; ಮಲ್ಲಿಕಾರ್ಜುನ ಖೂಬಾ ಬಿಜೆಪಿಯಿಂದ ಉಚ್ಛಾಟನೆ

|
Google Oneindia Kannada News

ಬೀದರ್, ಏಪ್ರಿಲ್ 17; ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ.

ಉಪ ಚುನಾವಣೆಗೆ ಬಿಜೆಪಿ ಶರಣು ಸಲಗರಗೆ ಟಿಕೆಟ್ ನೀಡಿದೆ. ಇದರಿಂದಾಗಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

Karnataka By Polls 2021 Live: ಮೂರು ಕ್ಷೇತ್ರಗಳ ಉಪಚುನಾವಣೆ, ಶಾಂತಿಯುತ ಮತದಾನKarnataka By Polls 2021 Live: ಮೂರು ಕ್ಷೇತ್ರಗಳ ಉಪಚುನಾವಣೆ, ಶಾಂತಿಯುತ ಮತದಾನ

Basavakalyan By Election BJP Expels Rebel Candidate Mallikarjun Sidramappa Khuba

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾರನ್ನು ಮನವೊಲಿಕೆ ಮಾಡಲು ಪ್ರಯತ್ನ ನಡೆಸಲಾಯಿತು. ಆದರೆ, ನಾಮಪತ್ರವನ್ನು ಅವರು ವಾಪಸ್ ಪಡೆಯಲಿಲ್ಲ.

ಬಸವಕಲ್ಯಾಣ; 10 ಕೋಟಿ ಆರೋಪಕ್ಕೆ ಎಚ್‌ಡಿಕೆ ಟ್ವೀಟ್ ಬಾಣ! ಬಸವಕಲ್ಯಾಣ; 10 ಕೋಟಿ ಆರೋಪಕ್ಕೆ ಎಚ್‌ಡಿಕೆ ಟ್ವೀಟ್ ಬಾಣ!

ಮಲ್ಲಿಕಾರ್ಜುನ ಖೂಬಾ ಅವರು ಎರಡು ಬಾರಿ ಜೆಡಿಎಸ್‌ನಿಂದ ಶಾಸಕರಾಗಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಕಾಂಗ್ರೆಸ್‌ನ ಬಿ. ನಾರಾಯಣರಾವ್ ವಿರುದ್ಧ ಸೋತಿದ್ದರು.

ಬಸವಕಲ್ಯಾಣ ಉಪ ಚುನಾವಣೆ; ಬಿಜೆಪಿಗೆ ಬಂಡಾಯದ ಬಿಸಿಬಸವಕಲ್ಯಾಣ ಉಪ ಚುನಾವಣೆ; ಬಿಜೆಪಿಗೆ ಬಂಡಾಯದ ಬಿಸಿ

ಶರಣು ಸಲಗರ ಮತ್ತು ಮಲ್ಲಿಕಾರ್ಜುನ ಖೂಬಾ ಇಬ್ಬರು ಲಿಂಗಾಯತ ಸಮುದಾಯಕ್ಕೆ ಸೇರಿದವರು. ಶನಿವಾರ ಬಸವಕಲ್ಯಾಣ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ.

ಆದೇಶದಲ್ಲಿ ಏನಿದೆ?: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನೀವು ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಶರಣು ಸಲಗಾರ ಇವರ ವಿರುದ್ಧ ಬಂಡುಕೋರ ಅಭ್ಯರ್ಥಿಯಾಗಿ ನಿಂತು ನಮ್ಮ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದೀರಿ.

ಪಕ್ಷದಿಂದ ಎಲ್ಲಾ ರೀತಿಯ ಕೊನೆಯ ಗಳಿಗೆಯ ಪ್ರಯತ್ನಗಳು ನಡೆದಾಗಲೂ ಕೂಡಾ ನೀವು ಚುನಾವಣಾ ಕಣದಿಂದ ಹಿಂದೆ ಸರಿಯಲಿಲ್ಲ.

Recommended Video

ಕೊರೊನಾ ವಿರುದ್ಧ ಹೋರಾಟಕ್ಕೆ ಸಾಥ್ ನೀಡಿದ ರೈಲ್ವೆ ಇಲಾಖೆ.. ಇಂದಿನಿಂದ Oxygen Express ಸಂಚಾರ | Oneindia Kannada

ಕಾರಣ ಪಕ್ಷ ವಿರೋಧಿ ಚಟುವಟಿಕೆಗಾಗಿ ನಿಮ್ಮನ್ನು ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.

English summary
Mallikarjun Sidramappa Khuba has been expelled from the BJP for anti-parties activities. Mallikarjun Khuba contest for Basavakalyan by election as rebel candidate after BJP issued ticket for Sharanu Salagara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X