• search
  • Live TV
ಭುವನೇಶ್ವರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಘಾತಕಾರಿ ಘಟನೆ: ಟಿ.ವಿ. ಚಾನೆಲ್ ಉದ್ಯೋಗಿಗಳಿಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

|

ಭುವನೇಶ್ವರ್, ಸೆಪ್ಟೆಂಬರ್ 11: ಬಿಜೆಪಿ ನಾಯಕ ಬೈಜಯಂತ್ ಪಂಡಾ ಅವರ ಪತ್ನಿ ಹಾಗೂ OTVಯ ವ್ಯವಸ್ಥಾಪಕ ನಿರ್ದೇಶಕಿ ಜಗಿ ಪಂಡಾ ಮತ್ತು ಅಪ್ರಾಪ್ತ ವಯಸ್ಸಿನ ಅತ್ಯಾಚಾರ ಸಂತ್ರಸ್ತೆಯ ತಾಯಿ ನಡುವೆ ನಡೆದಿದೆ ಎನ್ನಲಾದ ದೂರವಾಣಿ ಮಾತುಕತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅತ್ಯಾಚಾರಕ್ಕೆ ಒಳಗಾಗಿದ್ದ ಅಪ್ರಾಪ್ತ ವಯಸ್ಸಿನ ಮಗಳನ್ನು ಟಿವಿ ವಾಹಿನಿಯ ಕಚೇರಿಗೆ ಕರೆತಂದು ಬಳಿಕ ತಾನು ಕ್ರಮ ತೆಗೆದುಕೊಳ್ಳುವುದಾಗಿ ಚಾನೆಲ್‌ನ ಎಂ.ಡಿ. ಆ ತಾಯಿಗೆ ಹೇಳಿರುವುದು ದಾಖಲಾಗಿದೆ.

90 ವರ್ಷದ ವೃದ್ಧೆಯನ್ನು ಹೊಲಕ್ಕೆ ಎಳೆದೊಯ್ದು ಅತ್ಯಾಚಾರ

ಚಾನೆಲ್‌ನಲ್ಲಿ ಕೆಲಸ ಮಾಡುವ ಕೆಲವು ಉದ್ಯೋಗಿಗಳೇ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಒಡಿಶಾ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಒಎಸ್‌ಸಿಪಿಸಿಆರ್) ಭುವನೇಶ್ವರ ಮೂಲದ ಖಾಸಗಿ ಸುದ್ದಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕಿ ಜಗಿ ಪಂಡಾ ವಿರುದ್ಧ ಕಠಿಣ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಆಯುಕ್ತರು ಹಾಗೂ ಖೋರ್ದಾ ಕಲೆಕ್ಟರ್‌ಗೆ ಸೂಚನೆ ನೀಡಿದೆ. ಅದರ ಬೆನ್ನಲ್ಲೇ ಈ ಸಂಭಾಷಣೆ ವೈರಲ್ ಆಗಿದೆ. ಮುಂದೆ ಓದಿ.

15 ದಿನ ಅತ್ಯಾಚಾರ

15 ದಿನ ಅತ್ಯಾಚಾರ

ಸಂತ್ರಸ್ತೆ ಬಾಲಕಿಯ ತಾಯಿ ಇದೇ ಚಾನೆಲ್‌ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಅತ್ಯಾಚಾರ ಘಟನೆ ಬಗ್ಗೆ ಅವರು ಒಎಸ್‌ಸಿಪಿಸಿಆರ್‌ಗೆ ದೂರು ನೀಡಿದ್ದರು. ಮಹಿಳೆ ನೀಡಿರುವ ದೂರಿನ ಪ್ರಕಾರ, ಏಪ್ರಿಲ್-ಮೇ ಅವಧಿಯಲ್ಲಿ ಸುಮಾರು 15 ದಿನಗಳ ಕಾಲ ಚಾನೆಲ್‌ನ ಅನೇಕ ಉದ್ಯೋಗಿಗಳು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ವಿಡಿಯೋ ಬಿಡುಗಡೆ ಬೆದರಿಕೆ

ವಿಡಿಯೋ ಬಿಡುಗಡೆ ಬೆದರಿಕೆ

ಮಗಳ ಕೈ ಕಾಲುಗಳನ್ನು ಕಟ್ಟಿಹಾಕಿ ಆರೋಪಿಗಳು ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಅತ್ಯಾಚಾರದ ವಿಡಿಯೋಗಳನ್ನು ಕೂಡ ಅವರು ರೆಕಾರ್ಡ್ ಮಾಡಿಕೊಂಡಿದ್ದು, ಇದರ ಬಗ್ಗೆ ಯಾರಿಗಾದರೂ ತಿಳಿಸಿದರೆ ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಮುಚ್ಚಿಹಾಕಲು ಪ್ರಯತ್ನ

ಮುಚ್ಚಿಹಾಕಲು ಪ್ರಯತ್ನ

ಬಾಲಕಿಯು ತಮ್ಮ ಹೆಸರು ಹೇಳಿದರೆ ಆಕೆ ಹಾಗೂ ಆಕೆಯ ತಾಯಿ ಇಬ್ಬರನ್ನೂ ಕೊಂದು ಹಾಕುವುದಾಗಿ ಕೂಡ ಚಾನೆಲ್‌ನ ಉದ್ಯೋಗಿಗಳು ಬೆದರಿಸಿದ್ದರು. ಈ ಘಟನೆಯ ಬಗ್ಗೆ ನ್ಯೂಸ್ ಚಾನೆಲ್‌ನ ಎಂ.ಡಿ.ಗೆ ಆಗಲೇ ಮಾಹಿತಿ ನೀಡಿದ್ದರೂ ಆರೋಪಿಗಳ ವಿರುದ್ಧ ಅವರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಬದಲಾಗಿ ಘಟನೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದರು. ಈ ಪ್ರಕರಣದಲ್ಲಿ ಮುಂದುವರಿಯದಂತೆ ಒತ್ತಡ ಹೇರಿದ್ದರು ಎಂದು ಕೂಡ ಆರೋಪಿಸಿದ್ದಾರೆ.

48 ಗಂಟೆಯಲ್ಲಿ ವರದಿಗೆ ಸೂಚನೆ

48 ಗಂಟೆಯಲ್ಲಿ ವರದಿಗೆ ಸೂಚನೆ

ಒಟಿವಿ ವಾಹಿನಿಯ ಎಂಡಿ ಪೋಕ್ಸೋ ಕಾಯ್ದೆಯ ಸೆಕ್ಷನ್ 19, 20 ಮತ್ತು 21ರ ಅಡಿ ಹಾಗೂ ಐಪಿಸಿ ಸೆಕ್ಷನ್‌ನ ವಿವಿಧ ಕಾನೂನುಗಳ ಅಡಿ ಅಪರಾಧ ಎಸಗಿರುವುದು ಕಂಡುಬಂದಿದೆ. ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಒಎಸ್‌ಸಿಪಿಸಿಆರ್ ತಿಳಿಸಿದೆ.

48 ಗಂಟೆಗಳ ಒಳಗೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲು ಹಾಗೂ ತನಿಖೆಯ ವರದಿಯನ್ನು ಸಲ್ಲಿಸುವಂತೆ ಕಲೆಕ್ಟರ್ ಹಾಗೂ ಪೊಲೀಸ್ ಆಯುಕ್ತರಿಗೆ ಒಎಸ್‌ಸಿಪಿಸಿಆರ್ ಸೂಚನೆ ನೀಡಿದೆ.

English summary
Odisha minor girl gang rape case: Telephone conversation between MD of OTV and victim's mother goes viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X