ಬಸವಕಲ್ಯಾಣ: ಇದುವರೆಗಿನ 14 ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು ಒಂದೇ ಒಂದು ಬಾರಿ: ಅಬ್ ಕೀ ಬಾರ್?
ಆಪರೇಶನ್ ಕಮಲದ ಮೂಲಕ ಬಿಜೆಪಿಗೆ ಬಂದ ಮುಖಂಡರನ್ನು ಮತ್ತೆ ಚುನಾವಣೆಗೆ ನಿಲ್ಲಿಸುವಾಗ, ಸಿಎಂ ಯಡಿಯೂರಪ್ಪನವರಿಗೆ ಗೆಲ್ಲುವ ಚಾನ್ಸ್ ಕಮ್ಮಿ ಎಂದು ಲೆಕ್ಕಾಚಾರ ಹಾಕಿದ್ದ ಕ್ಷೇತ್ರಗಳೆಂದರೆ, ಹುಣಸೂರು, ಶಿವಾಜಿನಗರ ಮತ್ತು ಕೆ.ಆರ್.ಪೇಟೆ. ಬಿಎಸ್ವೈ ಲೆಕ್ಕಾಚಾರದಂತೆ ಹುಣಸೂರು ಮತ್ತು ಶಿವಾಜಿನಗರದಲ್ಲಿ ಬಿಜೆಪಿ ಸೋತಿತ್ತು.
ಆದರೆ, ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಮೊದಮೊದಲು ಬಿಜೆಪಿಗೆ ಸೋಲು ಕಟ್ಟಿಟ್ಟಬುತ್ತಿ ಎನ್ನುವ ಚಿತ್ರಣ, ಬಿ.ವೈ.ವಿಜಯೇಂದ್ರ, ಡಾ.ಅಶ್ವಥ್ ನಾರಾಯಣ ಮತ್ತು ಹಾಸನ ಶಾಸಕ ಪ್ರೀತಂ ಗೌಡ ಎಂಟ್ರಿಯ ನಂತರ ಬದಲಾಗಿತ್ತು. ಕ್ಷೇತ್ರದಲ್ಲಿ ಬಿಜೆಪಿ ಮೊದಲ ಬಾರಿ ಜಯ ಸಾಧಿಸಿತ್ತು.
ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರಗೆ ಮೊದಲ ಬಾರಿ ಭಾರಿ ಹಿನ್ನಡೆ!
ಇದೇ ರೀತಿಯ ಚುನಾವಣಾಪೂರ್ವ ವಾತಾವರಣ ತುಮಕೂರು ಜಿಲ್ಲೆಯ ಶಿರಾದಲ್ಲೂ ಇತ್ತು. ಕೆ.ಆರ್.ಪೇಟೆಯಲ್ಲಿ ವರ್ಕ್ ಮಾಡಿದ್ದ ಟೀಂ ಮತ್ತು ಕಾರ್ಯತಂತ್ರವನ್ನು, ವಿಜಯೇಂದ್ರ ಎಂಡ್ ಕೋ, ಇಲ್ಲೂ ಪ್ರಯೋಗಿಸಿತ್ತು. ಇಲ್ಲೂ, ಚುನಾವಣೆ ಗೆದ್ದಿದ್ದು ಗೊತ್ತಿರುವ ವಿಚಾರ.
ಉಪಚುನಾವಣೆಗೆ ಮುನ್ನ, ಮರಾಠಾ ಅಭಿವೃದ್ದಿ ಪ್ರಾಧಿಕಾರ: ರಾಜ್ಯ ಸರಕಾರ ಸ್ಪಷ್ಟನೆ ನೀಡಲಿ
ಈಗ, ಕಾಂಗ್ರೆಸ್ ಶಾಸಕರಾಗಿದ್ದ ಬಿ.ನಾರಾಯಣ ರಾವ್ ನಿಧನದ ನಂತರ ತೆರವಾಗಿರುವ ಬಸವಕಲ್ಯಾಣ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆ ಯಾವುದೇ ಸಮಯದಲ್ಲಿ ಘೋಷಣೆಯಾಗಬಹುದು. ಈ ಕ್ಷೇತ್ರದಲ್ಲಿ ಇದುವರೆಗೆ ಬಿಜೆಪಿ ಗೆದ್ದದ್ದು ಒಂದೇ ಬಾರಿ. ಮುಂದೆ ಓದಿ...

