ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುರಿ ಜಗನ್ನಾಥ ರಥಯಾತ್ರೆ ಆರಂಭ:700 ಪುರೋಹಿತರಿಗೆ ಕೊವಿಡ್ ಪರೀಕ್ಷೆ

|
Google Oneindia Kannada News

ಕೊಲ್ಕತ್ತ, ಜೂನ್ 23: ಒಡಿಶಾದ ಪುರಿಯಲ್ಲಿ ವಿಶ್ವ ಪ್ರಸಿದ್ಧ ಜಗನ್ನಾಥ ರಥಯಾತ್ರೆ ಆರಂಭಗೊಂಡಿದೆ.

Recommended Video

Shadab Khan, Haider Ali And Haris Rauf Test Positive For Coronavirus | Oneindia Kannada

ರಥಯಾತ್ರೆಯಲ್ಲಿ ಪಾಲ್ಗೊಂಡು ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸುವ 700 ಪುರೋಹಿತರನ್ನು ಕೋವಿಡ್​ 19 ಪರೀಕ್ಷೆಗೆ ಒಳಪಡಿಸಿ, ಯಾವುದೇ ಸೋಂಕು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದೆ.

ಪುರಿ ಜಗನ್ನಾಥ ರಥಯಾತ್ರೆ ನಡೆಸಲು ಸುಪ್ರೀಂ ಕೋರ್ಟ್ ಅನುಮತಿಪುರಿ ಜಗನ್ನಾಥ ರಥಯಾತ್ರೆ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ

ಬಳಿಕ ಅವರಿಗೆ ಜಗನ್ನಾಥ, ಬಲಭದ್ರ ಮತ್ತು ಸುಭದ್ರರ ತ್ರಿವಳಿ ರಥಗಳನ್ನು ಎಳೆಯುವ ಕೈಂಕರ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

Puri Jagannath Rath Yatra Begins

ಕೊವಿಡ್ 19 ರೋಗದ ಹಿನ್ನೆಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರ ಪಾಲ್ಗೊಳ್ಳುವಿಕೆ ನಿಷೇಧಿಸಿ ಕರ್ಫ್ಯೂ ಜಾರಿಗೊಳಿಸಲಾಗಿದ್ದರೂ, ರಥಯಾತ್ರೆ ಸಾಂಗೋಪಾಂಗವಾಗಿ ಸಾಗುತ್ತಿದೆ.
ಸಾಮಾನ್ಯವಾಗಿ ಒಂದು ದಶಲಕ್ಷಕ್ಕೂ ಹೆಚ್ಚು ಭಕ್ತಾದಿಗಳು, ದೇಶ-ವಿದೇಶದ ಪ್ರವಾಸಿಗರು ಪ್ರತಿ ವರ್ಷ ರಥಯಾತ್ರೆಗೆ ಸಾಕ್ಷಿಯಾಗುತ್ತಿದ್ದರು. ಆದರೆ, ಈ ಬಾರಿ ಕೋವಿಡ್​ ಕರ್ಫ್ಯೂ ಹಿನ್ನೆಲೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಕಡಿಮೆ ಇದೆ.

ಹಲವು ನಿರ್ಬಂಧಗಳನ್ನು ವಿಧಿಸಿ ಜಗನ್ನಾಥಯಾತ್ರೆಯ ವಿಧಿವಿಧಾನಗಳನ್ನು ಪೂರೈಸಲು ಸುಪ್ರೀಂಕೋರ್ಟ್​ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ರಥಯಾತ್ರೆ ಆರಂಭವಾಗಿದೆ.

ಸುಪ್ರೀಂಕೋರ್ಟ್​ ಸೂಚನೆಯ ಮೇರೆಗೆ ಒಡಿಶಾ ಸರ್ಕಾರ ಪುರಿಯಲ್ಲಿ 41 ಗಂಟೆಗಳ ಕೊವಿಡ್​ ಕರ್ಫ್ಯೂ ಜಾರಿಗೊಳಿಸಿದೆ.

ಒಡಿಶಾದ ವಿಶ್ವವಿಖ್ಯಾತ ಮತ್ತು ಚಾರಿತ್ರಿಕ ಪುರಿ ಜಗನ್ನಾಥ ರಥಯಾತ್ರೆಯನ್ನು ರದ್ದುಗೊಳಿಸುವುದು ಬೇಡ, ಭಕ್ತರಿಲ್ಲದೆಯೇ ರಥೋತ್ಸವ ನಡೆಸುತ್ತೇವೆ ಅನುಮತಿ ಕೊಡಿ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.

ಜಗನ್ನಾಥ ದೇವಸ್ಥಾನದ ಸುತ್ತ ಸ್ಯಾನಿಟೈಸರ್ ಸಿಂಪಡಿಸಲಾಗಿದೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಎಲ್ಲಾ ಪುರೋಹಿತರಿಗೂ ಕೊರೊನಾ ವೈರಸ್ ಪರೀಕ್ಷೆ ಮಾಡಿಸಲಾಗಿದೆ ಎಂದು ಸಚಿವ ಪ್ರತಾಪ್ ಜೆನಾ ತಿಳಿಸಿದ್ದಾರೆ.

English summary
The Famous Chariot fstival Lord Jagannath in Odisha's Puri begins Today but without devotees. In a Last minute verdict by the Supreme court on June 22, the traditional Rath Yatra was allowed to go ahead with necessary curbs to spread of COVID 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X