ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಗ್ರಹಣಾ ಸ್ಥಳಗಳಲ್ಲಿ ಕೋವಿಡ್-19 ಲಸಿಕೆ ಸುರಕ್ಷತೆಗೆ ಎಸ್‌ಒಪಿ

|
Google Oneindia Kannada News

ಭುವನೇಶ್ವರ, ಜನವರಿ 9: ಕೋವಿಡ್ ಲಸಿಕೆಗಳ ಸಂಗ್ರಹ ಸ್ಥಳಗಳು, ಸಾಗಾಣಿಕೆ ಮತ್ತು ಲಸಿಕೆ ನೀಡುವ ಸ್ಥಳಗಳಲ್ಲಿ ಅದರ ಸುರಕ್ಷತೆ ಹಾಗೂ ಭದ್ರತೆಗಾಗಿ ಒಡಿಶಾ ಸರ್ಕಾರ ಎಸ್‌ಒಪಿ ಬಿಡುಗಡೆ ಮಾಡಿದೆ.

ಪ್ರಮಾಣಿಕೃತ ಕಾರ್ಯಾಚರಣೆ ವಿಧಾನಕ್ಕೆ (ಎಸ್‌ಒಪಿ) ಅನುಗುಣವಾಗಿ ಕಾರ್ಯ ನಿರ್ವಹಿಸುವಂತೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿಕೆ ಮೊಹಾಪಾತ್ರ ಅವರು ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಎಸ್‌ಪಿಗಳಿಗೆ ಪತ್ರ ಬರೆದಿದ್ದಾರೆ. ಅದರಲ್ಲಿನ ವಿವರಗಳು ಈ ಕೆಳಕಂಡಂತೆ ಇದೆ.

 ಜ.11ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮೋದಿ ಸಭೆ ಜ.11ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮೋದಿ ಸಭೆ

* 'ಔಷಧ ಮತ್ತು ಕಾಸ್ಮೆಟಿಕ್ ಕಾಯ್ದೆ, 1940 ಮತ್ತು ನಿಯಮಗಳು 1945ರ ಪ್ರಕಾರ ಸರ್ಕಾರದ ಪೂರೈಕೆ ಅಡಿಯಲ್ಲಿನ ಕೋವಿಡ್-19 ಲಸಿಕೆಗಳ ಅನಧಿಕೃತ ಸಂಗ್ರಹ/ಹಂಚಿಕೆ/ಖರೀದಿ ಅಥವಾ ಮಾರಾಟವು ಶಿಕ್ಷಾರ್ಹ ಅಪರಾಧ. ಇಂತಹ ಚಟುವಟಿಕೆಗಳ ಕುರಿತು ಔಷಧ ನಿಯಂತ್ರಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡುವುದು ಅಗತ್ಯವಾಗಿದೆ'.

Odisha Issues SOP For Safety And Security Of Covid-19 Vaccine At Storage Sites, Session Sites

* ಲಸಿಕೆಗಳ ಪೂರೈಕೆ ನಿರ್ಗಮನದಿಂದ ತಲುಪುವವರೆಗಿನ ಪ್ರಕ್ರಿಯೆಗಳನ್ನು ಟ್ರ್ಯಾಕ್ ಮಾಡುವಂತೆ ಮತ್ತು ಪ್ರತಿ ಡೋಸ್‌ಗಳು ವೈಯಕ್ತಿಕ ಫಲಾನುಭವಿಗಳಿಗೆ ಸಂಪರ್ಕಿಸುವಂತೆ ಕೋ-ವಿನ್ ಪೋರ್ಟಲ್ ಅನ್ನು ವಿನ್ಯಾಸಗೊಳಿಸಲಾಗಿದೆ. ಕೋವಿಡ್-19 ಲಸಿಕೆಯ ವಿವರಗಳು (ಹೆಸರು, ಬ್ಯಾಚ್, ಉತ್ಪಾದನಾ ದಿನಾಂಕ) ಎಲ್ಲವನ್ನೂ ವಿದ್ಯುನ್ಮಾನ ಡೇಟಾಬೇಸ್‌ನಲ್ಲಿ ಉಲ್ಲೇಖಿಸಲಾಗುತ್ತದೆ. ಜತೆಗೆ ಲಸಿಕೆಗಳ ಡೋಸ್‌ಗಳು ಹಾಗೂ ಬ್ಯಾಚ್ ಸಂಖ್ಯೆಗಳನ್ನು ವಿದ್ಯುನ್ಮಾನ ವ್ಯವಸ್ಥೆಯನ್ನು ಬಳಸುವ ಮೂಲಕ ಮಾತ್ರವೇ ಪ್ರತಿ ಸ್ಥಳಕ್ಕೂ ಹಂಚಿಕೆ ಮಾಡಲಾಗುತ್ತದೆ.

