ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಡಿಶಾ ಮಳೆ: ಎದೆಯ ಆಳದ ನೀರಿನಲ್ಲಿ ಶವ ಹೊತ್ತೋಯ್ದ ಸಂಬಂಧಿಕರು

|
Google Oneindia Kannada News

ಇಲ್ಲಿ ರಸ್ತೆ ಇಲ್ಲ. ಸೇತುವೆ ಕೂಡ ಇಲ್ಲ. ಮಳೆ ಬಂದರೆ ಜನ ಸಂಚಾರಕ್ಕೆ ದಾರಿ ಕೂಡ ಕಾಣಿಸುವುದಿಲ್ಲ. ನದಿಗಳು ತುಂಬಿ ಈ ಮಾರ್ಗದಲ್ಲಿ ಹರಿದು ಜನರ ಸಂಪರ್ಕವೇ ಕಡಿತಗೊಳ್ಳುತ್ತದೆ. ಈ ನದಿ ವಿರುದ್ಧ ದಿಕ್ಕಿನಲ್ಲಿ ಜನ ಸಾಗಬೇಕು ಅಂದರೆ ಎದೆ ಆಳದ ನೀರಿನಲ್ಲಿ ನಡೆದು ಸಾಗಬೇಕು.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ನಂತರ, ಒಡಿಶಾದ ಕಲಹಂಡಿ ಜಿಲ್ಲೆಯ ಗೋಲಮುಂಡಾ ಬ್ಲಾಕ್‌ನಲ್ಲಿ ಹೊಳೆ ಉಕ್ಕಿ ಹರಿಯುತ್ತಿದೆ. ಪರಿಣಾಮವಾಗಿ, ಬೆಹೆರಗುಡ ಗ್ರಾಮದ ನಿವಾಸಿಗಳು ಅಂತ್ಯಕ್ರಿಯೆ ನಡೆಸಲು ಕಷ್ಟಕರ ಸಮಯವನ್ನು ಎದುರಿಸಬೇಕಾಯಿತು. ಇತ್ತೀಚೆಗೆ ಅನಾರೋಗ್ಯದಿಂದ ಸಾಂತಾ ರಾಣಾ ಎಂಬುವವರು ಸಾವನ್ನಪ್ಪಿದ್ದರು. ಅವರ ಸಂಬಂಧಿಕರು ಅವರ ದೇಹವನ್ನು ಎದೆಯ ಆಳದ ನೀರಿನ ಮೂಲಕ ಸ್ಮಶಾನದ ಮೈದಾನಕ್ಕೆ ಸಾಗಿಸಿದ ದೃಶ್ಯ ವೈರಲ್ ಆಗಿದೆ.

ಬಹಳ ದಿನಗಳಿಂದ ಪಾರ್ಶ್ವವಾಯು ಪೀಡಿತರಾಗಿದ್ದ ಸಾಂತಾ ರಾಣಾ ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. ಜೋರು ಮಳೆಗೆ ಉಕ್ಕಿ ಹರಿಯುತ್ತಿದ್ದ ಹೊಳೆಯಲ್ಲಿ ಇವರ ಶವವನ್ನು ಸಾಗಿಸಲಾಗಿದೆ. ಒಂದು ಬದಿಯಿಂದ ಇನ್ನೊಂದು ಬದಿಯಲ್ಲಿ ಇರುವ ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡಲಾಗಿದೆ.

Odisha: Relatives carried the corpse in chest-deep water

ಹೊಳೆಗೆ ಅಡ್ಡಲಾಗಿ ಸೇತುವೆಯಿಲ್ಲದ ಕಾರಣ, ರಾಣಾ ಅವರ ಸಂಬಂಧಿಕರು ಅವರ ದೇಹವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಆಳವಾದ ನದಿ ನೀರಿನಲ್ಲಿ ಅಲೆದಾಡಿದ್ದಾರೆ ಬೀಳುವ ಮಳೆಯಿಂದ ದೇಹವನ್ನು ರಕ್ಷಿಸಲು ಅವರು ಬಾಳೆ ಎಲೆಗಳನ್ನು ಬಳಸಿದ್ದಾರೆ. ಅವರ ಸಂಕಷ್ಟದ ವಿಡಿಯೋ ವೈರಲ್ ಆಗಿದೆ.

ಗಮನಾರ್ಹವಾಗಿ ಒಡಿಶಾ ಸರ್ಕಾರವು ನಾಲ್ಕು ವರ್ಷಗಳ ಹಿಂದೆ ತಮ್ಮ ಹತ್ತಿರದ ಮತ್ತು ಆತ್ಮೀಯರ ಶವಸಂಸ್ಕಾರದ ವೆಚ್ಚವನ್ನು ಭರಿಸಲಾಗದ ಹಿಂದುಳಿದವರಿಗೆ ಹರಿಶ್ಚಂದ್ರ ಸಹಾಯತಾ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ ಮೃತರ ಕುಟುಂಬಕ್ಕೆ ಅಂತಿಮ ಸಂಸ್ಕಾರ ಮಾಡಲು ರಾಜ್ಯವು 2,000 ರೂ. ನೀಡುತ್ತದೆ.

Odisha: Relatives carried the corpse in chest-deep water

ಆದಾಗ್ಯೂ, ರಾಜನಗರ ಬ್ಲಾಕ್‌ನ ಕುರುಂಟಿ ಪಂಚಾಯತ್‌ನಲ್ಲಿ ಹರಿಶ್ಚಂದ್ರ ಸಹಾಯತಾ ಯೋಜನೆಯಡಿಯಲ್ಲಿ 11 ಜೀವಂತ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಘೋಷಿಸಿದ ನಂತರ ದೊಡ್ಡ ಪ್ರಮಾಣದ ಅಕ್ರಮಗಳು ಬೆಳಕಿಗೆ ಬಂದವು. ಘಟನೆಯ ಹಿನ್ನೆಲೆಯಲ್ಲಿ, ಮೃತರ ಕುಟುಂಬಗಳಿಗೆ ಮೀಸಲಾದ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರ ಗುಂಪು ಜೂನ್ 15 ರಂದು ಬ್ಲಾಕ್ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಿದೆ. ಆದರೆ ಪ್ರಯೋಜನವಾಗಿಲ್ಲ.

Recommended Video

ಭ್ರಷ್ಟರ ಬೇಟೆಯಾಡೋಕೆ ಮತ್ತೆ ರೆಡಿಯಾದ ಲೋಕಾಯುಕ್ತ: ಹಾಗಾದ್ರೆ ACB ಕತೆಯೇನು? | Oneindia Kannada

English summary
An incident took place in Golamunda block of Odisha's Kalahandi district where the river was overflowing and people face problem to cremate the dead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X