ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಸ್ಥಿರ ಅಭಿವೃದ್ಧಿ ಸೂಚ್ಯಂಕ; ಹವಾಮಾನ ವಿಭಾಗದಲ್ಲಿ ಒಡಿಶಾಗೆ ಅಗ್ರಸ್ಥಾನ

|
Google Oneindia Kannada News

ಭುವನೇಶ್ವರ, ಜೂನ್ 03: ನೀತಿ ಆಯೋಗವು ಸುಸ್ಥಿರ ಅಭಿವೃದ್ಧಿ ಸೂಚ್ಯಂಕ ಗುರಿಯ ವರದಿಯನ್ನು ಗುರುವಾರ ಬಿಡುಗಡೆ ಮಾಡಿದ್ದು, ಹವಾಮಾನ ವಿಷಯದಲ್ಲಿ ಒಡಿಶಾ ಅಗ್ರಸ್ಥಾನ ಪಡೆದುಕೊಂಡಿರುವುದಾಗಿ ಘೋಷಿಸಿದೆ. ಸುಸ್ಥಿರ ಅಭಿವೃದ್ಧಿಯಲ್ಲಿ ಒಡಿಶಾಗೆ 70 ಶ್ರೇಯಾಂಕ ಲಭಿಸಿದ್ದು, ಈ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಆರು ರಾಜ್ಯಗಳ ಪೈಕಿ ಉನ್ನತ ಸ್ಥಾನವನ್ನು ಪಡೆದುಕೊಂಡಿದೆ.

ಕೇರಳ (69), ನಾಗಾಲ್ಯಾಂಡ್ (69), ಗುಜರಾತ್ (67), ಮಿಝೋರಾಂ (66) ಹಾಗೂ ಸಿಕ್ಕಿಂ (65) ಅಂಕಗಳನ್ನು ಪಡೆದುಕೊಂಡಿವೆ. ಸೂಚ್ಯಂಕದ ಗುರಿ ರಾಜ್ಯಗಳಿಗೆ 16-70 ಅಂಕವಿದ್ದರೆ, ಕೇಂದ್ರಾಡಳಿತ ಪ್ರದೇಶಗಳಿಗೆ 18-77 ಅಂಕ ಇರುತ್ತದೆ. ಇದರಲ್ಲಿ ಒಡಿಶಾ ಹಾಗೂ ಅಂಡಮಾನ್ ನಿಕೋಬಾರ್ ದ್ವೀಪಗಳು ಉನ್ನತ ಶ್ರೇಣಿಯನ್ನು ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ. ಮುಂದೆ ಓದಿ...

ಸುಸ್ಥಿರ ಅಭಿವೃದ್ಧಿ ಸೂಚ್ಯಂಕ; ಕೇರಳಕ್ಕೆ ನಂಬರ್ ಒನ್ ಸ್ಥಾನಸುಸ್ಥಿರ ಅಭಿವೃದ್ಧಿ ಸೂಚ್ಯಂಕ; ಕೇರಳಕ್ಕೆ ನಂಬರ್ ಒನ್ ಸ್ಥಾನ

 6 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಿಗೆ ಸ್ಥಾನ

6 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಿಗೆ ಸ್ಥಾನ

ಹವಾಮಾನ ವಿಭಾಗದಲ್ಲಿ ಆರು ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳು ಸ್ಥಾನ ಗಿಟ್ಟಿಸಿಕೊಂಡಿವೆ. ಆದರೆ ಹತ್ತು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳು 50ಕ್ಕಿಂತ ಕಡಿಮೆ ಅಂಕ ಪಡೆದುಕೊಂಡು ಹಿನ್ನಡೆ ಸಾಧಿಸಿವೆ. ಈ ಸೂಚ್ಯಂಕದ ನಿಗದಿಗೆ ಹಾಗೂ ಹವಾಮಾನ ನಿರ್ವಹಣೆ ಗುರಿಯತ್ತ ಭಾರತದ ಪ್ರಗತಿ, ಕಾರ್ಯಕ್ಷಮತೆಯನ್ನು ಅಳೆಯಲು ಐದು ರಾಷ್ಟ್ರಮಟ್ಟದ ಸೂಚಕಗಳನ್ನು ಗುರುತಿಸಲಾಗಿತ್ತು.

