ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ 9 ತಿಂಗಳ ಬಳಿಕ ಬಾಗಿಲು ತೆರೆದ ಪುರಿ ಜಗನ್ನಾಥ ದೇವಾಲಯ

|
Google Oneindia Kannada News

ಭುವನೇಶ್ವರ, ಡಿಸೆಂಬರ್ 23: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸತತ 9 ತಿಂಗಳಿಂದ ಮುಚ್ಚಲಾಗಿದ್ದ, ಪುರಿ ಜಗನ್ನಾಥ ದೇವಾಲಯ ಇಂದು ಬಾಗಿಲು ತೆರೆದಿದೆ.

ಕಳೆದ ತಿಂಗಳು ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ ಮುಖ್ಯಸ್ಥ ಅಧಿಕಾರಿ ಕೃಷನ್ ಕುಮಾರ್, ಕೋವಿಡ್-19 ಶಿಷ್ಠಾಚಾರಗಳನ್ನು ಪಾಲಿಸಿಕೊಂಡು ಇಂದಿನಿಂದ ಹಂತಹಂತವಾಗಿ ದೇವಸ್ಥಾನದ ಬಾಗಿಲು ಭಕ್ತರಿಗೆ ದರ್ಶನಕ್ಕೆ ಮುಕ್ತವಾಗಿದೆ ಎಂದರು.

ಡಿಸೆಂಬರ್ 23 ರಂದು ಬಾಗಿಲು ತೆರೆಯಲಿದೆ ಪುರಿ ಜಗನ್ನಾಥ ದೇವಾಲಯಡಿಸೆಂಬರ್ 23 ರಂದು ಬಾಗಿಲು ತೆರೆಯಲಿದೆ ಪುರಿ ಜಗನ್ನಾಥ ದೇವಾಲಯ

12ನೇ ಶತಮಾನದ ದೇಶದ ಪ್ರಸಿದ್ಧ ಯಾತ್ರಾಸ್ಥಳ ಪುರಿ ಜಗನ್ನಾಥ ದೇವಾಲಯಕ್ಕೆ ಭಕ್ತಾದಿಗಳ ಪ್ರವೇಶವನ್ನು ಮಾರ್ಚ್ 25ರಂದು ಮುಚ್ಚಲಾಗಿತ್ತು.

Puri Jagannath Temple Reopens Today After 9 Months

ಪುರಿ ದೇವಸ್ಥಾನದ ಬಾಗಿಲು ತೆರೆದ ಐದು ದಿನಗಳಲ್ಲಿ ಪುರಿಯ ಜನತೆಗೆ ದೇವರ ದರ್ಶನ ಪಡೆಯಲು ಅವಕಾಶ ಮಾಡಿಕೊಡುವಂತೆ ಕೇಳಲಾಗುತ್ತಿದೆ ಎಂದಿದ್ದಾರೆ.

ದೇವಸ್ಥಾನದ ಆಸುಪಾಸಿನಲ್ಲಿ ವಾಸಿಸುತ್ತಿದ್ದರೂ ಕೂಡ ದೇವಸ್ಥಾನಕ್ಕೆ ತೆರಳಲು ಜನರಿಗೆ ಅವಕಾಶವಿರಲಿಲ್ಲ ಹೀಗಾಗಿ ಮೊದಲ ಐದು ದಿನ ಪುರಿಯ ಭಕ್ತರು ದೇವರ ದರ್ಶನ ಪಡೆಯಬೇಕು. ಹೊಸ ವರ್ಷವಾಗಿದ್ದರಿಂದ ಭಕ್ತರು ಅಧಿಕ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇರುವುದರಿಂದ ಜನವರಿ 1 ಹಾಗೂ 2 ರಂದು ದೇವಸ್ಥಾನವನ್ನು ಮುಚ್ಚಲಾಗುತ್ತದೆ.

ಜನವರಿ 3 ರಂದು ಎಂದಿನಂತೆ ದೇವಸ್ಥಾನದ ಬಾಗಿಲು ತೆರೆದಿರಲಿದೆ. 48 ಗಂಟೆಯೊಳಗಾಗಿ ಪಡೆದ ಕೊವಿಡ್ ನೆಗೆಟಿವ್ ವರದಿಯನ್ನು ಭಕ್ತರು ಹೊಂದಿರಬೇಕು.

ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಮಾಡಿಸಲು ಅನುಮತಿ ಇದೆ. 5 ಸಾವಿರ ಭಕ್ತರಿಗೆ ಅವಕಾಶ ನೀಡಲಾಗುತ್ತಿದೆ. ಕ್ರಮೇಣವಾಗಿ ಭಕ್ತರ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ.

English summary
The Jagannath Temple in Puri reopened today after being closed for nine months due to the coronavirus-forced lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X