ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ ನಿರ್ವಹಣೆಗೆ ಒಡಿಶಾದ ಗಂಜಮ್ ಮಾದರಿ: ಆಕ್ಸ್‌ಫರ್ಡ್ ಪ್ರಶಂಸೆ

|
Google Oneindia Kannada News

ಗಂಜಮ್, ಅಕ್ಟೋಬರ್ 08: ಕೊವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಒಡಿಶಾದ ಗಂಜಮ್ ಮಾದರಿಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಪ್ರಶಂಸೆ ವ್ಯಕ್ತಪಡಿಸಿದೆ.

ಒಟ್ಟಿನಲ್ಲಿ ಕೊರೊನಾ ಸೋಂಕನ್ನು ತಡೆಗಟ್ಟುವಲ್ಲಿ ಜಿಲ್ಲೆ ಸಫಲವಾಗಿದೆ. ಹಾಗಾದರೆ ಅವರು ತೆಗೆದುಕೊಂಡಿರುವ ಕ್ರಮವೇನು ಎಂಬುದರ ಕುರಿತು ತಿಳಿಯೋಣ.

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ನಿಟ್ಟಿನಲ್ಲಿ ಏಪ್ರಿಲ್‌ ತಿಂಗಳಲ್ಲಿ ಜಿಲ್ಲಾಧಿಕಾರಿಗಳ ಅಧಿಕಾರವನ್ನು ಸರ್‌ಪಂಚ್(ಗ್ರಾಮ ಪಂಚಾಯಿತಿ ಅಧ್ಯಕ್ಷರು) ನೀಡಲಾಗಿತ್ತು. ಇದು ಕೊರೊನಾವನ್ನು ತಡೆಗಟ್ಟುವಲ್ಲಿ ಕೆಲಸ ಮಾಡಿದೆ.

Oxford University Said- To Stop Corona, One Has To Learn From Ganjam And Dharavi

ಒಡಿಶಾ ಮುಖ್ಯಮಂತ್ರಿಯ ಪಂಚಾಯತ್-ನಿರ್ದಿಷ್ಟ ಕೊವಿಡ್ 19 ನಿರ್ವಹಣಾ ತಂತ್ರಗಳನ್ನು ಜಗತ್ತಿನಾದ್ಯಂತ ಪ್ರಶಂಶಿಸಲಾಗುತ್ತಿದೆ.310 ನಗರಗಳನ್ನು ಅಧ್ಯಯನ ಮಾಡಿದ ನಂತರ, ಯುಕೆ ಮೂಲದ ಸಂಶೋಧನಾ ವಿದ್ಯಾಲಯವು ಗಂಜಮ್‌ನ ಕೊವಿಡ್ ನಿರ್ವಹಣಾ ಮಾದರಿಯು ಸೋಮಕು ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ ಎಂದು ಕಂಡುಹಿಡಿದಿದೆ.

ಗಂಜಮ್‌ನಲ್ಲಿ ಮೊದಲ ಪ್ರಕರಣ ಮೇ 2 ರಂದು ದಾಖಲಾಗಿತ್ತು. ಆಗಸ್ಟ್ನಲ್ಲಿ ಶೇ.59ರಷ್ಟು ಕೊರೊನಾ ಸೋಂಕಿತರಿದ್ದರು. ನಂತರ ಕೊರೊನಾ ಸೋಂಕು ತಡೆಗಟ್ಟಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಯಿತು. ಈಗ 20430 ಸೋಂಕಿತರಲ್ಲಿ ಶೇ.98ರಷ್ಟು ಮಂದಿಗೆ ಲಸಿಕೆ ನೀಡಲಾಗಿದ್ದು, ಕೇವಲ 188 ರೋಗಿಗಳು ಮಾತ್ರ ಇದ್ದಾರೆ.

ಕೊರೊನಾ ಸೋಂಕನ್ನು ತಡೆಗಟ್ಟಲು ಸರ್ಪಂಚರಿಗೆ ಅಧಿಕಾರ ನೀಡಿತು. ಪ್ರತಿ ಹಳ್ಳಿಯಲ್ಲೂ ಕೊವಿಡ್ ನಿರ್ವಹಣಾ ಸಮಿತಿಯನ್ನು ಎಚಿಸಲಾಯಿತು. ಸಮಿತಿ ಆರು ಬಾರಿ ಮನೆ ಬಾಗಿಲಿಗೆ ಬಂದು ಕೊರೊನಾ ಸೋಂಕಿನ ಕುರಿತು ವಿಚಾರ ನಡೆಸಿತ್ತು.

ಹಾಗೂ ಐದು ಗ್ರಾಮಗಳಲ್ಲಿ ಆಂಬ್ಯುಲೆನ್ಸ್ ಇರಿಸಲಾಗಿದೆ. ಸಾವಿರಕ್ಕೂ ಹೆಚ್ಚು ಸ್ವಯಂಸೇವಕರಿದ್ದಾರೆ. ಹಾಗೆಯೇ ಮಹಾರಾಷ್ಟ್ರದ ಧಾರಾವಿಯನ್ನು ಕೂಡ ಮಾದರಿಯಾಗಿ ತೆಗೆದುಕೊಂಡಿರುವುದಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹೇಳಿದೆ.

English summary
Oxford University has highly praised the Odisha’s Ganjam model of COVID-19 management and stated that empowerment of Sarpanches in the fight against pandemic proved successful in the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X