ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ ಮಂದಿ ಕೆಂಗಣ್ಣಿಗೆ ಗುರಿಯಾದ ಕೇಂದ್ರ ಸರ್ಕಾರ

|
Google Oneindia Kannada News

ಹುಬ್ಬಳ್ಳಿ, ಸೆಪ್ಟೆಂಬರ್ 25 : ಕೇಂದ್ರ ಸರ್ಕಾರದ ವಿರುದ್ಧ ಹುಬ್ಬಳ್ಳಿ ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತೀಯ ಅಂಚೆ ಇಲಾಖೆಯ ಸ್ಟೋರ್ ಡಿಪೋವನ್ನು ಬೆಂಗಳೂರಿಗೆ ಸ್ಥಳಾಂತರ ಮಾಡುವುದಕ್ಕೆ ವಿರೋಧ ವ್ಯಕ್ತವಾಗಿದೆ.

ಹುಬ್ಬಳ್ಳಿ ಮತ್ತು ಅರಸೀಕೆರೆಯ ಸ್ಟೋರ್ ಡಿಪೋವನ್ನು ಬೆಂಗಳೂರು ಕಚೇರಿಯೊಂದಿಗೆ ವಿಲೀನ ಮಾಡಲಾಗುತ್ತದೆ. ಸೆಪ್ಟೆಂಬರ್ 30ರೊಳಗೆ ಸ್ಟೋರ್ ಡಿಪೋ ಸ್ಥಳಾಂತರ ಮಾಡಿ ಎಂದು ಸೂಚನೆ ನೀಡಲಾಗಿದೆ.

ಹುಬ್ಬಳ್ಳಿಗೆ ಬಂಪರ್ ಉಡುಗೊರೆ ಕೊಟ್ಟ ಕೇಂದ್ರ ಸರ್ಕಾರ ಹುಬ್ಬಳ್ಳಿಗೆ ಬಂಪರ್ ಉಡುಗೊರೆ ಕೊಟ್ಟ ಕೇಂದ್ರ ಸರ್ಕಾರ

ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯ ತೆರಿಗೆ ಇಲಾಖೆ ಪ್ರಧಾನ ಆಯುಕ್ತರ ಕಚೇರಿಯನ್ನು ಗೋವಾಕ್ಕೆ ಸ್ಥಳಾಂತರ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಬಳಿಕ ಕೇಂದ್ರ ಸರ್ಕಾರ ಈ ಆದೇಶವನ್ನು ವಾಪಸ್ ಪಡೆದಿತ್ತು. ಈಗ ಸ್ಟೋರ್ ಡಿಪೋ ವಿಲೀನಕ್ಕೆ ತಯಾರಿ ನಡೆದಿದೆ.

ಹುಬ್ಬಳ್ಳಿ ರೈಲ್ವೇ ನಿಲ್ದಾಣಕ್ಕೆ ಸಿದ್ಧಾರೂಢ ಸ್ವಾಮೀಜಿ ಹೆಸರು ನಾಮಕರಣ: ಕೇಂದ್ರ ಒಪ್ಪಿಗೆಹುಬ್ಬಳ್ಳಿ ರೈಲ್ವೇ ನಿಲ್ದಾಣಕ್ಕೆ ಸಿದ್ಧಾರೂಢ ಸ್ವಾಮೀಜಿ ಹೆಸರು ನಾಮಕರಣ: ಕೇಂದ್ರ ಒಪ್ಪಿಗೆ

ಒಂದೊಂದು ಕಚೇರಿಗಳನ್ನು ಸ್ಥಳಾಂತರ ಮಾಡುವುದಾದರೆ ಅದನ್ನು ಹುಬ್ಬಳ್ಳಿಯಲ್ಲಿ ಸ್ಥಾಪನೆ ಮಾಡಿದ್ದು ಏಕೆ? ಎಂಬುದು ಜನರ ಪ್ರಶ್ನೆ. ಉತ್ತರ ಕರ್ನಾಟಕದ ಎಲ್ಲಾ ಅಂಚೆ ಕಚೇರಿಗಳಿಗೂ ಸಾಮಾಗ್ರಿ ಪೂರೈಕೆ ಮಾಡಲು ಹುಬ್ಬಳ್ಳಿಯಲ್ಲಿ ಸ್ಟೋರ್ ಡಿಪೋ ಆರಂಭ ಮಾಡಲಾಗಿತ್ತು.

