ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಫೋನಿ' ಸಮೀಕ್ಷೆಗೆ ಬಂದು ಪಟ್ನಾಯಕ್ ಗೆ ಸಲಾಂ ಎಂದ ಮೋದಿ

|
Google Oneindia Kannada News

ಭುವನೇಶ್ವರ, ಮೇ 06: ಫೋನಿ ಸೈಕ್ಲೋನ್ ಪೀಡಿತ ಒಡಿಶಾದಲ್ಲಿ ಸೋಮವಾರ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಹಾಡಿ ಹೊಗಳಿದರು.

"ನವೀನ್ ಪಟ್ನಾಯಕ್ ಅವರು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಜೊತೆಗೆ ಅವರು ನೀಡಿದ್ದ ಸೂಚನೆಯನ್ನು ಚಾಚೂ ತಪ್ಪದೆ ಪಾಲಿಸಿದ ಒಡಿಶಾ ಜನರ ನಡೆ ಕೂಡ ಶ್ಲಾಘನೀಯ" ಎಂದು ಮೋದಿ ಹೇಳಿದರು.

 ಫೋನಿ ಚಂಡಮಾರುತ ಪೀಡಿತ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ ಫೋನಿ ಚಂಡಮಾರುತ ಪೀಡಿತ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ

ಕೇಂದ್ರ ಸರ್ಕಾರವು ಕಳೆದ ವಾರ ಸೈಕ್ಲೋನ್ ಪೀಡಿತ ಒಡಿಶಾಕ್ಕೆ 1000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಮತ್ತೆ 1000 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಮೋದಿ ಹೇಳಿದ್ದಾರೆ.

Odisha: PM Modi praises Naveen Patnaik for his great work after Cyclone Fani

ಒಡಿಶಾದಲ್ಲಿ ಉಂಟಾದ ಫೋನಿ ಚಂಡಮಾರುತಕ್ಕೆ ಇದುವರೆಗೂ 34 ಜನ ಮೃತರಾಗಿದ್ದು, ನೂರಾರು ಜನ ಗಾಯಗೊಂಡಿದ್ದಾರೆ. ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ಈ ಮುನಿಸು ತರವೇ?! ಪ್ರಧಾನಿ ಮೋದಿ ಕರೆ ಮಾಡಿದರೂ ಕ್ಯಾರೆ ಎನ್ನದ ದೀದಿ! ಈ ಮುನಿಸು ತರವೇ?! ಪ್ರಧಾನಿ ಮೋದಿ ಕರೆ ಮಾಡಿದರೂ ಕ್ಯಾರೆ ಎನ್ನದ ದೀದಿ!

5000 ಆಶ್ರಯ ತಾಣಗಳನ್ನು ನಿರ್ಮಿಸಲಾಗಿದ್ದು, 1500 ಕ್ಕೂ ಹೆಚ್ಚು ಬಸ್ ಗಳ ಮೂಲಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಗಂಟೆಗೆ 200 ಕಿಮೀ. ವೇಗದಲ್ಲಿ ಗಾಳಲಿ ಬೀಸುತ್ತಿರುವುದರಿಂದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯುಂಟಾಗಿದೆ. 10,000 ಹಳ್ಳಿಗಳ ಸುಮಾರು ಒಂದು ಕೋಟಿಗೂ ಅಧಿಕ ಜನರು ಸೈಕ್ಲೋನ್ ಪರಿಣಾಮ ಎದುರಿಸುತ್ತಿದ್ದಾರೆ. ಒಡಿಶಾದ ಪ್ರಸಿದ್ಧ ಪುರಿಯ ಜಗನ್ನಾಥ ಮಂದಿರವೂ ಪುರಿ ಸೈಕ್ಲೋನ್ ನಿಂದ ಹಾನಿಯೊಳಗಾಗಿದೆ ಎನ್ನಲಾಗಿದೆ.

English summary
PM Narendra Modi conducts an aerial survey of Cyclone fani affected areas in Odisha. He praises CM Naveen Patnaik for his great work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X