ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್‌ಆರ್‌ಸಿ ಗೆ ಬೆಂಬಲ ಇಲ್ಲ ಎಂದ ನವೀನ್ ಪಟ್ನಾಯಕ್, ಬಿಜೆಪಿಗೆ ಆಘಾತ

|
Google Oneindia Kannada News

ಭುವನೇಶ್ವರ್, ಡಿಸೆಂಬರ್ 18: ಎನ್‌ಆರ್‌ಸಿ ಗೆ ಬೆಂಬಲ ನೀಡುವುದಿಲ್ಲ ಎಂದು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಇಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಪೌರತ್ವ ಕಾಯ್ದೆಯನ್ನು ಬಿಜೆಪಿಯು ಲೋಕಸಭೆಯಲ್ಲಿ ಮಂಡಿಸಿದ್ದಾಗ ನವೀನ್ ಪಟ್ನಾಯಕ್ ಮುಖಂಡತ್ವದ ಬಿಜು ಜನತಾ ದಳದ ಸದಸ್ಯರು ಮಸೂದೆಗೆ ಬೆಂಬಲ ನೀಡಿದ್ದರು. ಆದರೆ ಈಗ ನವೀನ್ ಪಟ್ನಾಯಕ್ ಎನ್‌ಆರ್‌ಸಿ ಗೆ ಬೆಂಬಲ ನೀಡುವುದಿಲ್ಲ ಎನ್ನುವ ಮೂಲಕ ಬಿಜೆಪಿಗೆ ಆಘಾತ ಮೂಡಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ನವೀನ್ ಪಟ್ನಾಯಕ್ ಅವರು, 'ನಮ್ಮ ಸಂಸದರು ಸಿಎಬಿ ಗೆ ಬೆಂಬಲ ನೀಡಿದ್ದರು. ಪೌರತ್ವ ಕಾಯ್ದೆಯು ವಿದೇಶಿಗರ ಮೇಲೆ ಪರಿಣಾಮ ಬೀರುತ್ತದೆ, ಭಾರತದವರ ಮೇಲೆ ಅಲ್ಲ, ಆದರೆ ನಾವು ಎನ್‌ಆರ್‌ಸಿ ಯನ್ನು ಬೆಂಬಲಿಸುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

We Will Not Support NRC: Odisha CM Naveen Patnaik

ಒಡಿಶಾ ರಾಜ್ಯದಲ್ಲಿ ಸಹ ಎನ್‌ಆರ್‌ಸಿ ಮತ್ತು ಪೌರತ್ವ ಕಾಯ್ದೆಯ ವಿರುದ್ಧ ಸತತ ಪ್ರತಿಭಟನೆಗಳು ನಡೆಯುತ್ತಿದ್ದವು. ಹಾಗಾಗಿ ನವೀನ್ ಪಟ್ನಾಯಕ್ ಅವರು ಈ ನಿರ್ಧಾರ ತಳೆದಿದ್ದಾರೆ.

ಪಟ್ನಾಯಕ್ ಅವರ ಬಿಜೆಡಿ ಯು ಬಿಜೆಪಿ ನೇತೃತ್ವದ ಎನ್‌ಡಿಎ ಗುಂಪಿನಲ್ಲಿತ್ತು. ಆದರೆ ನಂತರ ಅದರಿಂದ ಹೊರಬಂದಿತ್ತಾದರೂ, ಲೋಕಸಭೆಯಲ್ಲಿ ಬಿಜೆಪಿ ಗೆ ಬೆಂಬಲ ಸೂಚಿಸುತ್ತಲೇ ಬಂದಿತ್ತು. ಆದರೆ ಈಗ ಏಕಾ-ಏಕಿ ಬಿಜೆಪಿ ಯ ಮಹಾತ್ವಾಕಾಂಕ್ಷೆಯ ಎನ್‌ಆರ್‌ಸಿ ವಿರುದ್ಧ ನಿಂತಿರುವುದು ಬಿಜೆಪಿ ಗೆ ಆಘಾತ ತಂದಿದೆ.

ದೇಶದ ನಾಗರೀಕರನ್ನು ಪತ್ತೆ ಹಚ್ಚಲು ರಾಷ್ಟ್ರೀಯ ನಾಗರೀಕ ನೊಂದಣಿ (ಎನ್‌ಆರ್‌ಸಿ) ಯನ್ನು ಕೇಂದ್ರ ಸರ್ಕಾರ ಜಾರಿಗೆ ನಿಶ್ಚಯಿಸಿದೆ. ಆದರೆ ಇದರ ವಿರುದ್ಧ ತೀವ್ರ ಅಸಮಾಧಾನ ಕೇಳಿಬರುತ್ತಿದೆ.

English summary
Odisha CM Naveen Patnaik said Odisha will not support NRC. Naveen Patnaik's BJD party members supported CAB in lok sabha, but he now backed up from NRC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X