ಹುಬ್ಬಳ್ಳಿ-ಮುಂಬೈ ನಡುವೆ ಇಂಡಿಗೋ ಹಾರಾಟ ಹುಬ್ಬಳ್ಳಿ-ಮುಂಬೈ ನಡುವೆ ಇಂಡಿಗೋ ಹಾರಾಟ

ಕರ್ನಾಟಕದಲ್ಲಿ 3 ಸ್ಟೋರ್ ಡಿಪೋ

ಕರ್ನಾಟಕದಲ್ಲಿ 3 ಸ್ಟೋರ್ ಡಿಪೋ

ಭಾರತೀಯ ಅಂಚೆ ಇಲಾಖೆ ಅರಸೀಕೆರೆ, ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಸ್ಟೋರ್ ಡಿಪೋವನ್ನು ಹೊಂದಿದೆ. ಈಗ ಕೇಂದ್ರ ಸರ್ಕಾರ ಅರಸೀಕೆರೆ ಮತ್ತು ಹುಬ್ಬಳ್ಳಿ ಸ್ಟೋರ್ ಡಿಪೋವನ್ನು ಬೆಂಗಳೂರಿನ ಕಚೇರಿಯೊಂದಿಗೆ ವಿಲೀನ ಮಾಡಲು ಮುಂದಾಗಿದೆ. ಸೆಪ್ಟೆಂಬರ್ 30ರೊಳಗೆ ಕಚೇರಿಗಳು ಬೆಂಗಳೂರಿಗೆ ಸ್ಥಳಾಂತರ ವಾಗಬೇಕು ಎಂದು ಸೂಚನೆ ಕೊಡಲಾಗಿದೆ.

ಹುಬ್ಬಳ್ಳಿ ಸ್ಟೋರ್ ಡಿಪೋ

ಹುಬ್ಬಳ್ಳಿ ಸ್ಟೋರ್ ಡಿಪೋ

ಹುಬ್ಬಳ್ಳಿ ಪೋಸ್ಟಲ್ ಸ್ಟೋರ್ ಡಿಪೋ ವ್ಯಾಪ್ತಿಗೆ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳು ಒಳಪಟ್ಟಿವೆ. 14 ಜಿಲ್ಲೆಗಳ 4,480 ಅಂಚೆ ಕಚೇರಿಗಳಿಗೆ ಹುಬ್ಬಳ್ಳಿಯಿಂದ ಸಾಮಾಗ್ರಿಗಳು ರವಾನೆಯಾಗುತ್ತಿವೆ.

ಏನಿದು ಪೋಸ್ಟಲ್ ಸ್ಟೋರ್ ಡಿಪೋ

ಏನಿದು ಪೋಸ್ಟಲ್ ಸ್ಟೋರ್ ಡಿಪೋ

ಪೋಸ್ಟಲ್ ಸ್ಟೋರ್ ಡಿಪೋ ಅಂಚೆ ಕಚೇರಿಗಳಿಗೆ ಅಗತ್ಯ ಇರುವ 200ಕ್ಕೂ ಅಧಿಕ ಸಾಮಾಗ್ರಿಗಳನ್ನು ಪೂರೈಕೆ ಮಾಡುತ್ತದೆ. ಇದರಲ್ಲಿ ಸ್ಟಾಂಪ್, ಸ್ಪೀಡ್ ಪೋಸ್ಟ್ ಸ್ಟಿಕ್ಕರ್, ಖಾತೆ ಉಳಿತಾಯ ಪಾಸ್ ಪುಸ್ತಕ, ಪೋಸ್ಟ್ ಕಾರ್ಡ್ ಹೀಗಿ ವಿವಿಧಿ ಸಾಮಾಗ್ರಿಗಳು ಸೇರಿವೆ.

Recommended Video

Karnataka ಮತ್ತೊಮ್ಮೆ Lockdown ಆಗಲಿದೆಯೇ ? ಕಂಪ್ಲೀಟ್ ವಿವರ | Oneindia Kannada
ಬೆಂಗಳೂರಿನಿಂದ ಸರಬರಾಜು

ಬೆಂಗಳೂರಿನಿಂದ ಸರಬರಾಜು

ಹುಬ್ಬಳ್ಳಿ ಪೋಸ್ಟಲ್ ಸ್ಟೋರ್‌ ಅನ್ನು ಬೆಂಗಳೂರು ಕಚೇರಿ ಜೊತೆ ವಿಲೀನ ಮಾಡಲಾಗುತ್ತದೆ. ಬಳಿಕ ಅಂಚೆ ಕಚೇರಿಗಳಿಗೆ ಅಲ್ಲಿಂದಲೇ ಸಾಮಾಗ್ರಿ ಪೂರೈಕೆಯಾಗಲಿದೆ ಎಂಬುದು ಸದ್ಯದ ಮಾಹಿತಿ. ಆದರೆ, ವಿಲೀನದ ಬಗ್ಗೆ ಅಧಿಕೃತ ಸೂಚನೆ ಬಂದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

English summary
People of Hubballi upset with union government after the order of merge Hubballi postal store with Bengaluru office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X