ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಲ್ಮೆಟ್ ಧರಿಸಿಲ್ಲ ಎಂದು ಟ್ರಕ್ ಚಾಲಕನಿಗೆ ದಂಡ ಹಾಕಿದ ಪೊಲೀಸರು

|
Google Oneindia Kannada News

ಒಡಿಶಾ, ಮಾರ್ಚ್ 18: ದ್ವಿಚಕ್ರ ವಾಹನ ಚಾಲಕರು ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಎಂಬುದನ್ನು ಒಪ್ಪೋಣ. ಆದರೆ ಟ್ರಕ್ ಓಡಿಸುವವರಿಗೂ ಹೆಲ್ಮೆಟ್ ಬೇಕಾ? ಇಂಥದ್ದೊಂದು ಅನುಮಾನ ಮೂಡಿರುವುದು ಒಡಿಶಾದಲ್ಲಿ ಸಂಚಾರಿ ಪೊಲೀಸರು ಹಾಕಿರುವ ದಂಡದಿಂದ.

ಹೆಲ್ಮೆಟ್ ಧರಿಸಿಲ್ಲ ಎಂದು ಟ್ರಕ್ ಚಾಲಕರೊಬ್ಬರಿಗೆ ಬರೋಬ್ಬರಿ 1000 ರೂಪಾಯಿ ದಂಡ ಹಾಕಿರುವ ಸಂಗತಿ ಒಡಿಶಾದ ಗಂಜಾಮ್ ಜಿಲ್ಲೆಯಲ್ಲಿ ಬುಧವಾರ ಬೆಳಕಿಗೆ ಬಂದಿದೆ.

ಗಂಜಾಂನ ಜಗನ್ನಾಥಪುರದ ಪ್ರಮೋದ್ ಕುಮಾರ್ ದಂಡ ಹಾಕಿಸಿಕೊಂಡಿರುವ ಟ್ರಕ್ ಚಾಲಕ. ಟ್ರಕ್ ಚಾಲನೆಯ ಪರವಾನಗಿ ನವೀಕರಣಕ್ಕೆ ಸ್ಥಳೀಯ ಆರ್‌ಟಿಒ ಕಚೇರಿಗೆ ಈತ ಭೇಟಿ ನೀಡಿದ್ದು, ಅಧಿಕಾರಿಗಳು ಈ ಹಿಂದೆ ಸಂಚಾರ ನಿಯಮ ಉಲ್ಲಂಘಿಸಿದ್ದ ದಂಡದ ರಶೀದಿ ನೀಡಿದ್ದಾರೆ.

Odisha Truck Driver Fined For Not Wearing Helmet

"ನನ್ನ ಟ್ರಕ್ ಪರವಾನಗಿ ಅವಧಿ ಮೀರಿದ್ದರಿಂದ ಶುಲ್ಕ ಕಟ್ಟಿ ನವೀಕರಣ ಮಾಡಿಸಿಕೊಳ್ಳಲು ಕಚೇರಿಗೆ ಹೋಗಿದ್ದೆ. ಆದರೆ ಈಗಾಗಲೇ ಮೂರು ದಂಡಗಳು ನನ್ನ ವಾಹನದ ಮೇಲಿದೆ ಎಂದು ಅಧಿಕಾರಿಗಳು ತಿಳಿಸಿದರು. ನಾನು ಆ ಹಣವನ್ನು ಪಾವತಿಸಿ ರಶೀದಿ ತೆಗೆದುಕೊಂಡೆ. ಅದನ್ನು ನೋಡಿದಾಗ ತಿಳಿಯಿತು, ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡ ಹಾಕಿದ್ದಾರೆ ಎಂದು. ಟ್ರಕ್‌ಗೆ ಯಾಕೆ ಹೆಲ್ಮೆಟ್ ಧರಿಸಬೇಕು?" ಎಂದು ಪ್ರಶ್ನಿಸಿದ್ದಾರೆ.

ಸುಖಾಸುಮ್ಮನೆ ದಂಡ ವಿಧಿಸಿ ಜನರಿಂದ ಹಣ ಕೀಳುತ್ತಿದ್ದಾರೆ. ಸರ್ಕಾರ ಈ ಕೂಡಲೇ ಕ್ರಮ ವಹಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Truck driver was fined ₹1,000 for driving the vehicle without wearing a helmet in Odisha's Ganjam district on Wednesday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X