• search
  • Live TV
ಭುವನೇಶ್ವರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

3.5 ಲಕ್ಷ ವೆಚ್ಚದ ಚಿನ್ನದ ಮಾಸ್ಕ್ ಮಾಡಿಸಿಕೊಂಡ ಮತ್ತೊಬ್ಬ ಉದ್ಯಮಿ

|

ಭುವನೇಶ್ವರ, ಜುಲೈ 17: ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಮಾಸ್ಕ್ ಮೂಲಭೂತ ವಸ್ತುವಾಗಿದೆ. ಮಾಸ್ಕ್ ಇಲ್ಲದೇ ಹೊರಗೆ ಹೋಗುವಂತಿಲ್ಲ. ಒಂದು ವೇಳೆ ಮಾಸ್ಕ್ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡರೂ ದಂಡ ವಿಧಿಸಲಾಗುತ್ತಿದೆ.

ಪ್ರಸ್ತುತ, ಮನುಷ್ಯ ಜೀವನದ ಅವಿಭಾಜ್ಯ ಅಂಗ ಎನಿಸಿಕೊಂಡಿರುವ ಮಾಸ್ಕ್‌ನ್ನೇ ಚಿನ್ನದಲ್ಲಿ ಮಾಡಿಸಿಕೊಂಡಿರುವ ಘಟನೆ ಒಡಿಶಾದ ಕಟಕ್‌ನಲ್ಲಿ ವರದಿಯಾಗಿದೆ.

ಈ ವ್ಯಕ್ತಿ ಧರಿಸಿರುವ ಮಾಸ್ಕ್‌ಗೆ 3 ಲಕ್ಷ: ಇದ್ರಿಂದ ವೈರಸ್ ಬರಲ್ವಾ?

ಸುಮಾರು 3.5 ಲಕ್ಷ ವೆಚ್ಚದಲ್ಲಿ ಚಿನ್ನದ ಮಾಸ್ಕ್ ಮಾಡಿಸಿಕೊಂಡು ಒಡಿಶಾ ಮೂಲದ ಉದ್ಯಮಿ ಗಮನ ಸೆಳೆದಿದ್ದಾರೆ. ಮುಂಬೈನ ಝಾವೇರಿ ಬಜಾರ್‌ನಲ್ಲಿ ಈ ಮಾಸ್ಕ್ ಖರಿದೀಸಿದ್ದಾರೆ. ಹೊಸದಾಗಿ 3.5 ಲಕ್ಷ ನೀಡಿ ಚಿನ್ನದ ಮಾಸ್ಕ್ ಪಡೆದಿರುವ ಈ ವ್ಯಕ್ತಿಯ ಹೆಸರು ಅಲೋಕ್ ಮೊಹಂತಿ. ಪ್ರಸ್ತುತ, ಕಟಕ್‌ನ ಕೇಶರಪುರ ಪ್ರದೇಶದ ನಿವಾಸಿಯಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಲೋಕ್ ಮೊಹಂತಿ ''ನಾನು ಇತ್ತೀಚೆಗೆ ಟಿವಿಯಲ್ಲಿ ಚಿನ್ನದ ಮುಖವಾಡ ಧರಿಸಿದ ಉದ್ಯಮಿಯೊಬ್ಬನನ್ನು ನೋಡಿದ್ದೆ. ನಾನು ಚಿನ್ನದ ಬಗ್ಗೆ ಒಲವು ಹೊಂದಿದ್ದರಿಂದ ಮುಂಬೈ ಮೂಲದ ವ್ಯಾಪಾರಿ ಮೂಲಕ ಆರ್ಡರ್ ಮಾಡಿಸಿದ್ದೆ. ಇದು N95 ಮಾಸ್ಕ್ ಆಗಿದ್ದು, ಇದರಲ್ಲಿ 90 ರಿಂದ 100 ಗ್ರಾಂ ಚಿನ್ನದ ಎಳೆಗಳನ್ನು ಬಳಸಲಾಗಿದೆ. ಮಾಸ್ಕ್ ಉಸಿರಾಡಲು ರಂಧ್ರಗಳನ್ನು ಹೊಂದಿದೆ ಮತ್ತು ಧರಿಸಲು ಅನುಕೂಲಕರವಾಗಿದೆ'' ಎಂದು ಸಂತಸ ಹಂಚಿಕೊಂಡಿದ್ದಾರೆ.

ಇದಕ್ಕೂ ಮುಂಚೆ ಸುಮಾರು 10 ದಿನಗಳ ಹಿಂದೆ ಪುಣೆಯ ಪಿಂಪ್ರಿ-ಚಿಂಚ್‌ವಾಡ್ ನಿವಾಸಿ ಶಂಕರ್ ಕುರಾಡೆ ಅವರು ಸುಮಾರು 3 ಲಕ್ಷ ರೂಪಾಯಿ ವೆಚ್ಚದಲ್ಲಿ ಚಿನ್ನದ ಮಾಸ್ಕ್ ಮಾಡಿಸಿಕೊಂಡು ಹಾಕಿಕೊಂಡಿದ್ದರು. ಇದು ಬಹುದೊಡ್ಡ ಸುದ್ದಿಯಾಗಿತ್ತು. ಇದೀಗ, ಈ ವ್ಯಕ್ತಿಯ ಸ್ಫೂರ್ತಿಯಿಂದ ಒಡಿಶಾ ಉದ್ಯಮಿ ಸಹ ಚಿನ್ನದ ಮಾಸ್ಕ್ ಮಾಡಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಚಿನ್ನದ ಮೇಲೆ ಬಹಳ ಆಸಕ್ತಿ ಹೊಂದಿರುವ ಅಲೋಕ್ ಮೊಹಂತಿ ಕಟಕ್‌ನಲ್ಲಿ ಪೀಠೋಪಕರಣಗಳ ಅಂಗಡಿಯೊಂದನ್ನು ಹೊಂದಿದ್ದಾರೆ. ಸಾಕಷ್ಟು ಚಿನ್ನದ ಕಡಗಗಳು, ಚಿನ್ನದ ಉಂಗುರಗಳು ಮತ್ತು ಚಿನ್ನದ ಸರಪಣಿಗಳನ್ನು ಧರಿಸುತ್ತಾರೆ. ಚಿನ್ನದ ಕ್ಯಾಪ್ ಸಹ ಹೊಂದಿದ್ದಾರೆ ಎನ್ನುವುದು ವಿಶೇಷ.

English summary
After inspired from Pune business man now odisha man got himself a gold mask in the price of 3.5 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X