ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಡಿಶಾದಲ್ಲಿ ಕಾಂಗ್ರೆಸ್ಸಿಗೆ ಆಘಾತದ ಮೇಲೆ ಆಘಾತ, ಮತ್ತೊಬ್ಬ ಶಾಸಕ ಬಿಜೆಪಿಗೆ

|
Google Oneindia Kannada News

ನವದೆಹಲಿ, ಮಾರ್ಚ್ 17: ಬಿಜೆಡಿಯ ಹಾಲಿ ಸಂಸದ, ಹಿರಿಯ ನಾಯಕ ಬಲಭದ್ರ ಮಾಂಝಿ ಅವರು ಬಿಜೆಡಿ ತೊರೆದು ಭಾರತೀಯ ಜನತಾ ಪಕ್ಷ(ಬಿಜೆಪಿ)ವನ್ನು ಅಧಿಕೃತವಾಗಿ ಸೇರಿಕೊಂಡ ಬೆನ್ನಲ್ಲೇ ಕಾಂಗ್ರೆಸ್ಸಿಗೆ ಮತ್ತೊಂದು ಆಘಾತ ಎದುರಾಗಿದೆ. ಕಾಂಗ್ರೆಸ್ ತೊರೆಯುತ್ತಿರುವ ಶಾಸಕರ ಸಂಖ್ಯೆ ಹೆಚ್ಚಾಗುತ್ತಿದೆ.

ಪಕ್ಷಾಂತರ: ಬಿಜೆಡಿ ತೊರೆದು ಬಿಜೆಪಿ ಸೇರಿದ ಸಂಸದ ಬಲಭದ್ರ ಪಕ್ಷಾಂತರ: ಬಿಜೆಡಿ ತೊರೆದು ಬಿಜೆಪಿ ಸೇರಿದ ಸಂಸದ ಬಲಭದ್ರ

ಕಾಂಗ್ರೆಸ್ ಮುಖಂಡ ಪ್ರಕಾಶ್ ಚಂದ್ರ ಬೆಹೆರಾ ಅವರು ಭಾನುವಾರದಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು. ಕಾಂಗ್ರೆಸ್ಸಿನ ಸಲೇಪುರ್(ಕಟಕ್, ಒಡಿಶಾ)ದ ಶಾಸಕರಾಗಿದ್ದಾ ಪ್ರಕಾಶ್ ಅವರು ಶನಿವಾರದಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

147 ಸ್ಥಾನಗಳುಳ್ಳ ಒಡಿಶಾ ವಿಧಾನಸಭೆಗೆ ಏಪ್ರಿಲ್ 11 ಹಾಗೂ ಏಪ್ರಿಲ್ 29ರಂದು ಒಟ್ಟು ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆ 2019ರ ಜೊತೆ ಜೊತೆಗೆ ವಿಧಾನಸಭೆಗೂ ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರಬರಲಿದೆ. ಹಾಲಿ ಒಡಿಶಾ ವಿಧಾನಸಭೆಯ ಅವಧಿ ಜೂನ್ 11, 2019ರದು ಮುಕ್ತಾಯವಾಗಲಿದೆ.

Prakash Chandra Behera joins BJP; Congress loses another MLA in Odisha

ಇನ್ನು ಒಡಿಶಾದಲ್ಲಿ ಒಟ್ಟು 21(543) ಲೋಕಸಭಾ ಕ್ಷೇತ್ರಗಳಿದ್ದು, ಅವುಗಳಲ್ಲಿ 20 ಕ್ಷೇತ್ರಗಳನ್ನು 2014 ರಲ್ಲಿ ಬಿಜು ಜನತಾದಳವೇ ಗೆದ್ದು ದಾಖಲೆ ಬರೆದಿತ್ತು. ಅಕಸ್ಮಾತ್ ಈ ಪಕ್ಷ ಯಾವುದೇ ಒಂದು ಮೈತ್ರಿಕೂಟದ ಭಾಗವಾದರೂ ಅವರಿಗೆ ಲಾಭ ಖಂಡಿತ ಎಂಬ ಎಣಿಕೆಯಿದೆ.

English summary
Prakash Chandra Behera on Sunday joined BJP in the presence of Union Minister Dharmendra Pradhan. Behera, Congress MLA from Salepur (Cuttack, Odisha), had resigned from the party yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X