ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌-19 ಹೆಚ್ಚಳ: ಒಡಿಶಾದಲ್ಲಿ ಒಂದು ದಿನದಲ್ಲೇ 12,523 ಮಂದಿಗೆ ಪಾಸಿಟಿವ್‌

|
Google Oneindia Kannada News

ಭುವನೇಶ್ವರ, ಮೇ 21: ಎರಡು ವಾರಗಳಿಗಿಂತ ಅಧಿಕ ಕಾಲ ಒಡಿಶಾ ರಾಜ್ಯದಲ್ಲಿ ಲಾಕ್‌ಡೌನ್‌ ಮಾಡಿದ್ದರೂ ಕೂಡಾ ರಾಜ್ಯದಲ್ಲಿ ಕೊರೊನಾ ವೈರಸ್‌ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ. ಒಡಿಶಾದಲ್ಲಿ ಶುಕ್ರವಾರ ಒಂದು ದಿನದಲ್ಲೇ 12,523 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಇನ್ನು ಕಳೆದ 24 ಗಂಟೆಗಳಲ್ಲಿ ಒಡಿಶಾದಲ್ಲಿ 27 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು ಕೊರೊನಾ ಸೋಂಕು ರಾಜ್ಯದಲ್ಲಿ ಪತ್ತೆಯಾದ ಬಳಿಕ ದಾಖಲೆಯ ಕೊರೊನಾ ಸೋಂಕು ಸಾವು ಪ್ರಕರಣ ಇದಾಗಿದೆ. ರಾಜ್ಯದಲ್ಲಿ ಒಟ್ಟು 2430 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.

ಒಡಿಶಾ: ಕೊರೊನಾ ರೋಗಿಗಳ ಅರೆಬೆಂದ ದೇಹ ನಾಯಿಗಳ ಪಾಲು.! ಒಡಿಶಾ: ಕೊರೊನಾ ರೋಗಿಗಳ ಅರೆಬೆಂದ ದೇಹ ನಾಯಿಗಳ ಪಾಲು.!

ಒಡಿಶಾ ರಾಜ್ಯದಲ್ಲಿ ಲಾಕ್‌ಡೌನ್‌ ಇದ್ದರೂ ಕೂಡಾ ಕೊರೊನಾ ಸೋಂಕು ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ. ಕಳೆದ 10 ದಿನಗಳಿಂದ ಒಡಿಶಾದಲ್ಲಿ 10,000 ದಷ್ಟು ಕೊರೊನಾ ಸೋಂಕು ಪ್ರಕರಣಗಳು ದಾಖಲಾಗುತ್ತಿದೆ.

Odisha records 12,523 new covid-19 cases on may 21st.

ಶುಕ್ರವಾರ ಒಡಿಶಾದಲ್ಲಿ ದಾಖಲಾದ 12,523 ಹೊಸ ಕೊರೊನಾ ಪ್ರಕರಣಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 6,68,422 ಕ್ಕೆ ಏರಿಕೆಯಾಗಿದೆ. ಈ ಪೈಕಿ 1,09,438 ಪ್ರಕರಣಗಳು ಪ್ರಸ್ತುತ ಸಕ್ರಿಯವಾಗಿದೆ.

ಕೊರೊನಾ ಸೋಂಕು ಹೆಚ್ಚಳ: ಒಡಿಶಾದಲ್ಲಿ 14 ದಿನಗಳ ಲಾಕ್‌ಡೌನ್ಕೊರೊನಾ ಸೋಂಕು ಹೆಚ್ಚಳ: ಒಡಿಶಾದಲ್ಲಿ 14 ದಿನಗಳ ಲಾಕ್‌ಡೌನ್

ರಾಜ್ಯದ ಖೋರ್ಧಾ ಜಿಲ್ಲೆಯಲ್ಲಿ ಹೆಚ್ಚು ಕೋವಿಡ್‌ -19 ಪ್ರಕರಣಗಳು ದಾಖಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಈ ಒಂದು ಜಿಲ್ಲೆಯಲ್ಲೇ 1842 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಕಟಕ್‌ನಲ್ಲಿ 1084 ಪ್ರಕರಣಗಳು ದಾಖಲಾಗಿದೆ. ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳಕ್ಕೆ ಅಲ್ಲಿ ಸೋಂಕು ಪರೀಕ್ಷೆ ಅಧಿಕಗೊಳಿಸಿರುವುದೇ ಕಾರಣ ಎಂದು ಕೂಡಾ ಹೇಳಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
The number of coronavirus cases continues to rise in odisha. State records 12,523 new covid-19 cases on may 21st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X