ಬಿ.ವೈ.ವಿಜಯೇಂದ್ರ ಈಗಲೇ ಒಂದು ರೌಂಡ್ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ
ಬಸವಕಲ್ಯಾಣ ಕ್ಷೇತ್ರಕ್ಕೆ ಉಸ್ತುವಾರಿಯನ್ನಾಗಿ ಯಾರನ್ನು ಬಿಜೆಪಿ ವರಿಷ್ಠರು ನೇಮಿಸುತ್ತಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ, ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಈಗಾಗಲೇ ಒಂದು ರೌಂಡ್ ಕ್ಷೇತ್ರಕ್ಕೆ ಭೇಟಿ ನೀಡಿ, ಪ್ರಮುಖವಾಗಿ ಮರಾಠ ಸಮುದಾಯದ ಸಭೆ ನಡೆಸಿದ್ದಾರೆ. ಈ ಚರ್ಚೆ ಮುಗಿಯುತ್ತಿದ್ದಂತೆಯೇ ಮರಾಠ ಅಭಿವೃದ್ದಿ ಪ್ರಾಧಿಕಾರ ನೇಮಕದ ಘೋಷಣೆಯನ್ನು ಸಿಎಂ ಯಡಿಯೂರಪ್ಪ ಮಾಡಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿ
ಅಂದಿನ ಮೈಸೂರು ಸಂಸ್ಥಾನದ ಚುನಾವಣೆಯಿಂದ ಹಿಡಿದು ಕಳೆದ ಅಸೆಂಬ್ಲಿ ಇಲೆಕ್ಷನ್ ವರೆಗೆ ನಡೆದ ಬೀದರ್ ಜಿಲ್ಲಾ ವ್ಯಾಪ್ತಿಯ ಬಸವಕಲ್ಯಾಣದಲ್ಲಿ ಬಿಜೆಪಿ ಒಮ್ಮೆ ಮಾತ್ರ ಗೆದ್ದಿದ್ದು. ಇಲ್ಲಿ ಏನಿದ್ದರೂ, ಕಾಂಗ್ರೆಸ್ ಮತ್ತು ಅಂದಿನ ಜನತಾ ಪರಿವಾರ ಮತ್ತು ಈಗಿನ ಜೆಡಿಎಸ್ ನಡುವೆ ನೇರ ಫೈಟ್ ನಡೆದದ್ದು. ಈಗ, ಉಪಚುನಾವಣೆ ಇಲ್ಲಿ ಎದುರಾಗಿದೆ. ಇದುವರೆಗಿನ ಚುನಾವಣೆಯಲ್ಲಿ ಗೆದ್ದವರಾರು, ಮುಂದಿನ ಸ್ಲೈಡಿನಲ್ಲಿ

ಕಾಂಗ್ರೆಸ್ ಮತ್ತು ಜನತಾ ಪರಿವಾರದ್ದೇ ಹವಾ
1957 ಮತ್ತು 1962 ಕಾಂಗ್ರೆಸ್ಸಿನ ಅನುಪಮಾ ಬಾಯಿ
1967 ಪಕ್ಷೇತರ ಅಭ್ಯರ್ಥಿ ಎಸ್.ಸಂಗಬಸಪ್ಪ
1972ರಲ್ಲಿ ಕಾಂಗ್ರೆಸ್ಸಿನ ಬಾಪೂರಾವ್ ಆನಂದ್ ರಾವ್
1978ರಲ್ಲಿ ಮತ್ತೆ ಕಾಂಗ್ರೆಸ್ಸಿನ ಬಾಪೂರಾವ್ ಹುಲ್ಸೂರ್ಕರ್
1983ರಲ್ಲಿ ಜನತಾ ಪಾರ್ಟಿಯ ಬಸವರಾಜ್ ಶಂಕರಪ್ಪ ಪಾಟೀಲ್

ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸವರಾಜ ಪಾಟೀಲ್ ಅಟ್ಟೂರು
1985, 1989, 1994ರಲ್ಲಿ ಸತತವಾಗಿ ಜನತಾ ಪಾರ್ಟಿಯ ಬಸವರಾಜ ಪಾಟೀಲ್ ಅಟ್ಟೂರು
1999ರಲ್ಲಿ ಜೆಡಿಎಸ್ಸಿನ ಎಂ.ಜಿ.ಮುಲೆ
2004ರಲ್ಲಿ ಜೆಡಿಎಸ್ಸಿನ ಮಲ್ಲಿಕಾರ್ಜುನ ಸಿದ್ದರಾಮಪ್ಪ ಖೂಬಾ
2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸವರಾಜ ಪಾಟೀಲ್ ಅಟ್ಟೂರು
2013ರಲ್ಲಿ ಜೆಡಿಎಸ್ಸಿನ ಮಲ್ಲಿಕಾರ್ಜುನ ಸಿದ್ದರಾಮಪ್ಪ ಖೂಬಾ
2018ರಲ್ಲಿ ಕಾಂಗ್ರೆಸ್ಸಿನ ಬಿ.ನಾರಾಯಣ ರಾವ್ (ಚಿತ್ರದಲ್ಲಿ ಬಸವರಾಜ ಪಾಟೀಲ್ ಅಟ್ಟೂರು)