ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ವೈದ್ಯನಿಗೆ ಒಡಿಶಾ ಗ್ರಾಮದಲ್ಲಿ ಸ್ಮಾರಕ ನಿರ್ಮಿಸಿ ಗೌರವ ಸಮರ್ಪಣೆ

|
Google Oneindia Kannada News

ಒಡಿಶಾ, ಜೂನ್ 23: ಒಡಿಶಾದ ಕುಗ್ರಾಮವೊಂದರಲ್ಲಿ ಬೆಂಗಳೂರು ಮೂಲದ ವೈದ್ಯರೊಬ್ಬರ ಸ್ಮರಣಾರ್ಥ ಸ್ಮಾರಕ ನಿರ್ಮಿಸುವ ಮೂಲಕ ಗೌರವ ಸಮರ್ಪಿಸಲಾಗುತ್ತಿದೆ.

ಕೊರೊನಾ ಸೋಂಕಿನಿಂದ ಮೇ ತಿಂಗಳಿನಲ್ಲಿ ಸಾವನ್ನಪ್ಪಿದ ಬೆಂಗಳೂರು ಮೂಲದ ವೈದ್ಯ ಶಿರಡಿ ಪ್ರಸಾದ್ ಅವರಿಗೆ ಒಡಿಶಾದ ಸಂಸ್ಥೆಯೊಂದು ಸ್ಮಾರಕ ನಿರ್ಮಿಸುವ ಮೂಲಕ ಗೌರವ ಸಮರ್ಪಿಸುತ್ತಿದೆ.

ಗತಿಸಿದ ಅಮ್ಮನ ಪುತ್ಥಳಿ ನಿರ್ಮಿಸಿ ನಿತ್ಯ ಪೂಜೆ ಸಲ್ಲಿಸುತ್ತಿರುವ ಈ ಕುಲಪುತ್ರ!ಗತಿಸಿದ ಅಮ್ಮನ ಪುತ್ಥಳಿ ನಿರ್ಮಿಸಿ ನಿತ್ಯ ಪೂಜೆ ಸಲ್ಲಿಸುತ್ತಿರುವ ಈ ಕುಲಪುತ್ರ!

ಒಡಿಶಾದಲ್ಲಿ ಬುಡಕಟ್ಟು ಜನಾಂಗದ ಸೇವೆಯಲ್ಲಿ ವೈದ್ಯ ಶಿರಡಿ ಪ್ರಸಾದ್ ತೊಡಗಿಕೊಂಡಿದ್ದರು. ಬುಡಕಟ್ಟು ಜನಾಂಗದ ಏಳಿಗೆಗೆ ಶ್ರಮಿಸುತ್ತಿರುವ ಥ್ರೆಡ್ (ಟೀಮ್ ಫಾರ್ ಹ್ಯೂಮನ್ ರಿಸೋರ್ಸ್, ಆಕ್ಷನ್ ಫಾರ್ ಡೆವಲಪ್ಮೆಂಟ್) ಸಂಸ್ಥೆ ಕೊರೊಪುಟ್ ಜಿಲ್ಲೆಯ ಸಿದ್ಧಾರ್ಥ ವಿಲೇಜ್ ರೆಸಾರ್ಟ್‌ನಲ್ಲಿರುವ ಕೊರೊನಾ ನಿಯಂತ್ರಣ ಕೇಂದ್ರ ಮತ್ತು ಎಕೊ ಫುಡ್‌ ಕೋರ್ಟ್ ಅನ್ನು ವೈದ್ಯರ ಹೆಸರಿನಲ್ಲಿ ಅರ್ಪಿಸಿದ್ದು, ಸ್ಮಾರಕ ನಿರ್ಮಾಣದಲ್ಲಿ ತೊಡಗಿಕೊಂಡಿದೆ.

Odisha Village Honours Bengaluru Doctor With Memorial

Recommended Video

ನಮಗೆ ವಿಷ ಕೊಡಿ ಎಂದು ಭಾರತದ ಬಳಿ ಮನವಿ ಮಾಡಿದ Australia | Oneindia Kannada

1984ರಲ್ಲಿ ಜಾನ್ ಜಾರ್ಜ್ ಎಂಬುವರು ಈ ಟ್ರಸ್ಟ್ ಆರಂಭಿಸಿದರು. "ಡಾ. ಶಿರಡಿ ಪ್ರಸಾದ್ ಅವರು ಕಳೆದ 30 ವರ್ಷಗಳಿಂದಲೂ ನಮ್ಮೊಂದಿಗೆ ನಂಟು ಹೊಂದಿದ್ದರು. ಬುಡಕಟ್ಟು ಸಮುದಾಯ ಆರೋಗ್ಯ, ಗಿಡಮೂಲಿಕೆ ಔಷಧ ಸಂಬಂಧ ಬುಡಕಟ್ಟು ಮಹಿಳೆಯರ ಸಹಯೋಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರ ಸೇವೆ ಎಂದಿಗೂ ಸ್ಮರಣಾರ್ಥ. ಗಿಡಮೂಲಿಕೆಗಳ ಬಳಕೆ ಬಗ್ಗೆ, ಪ್ರಾಚೀನ ಔಷಧಿ ಬಗ್ಗೆ ಸಾಕಷ್ಟು ಚರ್ಚೆಗಳನ್ನು ನಡೆಸಿ, ಅವುಗಳನ್ನು ವೈಜ್ಞಾನಿಕ ಹಾಗೂ ಶುದ್ಧ ರೀತಿಯಲ್ಲಿ ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದರು" ಎಂದು ನೆನಪಿಸಿಕೊಂಡರು.

English summary
Bengaluru based Shirdi prasad tekur, who succumbed to Covid in May, is being honoured with a memorial in a remote village in Odisha
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X