ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲ್ಲಾ ಲೆಕ್ಕಾಚಾರ ಉಲ್ಟಾ: ಬಸವಕಲ್ಯಾಣ ಬಿಜೆಪಿ ಟಿಕೆಟ್ ಬಹುತೇಕ ಫೈನಲ್: ಈ ಇಬ್ಬರಲ್ಲಿ ಒಬ್ಬರಿಗೆ ಪಕ್ಕಾ?

|
Google Oneindia Kannada News

ಕೇಂದ್ರ ಚುನಾವಣಾ ಆಯೋಗ ಶುಕ್ರವಾರ (ಫೆ 26) ಸಂಜೆ ಪತ್ರಿಕಾಗೋಷ್ಠಿಯನ್ನು ಕರೆದಿದ್ದು ಹಲವು ರಾಜ್ಯಗಳ ಅಸೆಂಬ್ಲಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ. ಜೊತೆಗೆ, ಕರ್ನಾಟಕದ ಉಪಚುನಾವಣೆಗೂ ದಿನಾಂಕ ನಿಗದಿ ಆಗಬಹುದು.

ಬೆಳಗಾವಿ ಲೋಕಸಭಾ, ಸಿಂಧಗಿ, ಮಸ್ಕಿ ಮತ್ತು ಬಸವಕಲ್ಯಾಣ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆ ನಡೆಯಬೇಕಿದೆ. ಬಿಜೆಪಿ ಈಗಾಗಲೇ ಈ ಪೈಕಿ ಮೂರು ಕ್ಷೇತ್ರಕ್ಕೆ ಉಸ್ತುವಾರಿಗಳನ್ನು ನೇಮಿಸಿದೆ.

"ನಾನು ಡಿಸಿಎಂ ಆಗಲು ಶಿವರಾಮ್ ಹೆಬ್ಬಾರ್ ಬಳಗದ ಸಹಕಾರವೇ ಕಾರಣ''

ಪ್ರಮುಖವಾಗಿ, ಬಸವಕಲ್ಯಾಣ ಕ್ಷೇತ್ರಕ್ಕೆ ಸುಮಾರು ಹದಿನೆಂಟು ಮುಖಂಡರು ಬಿಜೆಪಿ ಟಿಕೆಟ್ ಗಾಗಿ ಲಾಬಿ ನಡೆಸುತ್ತಿದ್ದಾರೆ. ರಾಜ್ಯದ ಶಿಫಾರಸಿಗೆ ಕೇಂದ್ರದ ಬಿಜೆಪಿ ವರಿಷ್ಠರು ಮಣೆಹಾಕಲಿದ್ದಾರೆಯೇ ಎನ್ನುವುದು ಟಿಕೆಟ್ ಘೋಷಣೆಯಾದ ನಂತರವಷ್ಟೇ ಗೊತ್ತಾಗಲಿದೆ.

 ಬಸವ ಕಲ್ಯಾಣ; ಉಪ ಚುನಾವಣೆ ಟಿಕೆಟ್ ಬೇಡ ಎಂದ ಖೇಣಿ! ಬಸವ ಕಲ್ಯಾಣ; ಉಪ ಚುನಾವಣೆ ಟಿಕೆಟ್ ಬೇಡ ಎಂದ ಖೇಣಿ!

ಮಸ್ಕಿ ಕ್ಷೇತ್ರಕ್ಕೆ ಬಿ.ವೈ.ವಿಜಯೇಂದ್ರ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಆ ಮೂಲಕ, ವಿಜಯೇಂದ್ರ ಕಣದಲ್ಲಿ ಇರುವುದಿಲ್ಲ ಎನ್ನುವ ಸಂದೇಶ ರವಾನೆಯಾಗಿತ್ತು. ಆದರೆ, ತಾಜಾ ಬೆಳವಣಿಗೆ ಬೇರೆಯದನ್ನೇ ಹೇಳುತ್ತಿದೆ.

