• search
 • Live TV
ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ ವೈರಲ್: ಬೀದರ್‌ನಲ್ಲಿ ಮದ್ಯ ಮಾರಾಟ ತಡೆಯಲೆತ್ನಿಸಿದ ಪೊಲೀಸರ ಮೇಲೆ ಹಲ್ಲೆ

By ಬೀದರ್ ಪ್ರತಿನಿಧಿ
|
Google Oneindia Kannada News

ಬೀದರ್, ಮೇ 20: ಬೀದರ್‌ನ ಅಕ್ರಮ ಮದ್ಯ ಮಾರಾಟ ಮಳಿಗೆಯ ಮೇಲೆ ಇತ್ತೀಚೆಗೆ ದಾಳಿ ನಡೆಸಿದ ಅಬಕಾರಿ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಘಟನೆಯ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಬೀದರ್‌ನ ಪ್ರತಾಪನಗರ ಪ್ರದೇಶದ ಆರ್‌ಟಿಒ ಕಚೇರಿ ಮುಂದೆ ಭಾನುವಾರ (ಮೇ 16)ರಂದು ಘಟನೆ ನಡೆದಿದ್ದು, ಘಟನೆಯಲ್ಲಿ ಅಬಕಾರಿ ಪಿಎಸ್ಐ ಕೌಶಲ್ಯಾಗೆ ಗಾಯಗಳಾಗಿದೆ. ಅಬಕಾರಿ ಇಲಾಖೆಯ ಜೀಪ್ ಮುಂಭಾಗದ ಗಾಜು ಒಡೆದಿದೆ.

ಈ ಘಟನೆ ಸಂಬಂಧ ಆರೋಪಿಗಳಾದ ಸಂಜುಕುಮಾರ್ ಧನ್ನೂರ ಹಾಗೂ ನಂದಕುಮಾರನನ್ನು ನೂತನ ನಗರ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ. ಘಟನೆ ಕುರಿತು ಅಬಕಾರಿ ಪಿಎಸ್ಐ ಕೌಶಲ್ಯ ದೂರು ನೀಡಿದ್ದರು.

   Rahul Dravid ಅವರು ಈಗ ಅಧಿಕೃತವಾಗಿ ನಮ್ಮ ಕೋಚ್ | Oneindia Kannada

   ಈಗ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಬ್ಬರು ಆರೋಪಿ ಸಹೋದರರು ಅಬಕಾರಿ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿರುವುದು ಹಾಗೂ ಅವ್ಯಾಚವಾಗಿ ನಿಂದಿಸಿರುವುದು ಬೆಳಕಿಗೆ ಬಂದಿದೆ. ಬಾಯಿಗೆ ಬಂದ ಹಾಗೇ ಬೈದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

   English summary
   Attacked on Excise dept officer for trying to stop illegal liquor sales in bidar, video goes viral.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X