ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್‌ ವಿರುದ್ಧ ಹೋರಾಡಲು ಸಾವಯುವ ಮಾಸ್ಕ್ ಬಳಕೆ

|
Google Oneindia Kannada News

ಭುವನೇಶ್ವರ, ಮೇ 30: ಕೊರೊನಾ ವೈರಸ್‌ ವಿರುದ್ಧ ಹೋರಾಡಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಅಗತ್ಯ. ಹಾಗಾಗಿ, ಮಾಸ್ಕ್‌ಗಳಿಗೆ ದೇಶದಲ್ಲಿ ಬೇಡಿಕೆ ಹೆಚ್ಚಿದೆ.

ಕೊವಿಡ್ ಸೋಂಕಿನ ವಿರುದ್ಧ ಹೋರಾಡಲು ಒಡಿಶಾ ಸರ್ಕಾರ ಈಗ ಸಾವಯುವ ಮಾಸ್ಕ್ ಮೊರೆ ಹೋಗಿದೆ. ಸರ್ಕಾರಿ ಸ್ವಾಮ್ಯದಲ್ಲಿರುವ ಉತ್ಕಾಲಿಕಾ ಸಂಸ್ಥೆ ಸಾವಯವ ಮಾಸ್ಕ್‌ಗಳ ಉತ್ಪಾದನೆ ಮತ್ತು ಮಾರಾಟವನ್ನು ಪ್ರಾರಂಭಿಸಿದೆ.

ಶಿವಮೊಗ್ಗ: ಮಾಸ್ಕ್ ಹಾಕದವರಿಂದ ವಸೂಲಿಯಾದ ದಂಡದ ಮೊತ್ತ ಎಷ್ಟು ಗೊತ್ತೇನು?ಶಿವಮೊಗ್ಗ: ಮಾಸ್ಕ್ ಹಾಕದವರಿಂದ ವಸೂಲಿಯಾದ ದಂಡದ ಮೊತ್ತ ಎಷ್ಟು ಗೊತ್ತೇನು?

ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಸ್ವ-ಸಹಾಯ ಮಹಿಳಾ ಗುಂಪುಗಳು ಮಾಸ್ಕ್ ತಯಾರಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸಂಬಲ್‌ಪುರಿ ಹತ್ತಿ ಬಟ್ಟೆಯಿಂದ ಈ ಮಾಸ್ಕ್‌ಗಳನ್ನು ತಯಾರಿಸಲಾಗುತ್ತಿದ್ದು, ಇದು ಗ್ರಾಹಕರನ್ನು ಆಕರ್ಷಿಸುತ್ತಿದೆ.

Organic Face Masks to Fight Covid-19 Pandemic

ಕೋಟ್‌ಪ್ಯಾಡ್‌ (ಕಾಟನ್) ಬಟ್ಟೆಯ ನೈಸರ್ಗಿಕ ಬಣ್ಣ ಹೊಂದಿರುತ್ತದೆ. ಕೈಯಿಂದಲೇ ತಯಾರಿಕೆ ಮಾಡಲಾಗುತ್ತೆ. ಸ್ವಚ್ಛಗೊಳಿಸಿ ಪುನರ್ ಬಳಕೆ ಮಾಡಬಹುದು. ಚರ್ಮವನ್ನು ಕೂಡ ಹಿತಗೊಳಿಸುತ್ತದೆ ಎಂದು ಉತ್ಕಾಲಿಕಾ ವ್ಯವಸ್ಥಾಪಕ ನಿರ್ದೇಶಕ ಅಂಜನಾ ಪಾಂಡ ಹೇಳಿದ್ದಾರೆ.

ವೈದ್ಯರು ಸಹ ಸ್ವಚ್ಛಗೊಳಿಸಿ ಮತ್ತೆ ಬಳಸುವಂತಹ ಮಾಸ್ಕ್ ಬಳಸಲು ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ನೆರವಾಗಲಿ ಎಂದು ತಿಳಿಸಿದ್ದಾರೆ. ಇದುವರೆಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸೇರಿದಂತೆ ವಿವಿಧ ಸಂಸ್ಥೆಗಳು ಮತ್ತು ಕಾರ್ಪೊರೇಟ್‌ಗಳಿಗೆ 'ಉತ್ಕಾಲಿಕಾ' ಸುಮಾರು 2 ಸಾವಿರ ಸಾವಯವ ಮಾಸ್ಕ್‌ಗಳನ್ನು ಪೂರೈಸಿದೆ ಎಂದು ಅಂಜನಾ ಪಾಂಡ ತಿಳಿಸಿದ್ದಾರೆ.

English summary
The Odisha state-owned Utkalika has started production and marketing of organic face masks to fight against coronavirus. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X