ಬಸವಕಲ್ಯಾಣ ಅಸೆಂಬ್ಲಿ ಚುನಾವಣೆ

ಬಸವಕಲ್ಯಾಣ ಅಸೆಂಬ್ಲಿ ಚುನಾವಣೆ

ಇದುವರೆಗೆ ನಡೆದ ಹದಿನಾಲ್ಕು ಬಸವಕಲ್ಯಾಣ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು ಒಂದೇ ಬಾರಿ. ಈ ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಮತ್ತು ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ಮುಂದಾಲೋಚನೆಯನ್ನು ಇಟ್ಟುಕೊಂಡು ಮುಖ್ಯಮಂತ್ರಿಗಳು ಮರಾಠಾ ಪ್ರಾಧಿಕಾರವನ್ನು ರಚಿಸಿದ್ದರು. ಈ ಕ್ಷೇತ್ರದಲ್ಲಿ ಮರಾಠಿ ಮತಗಳು ನಿರ್ಣಾಯಕ ಪಾತ್ರವನ್ನು ವಹಿಸಲಿದೆ.

ಲಕ್ಷ್ಮಣ ಸವದಿ

ಲಕ್ಷ್ಮಣ ಸವದಿ

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆ ಅಥಣಿ ಕ್ಷೇತ್ರದಲ್ಲಿ ಪರಾಭವಗೊಂಡಿದ್ದರೂ ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿಯಾಗಿ ಸಚಿವರಾಗಿದ್ದರು. ಇದಾದ ನಂತರ ವಿಧಾನ ಪರಿಷತ್ತಿಗೆ ಸವದಿ ನೇಮಕಗೊಂಡಿದ್ದರು. ಈಗ, ಸವದಿ ಅವರ ಹೆಸರು ಅಭ್ಯರ್ಥಿಯಾಗಿ ಓಡಾಡುತ್ತಿದೆ. ಈ ವಿಚಾರವನ್ನು ಅವರೇ ಬಹಿರಂಗ ಪಡಿಸಿದ್ದಾರೆ.

ಬಸವಕಲ್ಯಾಣ ಕ್ಷೇತ್ರದ ಟಿಕೆಟ್ ನಲ್ಲಿ ವಿಜಯೇಂದ್ರ ಹೆಸರು ಮಂಚೂಣಿಯಲ್ಲಿ

ಬಸವಕಲ್ಯಾಣ ಕ್ಷೇತ್ರದ ಟಿಕೆಟ್ ನಲ್ಲಿ ವಿಜಯೇಂದ್ರ ಹೆಸರು ಮಂಚೂಣಿಯಲ್ಲಿ

ಇದರ ಜೊತೆಗೆ ಮಸ್ಕಿ ಕ್ಷೇತ್ರಕ್ಕೆ ಉಸ್ತುವಾರಿಯನ್ನಾಗಿ ವಿಜಯೇಂದ್ರ ಅವರ ಹೆಸರು ಓಡಾಡುತ್ತಿದ್ದರೂ, ಬಸವಕಲ್ಯಾಣ ಕ್ಷೇತ್ರದ ಟಿಕೆಟ್ ನಲ್ಲಿ ವಿಜಯೇಂದ್ರ ಅವರ ಹೆಸರು ಮಂಚೂಣಿಯಲ್ಲಿದೆ ಎನ್ನುವ ಬಲವಾದ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಸವದಿ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದಾರೆ.

ವಿಜಯೇಂದ್ರ ಅಥವಾ ಸವದಿ

ವಿಜಯೇಂದ್ರ ಅಥವಾ ಸವದಿ

ಕಳೆದ ಕೆಲವು ತಿಂಗಳಿನಿಂದ ಸಾಲುಸಾಲು ಸಭೆಗಳನ್ನು ನಡೆಸುತ್ತಿರುವ ವಿಜಯೇಂದ್ರ, ಕಾರ್ಯಕರ್ತರನ್ನೂ ಭೇಟಿಯಾಗುತ್ತಿದ್ದಾರೆ. "ಒಟ್ಟು ಹದಿನೆಂಟು ಟಿಕೆಟ್ ಆಕಾಂಕ್ಷಿಗಳಿದ್ದಾರೆ, ಅದರಲ್ಲಿ ಒಬ್ಬರಿಗೆ ಟಿಕೆಟ್ ನೀಡಲಾಗುವುದು, ವಿಜಯೇಂದ್ರ ಅಥವಾ ನಾನು ಈ ಇಬ್ಬರಲ್ಲಿ ಯಾರಾದರೂ ಕಣಕ್ಕಿಳಿಯಬಹುದು, ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದು ಪಕ್ಷದ ನಿರ್ಧಾರ"ಎಂದು ಸವದಿ ಹೇಳಿದ್ದಾರೆ.

English summary
Basavakalyan: BJP Almost Finalized Ticket For Assembly Bypoll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X