* ಎಲ್ಲ ಭಾಗಶಃ ಬಳಕೆಯಾದ ಖಾಲಿ ನಳಿಗೆಗಳನ್ನು ಕೋಲ್ಡ್ ಚೈನ್ ಪಾಯಿಂಟ್‌ಗಳಿಗೆ ವಾಪಸ್ ತರಬೇಕಾಗುತ್ತದೆ. ಅವುಗಳನ್ನು ಸಿಪಿಸಿಬಿ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಾಶಪಡಿಸಬೇಕು. ಖಾಲಿ ನಳಿಗೆಗಳನ್ನು ಯಾರೊಬ್ಬರೂ ದುರ್ಬಳಕೆ ಮಾಡದಂತೆ ತಡೆಯಲು ಅದರ ಲೇಬಲ್ ಸಹಿತ ನಾಶಪಡಿಸುವುದನ್ನು ಖಾತರಿಪಡಿಸಿಕೊಳ್ಳಬೇಕು.

ದೇಶದಲ್ಲಿ ಶೀಘ್ರದಲ್ಲಿಯೇ ಬರಲಿದೆ ಮೂಗಿನ ಮೂಲಕ ನೀಡುವ ಕೋವಿಡ್-19 ಲಸಿಕೆದೇಶದಲ್ಲಿ ಶೀಘ್ರದಲ್ಲಿಯೇ ಬರಲಿದೆ ಮೂಗಿನ ಮೂಲಕ ನೀಡುವ ಕೋವಿಡ್-19 ಲಸಿಕೆ

* ಆರಂಭಿಕ ಹಂತಗಳಲ್ಲಿ ಸೀಮಿತ ಲಸಿಕೆಗಳು ಲಭ್ಯವಾಗುವುದರಿಂದ ಲಸಿಕೆಗಳ ಸುರಕ್ಷತೆಗಾಗಿ ಸಂಗ್ರಹಾಗಾರ ಸ್ಥಳಗಳಲ್ಲಿ, ಅವುಗಳ ಸಾಗಾಣಿಕೆಯಲ್ಲಿ ಮತ್ತು ಲಸಿಕೆ ನೀಡುವ ಸ್ಥಳಗಳಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಬೇಕು.

ಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತುಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತು

* ಕೋವಿಡ್-19 ಲಸಿಕೆಗಳ ಸುರಕ್ಷತೆ ಮತ್ತು ಭದ್ರತೆ ಹಾಗೂ ಅವುಗಳ ದುರ್ಬಳಕೆಯನ್ನು ತಡೆಯಲು ಸ್ಥಳೀಯ ಮಟ್ಟದ ಕ್ರಮದ ಅಗತ್ಯವಿರುವುದರಿಂದ ಜಿಲ್ಲೆಗಳು ಮತ್ತಷ್ಟು ಸೂಕ್ತ ಹೆಜ್ಜೆಗಳನ್ನು ತೆಗೆದುಕೊಳ್ಳಬಹುದು.

English summary
Odisha government has issued SOP for safety and security of Covid 19 vaccine at storage sites, session sites and during transportation, warns misues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X