 ಈ ಐದು ಅಂಶಗಳ ಮೇಲೆ ಸೂಚ್ಯಂಕ ನಿಗದಿ

ಈ ಐದು ಅಂಶಗಳ ಮೇಲೆ ಸೂಚ್ಯಂಕ ನಿಗದಿ

ಈ ಅಂಶಗಳನ್ನು ಆಧರಿಸಿ ಸೂಚ್ಯಂಕಗಳನ್ನು ನೀಡಲಾಗುತ್ತದೆ. (1) ಹವಾಮಾನ ವೈಪರೀತ್ಯದಿಂದಾಗಿ ಒಂದು ಕೋಟಿ ಜನಸಂಖ್ಯೆಯಲ್ಲಿ ಸಾವನ್ನಪ್ಪಿದ ಜನರ ಸಂಖ್ಯೆ
(2) ಪ್ರಾಕೃತಿಕ ವಿಪತ್ತಿನ ಸಂದರ್ಭ ವಿಪತ್ತು ಸಿದ್ಧತೆ (3) ಸ್ಥಾಪಿತ ಉತ್ಪಾದನಾ ಸಾಮರ್ಥ್ಯದಲ್ಲಿ ಒಟ್ಟು ನವೀಕರಿಸಬಹುದಾದ ಶಕ್ತಿಯ ಉತ್ಪಾದನೆ (4) ಸಾವಿರ ಜನಸಂಖ್ಯೆಗೆ ಎಲ್‌ಇಡಿ ಬಲ್ಬ್‌ ಬಳಕೆಯಿಂದ ಉಳಿಸಲಾದ C02 (ಟನ್‌ಗಳ ಲೆಕ್ಕದಲ್ಲಿ) (5) ವಾಯುಮಾಲಿನ್ಯ ಸಂಬಂಧಿ ವೈಕಲ್ಯ ಹೊಂದಾಣಿಕೆ ಜೀವಿತಾವಧಿ Disability Adjusted Life Years (DALY) rate -(ಪ್ರತಿ ಲಕ್ಷ ಜನಸಂಖ್ಯೆಗೆ) ಈ ಅಂಶಗಳ ಆಧಾರದ ಮೇಲೆ ಸೂಚ್ಯಂಕಗಳನ್ನು ನೀಡಲಾಗಿದೆ.

ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ: ದೇಶದಲ್ಲಿ 6ನೇ ಸ್ಥಾನಕ್ಕೆ ಜಿಗಿದ ಕರ್ನಾಟಕಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ: ದೇಶದಲ್ಲಿ 6ನೇ ಸ್ಥಾನಕ್ಕೆ ಜಿಗಿದ ಕರ್ನಾಟಕ

 ಉತ್ತಮ ಕಾರ್ಯಕ್ಷಮತೆ ತೋರಿದ ಒಡಿಶಾ

ಉತ್ತಮ ಕಾರ್ಯಕ್ಷಮತೆ ತೋರಿದ ಒಡಿಶಾ

ಈ ಎಲ್ಲಾ ಅಂಶಗಳ ಆಧಾರದ ಮೇಲೆ ಒಡಿಶಾ ರಾಜ್ಯಕ್ಕೆ ಅಂಕ ನೀಡಲಾಗಿದೆ. ಮೊದಲ ಅಂಶಕ್ಕೆ 0 ಗುರಿ ಹೊಂದಿದ್ದು, ಕಾರ್ಯಕ್ಷಮತೆ 22.78 ಆಗಿದೆ. ಎರಡನೇ ಅಂಶಕ್ಕೆ 50ರ ಗುರಿ ಹೊಂದಿದ್ದು, 22 ಗಳಿಸಿದೆ. ಮೂರನೇ ಅಂಶಕ್ಕೆ 40ರ ಗುರಿ ಇಟ್ಟುಕೊಂಡಿದ್ದು, 31.40 ಕಾರ್ಯಕ್ಷಮತೆ ಸಾಧಿಸಿದೆ. ನಾಲ್ಕನೇ ಮಾನದಂಡದಲ್ಲಿ 103.22 ಗುರಿ ಹೊಂದಿದ್ದು 120.07 ಅಂಕ ಹಾಗೂ ಕೊನೆಯದಾಗಿ 3201 ಅಂಕ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.
ಈ ಅಂಕಗಳನ್ನು ಲಭ್ಯವಿರುವ ಮಾಹಿತಿ ಆಧಾರದ ಮೇಲೆ ನೀಡಲಾಗಿದೆ ಮತ್ತು ಬೇರೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹೋಲಿಸಿ ನೀಡಲಾಗಿದೆ ಎಂದು ನೀತಿ ಆಯೋಗ ತಿಳಿಸಿದೆ.

 2018ರಲ್ಲಿ ಸುಸ್ಥಿರ ಅಭಿವೃದ್ಧಿ ಸೂಚ್ಯಂಕ ಆರಂಭ

2018ರಲ್ಲಿ ಸುಸ್ಥಿರ ಅಭಿವೃದ್ಧಿ ಸೂಚ್ಯಂಕ ಆರಂಭ

ಡಿಸೆಂಬರ್ 2018ರಲ್ಲಿ ಈ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕವನ್ನು ಆರಂಭಿಸಲಾಗಿದ್ದು, ದೇಶದಲ್ಲಿನ ಪ್ರಗತಿಯನ್ನು ಈ ಮೂಲಕ ಮೌಲ್ಯಮಾಪನ ಮಾಡಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಪ್ರಗತಿಗೆ ಪ್ರೇರೇಪಿಸುವುದು ಇದರ ಉದ್ದೇಶ ಎಂದು ನೀತಿ ಆಯೋಗ ತಿಳಿಸಿದೆ.

English summary
Odisha has topped among the States in the Index Score for Goal-13-Climate Action of the Sustainable Development Goals (SDG) India Index,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X