ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಡಿಶಾ ಅಧಿಕಾರ ರಾಷ್ಟ್ರೀಯ ಪಕ್ಷಕ್ಕೆ ಸಿಕ್ಕರೆ, ಮೂಲ ಆಶಯಕ್ಕೆ ಸೋಲು: ನವೀನ್ ಪಟ್ನಾಯಕ್

|
Google Oneindia Kannada News

ಭುವನೇಶ್ವರ, ಡಿಸೆಂಬರ್ 19: ಒಡಿಶಾದಲ್ಲಿ ಕೇವಲ ಪ್ರಾದೇಶಿಕ ಪಕ್ಷಗಳೇ ಸರಿಯಾಗಿ ಹೊಂದುತ್ತದೆ. ಒಂದೊಮ್ಮೆ ರಾಜ್ಯವನ್ನು ರಾಷ್ಟ್ರೀಯ ಪಕ್ಷಗಳು ಮುನ್ನಡೆಸಿಕೊಂಡು ಹೋದರೆ ನಮ್ಮ ಮೂಲ ಆಶಯವೇ ನಾಶವಾಗಿಬಿಡುತ್ತದೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ.

ಒಡಿಶಾವನ್ನು ಭಾಷೆಯ ಆಧಾರದ ಮೇಲೆ ಬೇರೆ ರಾಜ್ಯವನ್ನಾಗಿ ವಿಂಗಡಿಸಲಾಗಿದೆ. ಒಡಿಶಾವನ್ನು ಬೇರೆ ರಾಜ್ಯವನ್ನಾಗಿ ಮಾಡುವ ಉದ್ದೇಶವೇ ನಮ್ಮ ರಾಜ್ಯದ, ಸಂಸ್ಕೃತಿ, ವಿಶೇಷತೆ ಉಳಿಯಲಿ ಎಂದು ಶುಕ್ರವಾರ ಬಿಜು ಯುವ ಜನತಾ ದಳದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಡಿಸೆಂಬರ್ 26ರಂದು ಪಕ್ಷದ ಸಂಸ್ಥಾಪನಾ ದಿನಾಚರಣೆ ಇದೆ. ಅದಕ್ಕೂ ಮುನ್ನ ಮುಖ್ಯಮಂತ್ರಿ ಪಟ್ನಾಯಕ್‌ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು.

Only State Parties Fit For Odisha: Naveen Patnaik

ಸಭೆಯಲ್ಲಿ ಬಿಜೆಡಿ ಅಧ್ಯಕ್ಷ ಮಾತನಾಡಿ, ಯಾವ ಪಕ್ಷದ ರಾಜ್ಯದ ಜತೆ ಹಾಗೂ ರಾಜ್ಯದ ಜನತೆ ಜತೆ ಸಂಪರ್ಕದಲ್ಲಿರಿವುದೋ ಅಂತಹ ಪಕ್ಷ ಮಾತ್ರ ಒಡಿಶಾ ಪರ ಯುದ್ಧ ಮಾಡಲಿದೆ.

ಬಿಜೆಪಿಡಿ ಒಂದು ಸ್ಥಳೀಯ ಪಕ್ಷವಾಗಿದೆ. ಹಾಗೆಯೇ ಯಾವ ಕಾರಣದಿಂದ ಒಡಿಶಾ ರಾಜ್ಯ ನಿರ್ಮಾಣವಾಗಿತ್ತೋ ಆ ಕಾರಣವನ್ನು ಮುಂದುವರೆಸಿಕೊಂಡು ಹೋಗುವುದೇ ಪಕ್ಷದ ಉದ್ದೇಶವಾಗಿದೆ. 1936ರಲ್ಲಿ ಭಾಷೆಯ ಆಧಾರದ ಮೇಲೆ ಒಡಿಶಾ ಪ್ರಾಂತ್ಯವನ್ನು ನಿರ್ಮಾಣ ಮಾಡಿದ್ದರು.

ನವೀನ್ ಪಟ್ನಾಯಕ್ ಅವರು ಐದನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ.ರಾಷ್ಟ್ರೀಯ ಪಕ್ಷಗಳು ಇಡೀ ದೇಶದ ತುಂಬಾ ಹಿಂದಿ ಭಾಷೆಯನ್ನು ಹೇರುವ ಪ್ರಯತ್ನ ಮಾಡುತ್ತಿದೆ. ಆದರೆ ನಿಮಗೆ ಹಿಂದಿಗಿಂತ ಒಡಿಯಾ ಭಾಷೆಯೇ ಮುಖ್ಯ, ಮಹಾನದೀ ಬೇರೆಲ್ಲಾ ನದಿಗಳಿಗಿಂತ ಪವಿತ್ರವಾದದ್ದು ಎಂದು ಹೇಳಿದರು.

English summary
Odisha Chief Minister Naveen Patnaik on Friday launched a sharp attack on national parties, more particularly on the BJP, saying these parties were bound to compromise on the distinctive requirements of a State for gains in the larger national context.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X