ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19: 'ಈ' ರಾಜ್ಯ ಪ್ರತಿ ಶನಿವಾರ, ಭಾನುವಾರ ಸಂಪೂರ್ಣ ಬಂದ್

|
Google Oneindia Kannada News

ಭುವನೇಶ್ವರ, ಜೂನ್ 4: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹೆಚ್ಚಾಗುತ್ತಿರುವ ಕಾರಣಕ್ಕೆ ವಾರಾಂತ್ಯ ರಾಜ್ಯವನ್ನು ಸಂಪೂರ್ಣ ಬಂದ್ ಮಾಡಲು ಒಡಿಶಾ ಸರ್ಕಾರ ನಿರ್ಧರಿಸಿದೆ.

Recommended Video

ಬದಲಾಯಿಸಲು ಯಾರೆಲ್ಲಾ ಸ್ಟಾರ್ ಗಳು ಬಂದಿದ್ದಾರೆ ನೋಡಿ | Badalagu Neenu Badalayisu Neenu | Oneindia Kannada

ಜೂನ್ ತಿಂಗಳು ಪೂರ್ತಿ ಪ್ರತಿ ಶನಿವಾರ, ಭಾನುವಾರ ರಾಜ್ಯವನ್ನು ಬಂದ್ ಮಾಡಲಾಗುತ್ತಿದ್ದು, ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲ, ಅಂಗಡಿ ಮುಂಗಟ್ಟುಗಳು ತೆರೆಯುವುದಿಲ್ಲ. ಕೇವಲ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಜನರು ಹೊರಗೆ ಬರಬಹುದಾಗಿದೆ ಎಂದು ಸೂಚನೆ ನೀಡಿದ್ದಾರೆ.

ಒಡಿಶಾದಲ್ಲಿ ಕ್ವಾರೆಂಟೈನ್ ಅವಧಿ ವಿಸ್ತರಣೆ: ವಿದೇಶದಿಂದ ಬಂದವರಿಗೆ ಈ ನಿಯಮ ಕಡ್ಡಾಯಒಡಿಶಾದಲ್ಲಿ ಕ್ವಾರೆಂಟೈನ್ ಅವಧಿ ವಿಸ್ತರಣೆ: ವಿದೇಶದಿಂದ ಬಂದವರಿಗೆ ಈ ನಿಯಮ ಕಡ್ಡಾಯ

ಗಂಜಾಮ್, ಪುರಿ, ನಾಯಾಗಾರ, ಖೋರ್ದಾ, ಕಟಕ್, ಜಗತ್‌ಸಿಂಗ್ ಪುರ, ಕೇಂದ್ರಪದ, ಜಾಜ್‌ಪುರ, ಭದ್ರಕ್, ಬಾಲಾಸೂರ್, ಬಾಲಂಗಿರ್ ಈ ಪ್ರದೇಶದಲ್ಲಿ ತುರ್ತು ಅಗತ್ಯಗಳಿಗೆ ಮಾತ್ರ ಹೊರಗಡೆ ಹೋಗಲು ಅವಕಾಶ ನೀಡಲಾಗಿದೆ.

Weekend Shutdown Imposed For All Saturdays Sundays In Odisha

ಒಡಿಶಾದಲ್ಲಿ 2386 ಕೊರೊನಾ ಸೋಂಕಿತ ಪ್ರಕರಣಗಳಿವೆ. 7 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ. ದೇಶಾದ್ಯಂತ ಜೂನ್‌ನಿಂದ ಲಾಕ್‌ಡೌನ್ ಸಡಿಲಗೊಳಿಸಲಾಗಿದ್ದರೂ ಕೂಡ ಆಯಾ ರಾಜ್ಯಗಳು ತಮ್ಮ ಎಚ್ಚರಿಕೆಯಲ್ಲಿ ಇರಬೇಕಾಗುತ್ತದೆ. ಹೀಗಾಗಿ ಈ ನಿರ್ಧಾರ ಪ್ರಕಟಿಸಿದ್ದಾರೆ. ಒಡಿಶಾದಲ್ಲಿ ವಿದೇಶದಿಂದ ಬಂದವರಿಗೆ 14 ದಿನವಲ್ಲ ಬದಲಿಗೆ 28 ದಿನಗಳ ಕ್ವಾರಂಟೈನ್ ವಿಧಿಸಿದೆ.

English summary
Odisha Government Informed that Weekend shutdown imposed for all Saturdays & Sundays during June, 2020 in the districts of Ganjam, Puri, Nayagarh, Khorda, Cuttack, Jagatsinghpur, Kendrapada, Jajpur, Bhadrak, Balasore & Balangir with relaxation for only emergency and public services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X