ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕಾರಿ ದರ್ಪ: ಪಿಂಚಣಿ ಹಣಕ್ಕಾಗಿ ನಡೆದ ಕರುಣಾಜನಕ ಘಟನೆ

|
Google Oneindia Kannada News

ಭುವನೇಶ್ವರ, ಜೂನ್ 16: ಪಿಂಚಣಿ ಹಣ ಪಡೆಯಲು ಬಂದ ಮಹಿಳೆಯ ಮೇಲೆ ಒಡಿಶಾದ ಅಧಿಕಾರಿ ದರ್ಪ ತೋರಿಸಿದ್ದಾನೆ. ಹೀಗಾಗಿ ಸಾರ್ವಜನಿಕರಿಂದ ಅಧಿಕಾರಿ ಮೇಲೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

Recommended Video

ದೇಶದಲ್ಲಿರುವ ಎಲ್ಲಾ ಮುಖ್ಯಮಂತ್ರಿಗಳಿಗೆ ಕರೆಕೊಟ್ಟ ಮೋದಿ | Oneindia Kannada

ಒಡಿಶಾದ ನುವಾಪಾಸ ಜಿಲ್ಲೆಯ ಬರಗನ್ ಎಂಬ ಗ್ರಾಮದಲ್ಲಿ ಈ ಕರುಣಾಜನಕ ಘಟನೆ ನಡೆದಿದೆ. ಲಾಭ್ ಭಾಗೆಲ್ ಎಂಬ 100 ವರ್ಷದ ವೃದ್ಧೆ ತಮ್ಮ ಜನ್ ಧನ್ ಖಾತೆಯಲ್ಲಿರುವ 1500 ರೂಪಾಯಿಗಳನ್ನು ಪಡೆಯಬೇಕಾಗುತ್ತಿತ್ತು. ಹೀಗಾಗಿ, ತನ್ನ 70 ವರ್ಷದ ಮಗಳು ಗುಂಜಾ ದೇವಿಗೆ ತಾನೇ ಹೋಗಿ ತೆಗೆದುಕೊಂಡುಬರುವಂತೆ ಹೇಳಿದ್ದರು.

ಒಡಿಶಾದ ಮಹಾನದಿಯೊಳಗೆ ಮುಳುಗಿ ಹೋಗಿದ್ದ 500 ವರ್ಷ ಹಳೆಯ ದೇವಸ್ಥಾನ ಪತ್ತೆಒಡಿಶಾದ ಮಹಾನದಿಯೊಳಗೆ ಮುಳುಗಿ ಹೋಗಿದ್ದ 500 ವರ್ಷ ಹಳೆಯ ದೇವಸ್ಥಾನ ಪತ್ತೆ

100 ವರ್ಷದ ವೃದ್ಧೆ ಹಾಸಿಗೆ ಹಿಡಿದಿದ್ದು, ಆಕೆಯ ಬದಲಿಗೆ ಮಗಳು ಬ್ಯಾಂಕ್‌ಗೆ ಹೋಗಿ ಹಣ ನೀಡುವಂತೆ ತಿಳಿಸಿದ್ದರು. ಆದರೆ, ಬ್ಯಾಂಕ್‌ ಅಧಿಕಾರಿ ಆಕೆಯ ತಾಯಿಯೇ ಬರಬೇಕು ಆಗ ಮಾತ್ರ ಹಣ ನೀಡಲು ಸಾಧ್ಯ ಎಂದು ಹೇಳಿದ. ಬ್ಯಾಂಕ್ ಅಧಿಕಾರಿ ಏನೇ ಹೇಳಿದರೂ ಒಪ್ಪದ ಕಾರಣ ಆ ಮಹಿಳೆ ತನ್ನ ತಾಯಿಯನ್ನು ಕರೆದುಕೊಂಡು ಬ್ಯಾಂಕ್‌ಗೆ ಬಂದಿದ್ದಾರೆ.

Odisha Woman Dragging Her Mother To Withdraw Pension Money

ಹಾಸಿಗೆ ಹಿಡಿದ 100 ವರ್ಷದ ವೃದ್ಧೆ ಎದ್ದು ನಡೆಯುವುದು ಹೇಗೆ, ಹೀಗಾಗಿ, ಹಾಸಿಗೆ ಸಮೇತ ತನ್ನ ತಾಯಿಯನ್ನು ಬ್ಯಾಂಕ್‌ಗೆ ಕರೆದುಕೊಂಡು ಬಂದಿದ್ದಾರೆ. ಆಗ ಅಧಿಕಾರಿ ಹಣ ನೀಡಿದ್ದಾರೆ. ತನ್ನ ಮನೆಯಿಂದ ಮಹಿಳೆ ಮಂಚದ ಮೇಲೆ ತಾಯಿಯನ್ನು ಮಲಗಿಸಿಕೊಂಡು ಎಳೆದುಕೊಂಡೇ ಬಂದಿದ್ದಾರೆ. ಅಧಿಕಾರಿಯ ಇಂತಹ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.

ನುವಾಪಾದ ಶಾಸಕ ರಾಜು ದೊಲ್ಕಿಯಾ ಈ ಬಗ್ಗೆ ಮಾತನಾಡಿದ್ದು ''ಇದು ಅಮಾನವೀಯ ಘಟನೆಯಾಗಿದ್ದು, ತೀವ್ರವಾಗಿ ಖಂಡಿಸುತ್ತೇನೆ. ಈ ಘಟನೆಯನ್ನು ಸರಕಾರವು ತಕ್ಷಣವೇ ತನಿಖೆ ನಡೆಸುವಂತೆ ಒತ್ತಾಯಿಸುತ್ತೇನೆ'' ಎಂದಿದ್ದಾರೆ.

English summary
A Odisha woman dragging her 100 year old mother to withdraw her pension money from bank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X