ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5ನೇ ಬಾರಿಗೆ ಸಿಎಂಯಾಗಿ ಗದ್ದುಗೆ ಏರಲು ಪಟ್ನಾಯಕ್ ಸಜ್ಜು

|
Google Oneindia Kannada News

ಭುವನೇಶ್ವರ್, ಮೇ 26: ಬಿಜು ಜನತಾ ದಳ(ಬಿಜೆಡಿ) ಮುಖ್ಯಸ್ಥ ನವೀನ್ ಪಟ್ನಾಯಕ್ ಅವರು ಮೇ 29ರಂದು ಒಡಿಶಾದ ಮುಖ್ಯಮಂತ್ರಿಯಾಗಿ ದಾಖಲೆಯ 5ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಮುಹೂರ್ತ ನಿಗದಿಯಾಗಿದೆ.

ಮಹಾಘಟಬಂಧನಕ್ಕೆ ಬಿಜೆಡಿ ಬೆಂಬಲವಿಲ್ಲ: ನವೀನ್ ಪಟ್ನಾಯಕ್ಮಹಾಘಟಬಂಧನಕ್ಕೆ ಬಿಜೆಡಿ ಬೆಂಬಲವಿಲ್ಲ: ನವೀನ್ ಪಟ್ನಾಯಕ್

ಮೇ 3ರ ಫೋನಿ ಚಂಡಮಾರತದ ಹೊಡೆತಕ್ಕೆ ಸಿಲುಕಿ ನಲುಗಿರುವ ಒಡಿಶಾಕ್ಕೆ ಮೇ 29ರಂದು ಮುಖ್ಯಮಂತ್ರಿಯಾಗಿ ನವೀನ್ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದಾರೆ.

ಒಡಿಶಾ ವಿಧಾನಸಭೆ ಚುನಾವಣೆ: ಐದನೇ ಬಾರಿಗೆ ಜನರ ಮುಂದೆ ನವೀನ್ ಪಟ್ನಾಯಕ್ಒಡಿಶಾ ವಿಧಾನಸಭೆ ಚುನಾವಣೆ: ಐದನೇ ಬಾರಿಗೆ ಜನರ ಮುಂದೆ ನವೀನ್ ಪಟ್ನಾಯಕ್

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 112 ಸ್ಥಾನಗಳನ್ನು ಶೇ 44.7 ಮತಗಳಿಕೆಯೊಂದಿಗೆ ಗೆದ್ದು ಬಿಜೆಡಿ ಅಧಿಕಾರಕ್ಕೆ ಬಂದರೆ, ಬಿಜೆಪಿ 32.5%(2014ರಲ್ಲಿ 18%) ಹಾಗೂ ಕಾಂಗ್ರೆಸ್ 16.1%(2014ರಲ್ಲಿ 25.7%) ನಂತರದ ಸ್ಥಾನದಲ್ಲಿವೆ.

 Patnaik set for record fifth term as Odisha CM, swearing-in-ceremony on May 29

ಒಡಿಶಾದಿಂದ ಏಳು ಮಹಿಳಾ ಸಂಸದರು ಆಯ್ಕೆಯಾಗಿದ್ದು, ಬಿಜೆಡಿಯಿಂದ ಐವರು ಹಾಗೂ ಬಿಜೆಪಿಯಿಂದ ಇಬ್ಬರು ಆಯ್ಕೆಯಾಗಿದ್ದಾರೆ. ಬಿಜೆಡಿಯ ಪಿನಾಕಿ ಮಿಶ್ರಾ ವಿರುದ್ಧ ಪುರಿಯಲ್ಲಿ ಬಿಜೆಪಿಯ ಸಂಬಿತ್ ಪಾತ್ರ ಸೋಲು ಕಂಡಿದ್ದಾರೆ. ಕೇಂದ್ರ ಸಚಿವ ಜುಯಾಲ್ ಒರಾಮ್, ಕಟಕ್ ನಿಂದ ಭತೃಹರಿ ಮಹತಬ್ ಅವರು ಬಿಜೆಡಿಯಿಂದ ಆಯ್ಕೆಯಾಗಿದ್ದಾರೆ. ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ 146 ವಿಧಾನಸಭಾ ಕ್ಷೇತ್ರಗಳ ಪೈಕಿ 112 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರ ಸ್ಥಾಪಿಸುತ್ತಿದೆ.

English summary
Biju Janata Dal (BJD) chief Naveen Patnaik will be sworn-in as Odisha Chief Minister on May 29 for a fifth consecutive term after landslide victory in the state Assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X