ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ತ ಮೇಲೆ ಕೊರೊನಾ ಪರೀಕ್ಷೆ ಏಕೆ?, ಬೇಡ ಎಂದ ಆರೋಗ್ಯ ಇಲಾಖೆ

|
Google Oneindia Kannada News

ಭುವನೇಶ್ವರ, ಸೆಪ್ಟೆಂಬರ್ 23: ಮರಣ ಹೊಂದಿದ ಮೇಲೆ ಕೊರೊನಾ ಪರೀಕ್ಷೆಯ ಅಗತ್ಯವಿಲ್ಲವೆಂದು ಒಡಿಶಾ ಸರ್ಕಾರದ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಆಸ್ಪತ್ರೆಯಲ್ಲಿ ಅನೇಕ ಕಾರಣಗಳಿಂದ ಮೃತಪಟ್ಟ ಪ್ರಕರಣಗಳಲ್ಲಿ ಕೊವಿಡ್-19 ಟೆಸ್ಟ್​ನಿಂದಾಗಿ ಶವ ಹಸ್ತಾಂತರ ವಿಳಂಬ ಇತ್ಯಾದಿ ಸಂಕಷ್ಟ ಉಂಟಾಗಿದ್ದು ವರದಿಯಾಗಿದೆ.

ಡೆಂಗ್ಯೂ ಜ್ವರ ಬಂದು ಹೋಗಿದ್ದರೆ ಕೊರೊನಾ ಬರೋದು ಡೌಟು: ಅಧ್ಯಯನ ಡೆಂಗ್ಯೂ ಜ್ವರ ಬಂದು ಹೋಗಿದ್ದರೆ ಕೊರೊನಾ ಬರೋದು ಡೌಟು: ಅಧ್ಯಯನ

ಆಸ್ಪತ್ರೆಯಲ್ಲಿ ತಮ್ಮವರನ್ನು ಕಳೆದುಕೊಂಡ ಸಂಬಂಧಿಕರು ಮೊದಲೇ ನೊಂದಿರುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಶವ ಹಸ್ತಾಂತರ ವಿಳಂಬ ಆಗುವುದು ಮತ್ತಿತರ ಕಾರಣಗಳಿಂದ ಇನ್ನಷ್ಟು ನೋವು ಉಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಈ ಆದೇಶ ಮಾಡಿರುವುದಾಗಿ ಹೇಳಿಕೊಂಡಿದೆ.

ಸತ್ತ 48 ಗಂಟೆಯೊಳಗಾಗಿ ಡೆತ್ ಸರ್ಟಿಫಿಕೇಟ್

ಸತ್ತ 48 ಗಂಟೆಯೊಳಗಾಗಿ ಡೆತ್ ಸರ್ಟಿಫಿಕೇಟ್

ಜತೆಗೆ ಕೊವಿಡ್​ನಿಂದ ಮೃತಪಟ್ಟವರ ಕುಟುಂಬಕ್ಕೆ 48 ಗಂಟೆಯೊಳಗೆ ಡೆತ್​ ಸರ್ಟಿಫಿಕೇಟ್​ ಕೊಡಬೇಕು ಎಂಬುದಾಗಿಯೂ ತಾಕೀತು ಮಾಡಿದೆ.
ರೋಗಿಗೆ ಮಧುಮೇಹಿತ್ತು ಅಥವಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ, ಅವರ ಸ್ವಾಬ್​ ತೆಗೆದು ಕೋವಿಡ್​-19 ಪರೀಕ್ಷೆ ಕಳುಹಿಸಲಾಗಿದೆ.
ವರದಿ ಇನ್ನೂ ಬಂದಿಲ್ಲ, ಹಗಾಗಿ ಶವವನ್ನು ಹಸ್ತಾಂತರ ಮಾಡುತ್ತಿಲ್ಲ ಎಂಬ ಎಷ್ಟೋ ದೂರುಗಳು ಕೇಳಿಬಂದಿವೆ.

ಗೊಂದಲದ ಪರಿಸ್ಥಿತಿ

ಗೊಂದಲದ ಪರಿಸ್ಥಿತಿ

ಕೊರೊನಾ ಹಿನ್ನೆಲೆಯಲ್ಲಿ ಇಂಥ ಹಲವು ಸಂದಿಗ್ಧ ಎದುರಾಗುವುದು ಹೊಸದೇನಲ್ಲ. ಇದೀಗ ಇಂಥ ಸನ್ನಿವೇಶಗಳು ಸೃಷ್ಟಿ ಆಗದಿರಲೆಂದೇ ಸತ್ತ ಮೇಲೆ ಕೊರೊನಾ ಪರೀಕ್ಷೆ ಮಾಡಿಸುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಮೃತದೇಹವನ್ನು ನೋಡಲು ಕುಟುಂಬದವರಿಗೆ ಸಾಧ್ಯವಾಗುತ್ತಿರಲಿಲ್ಲ

ಮೃತದೇಹವನ್ನು ನೋಡಲು ಕುಟುಂಬದವರಿಗೆ ಸಾಧ್ಯವಾಗುತ್ತಿರಲಿಲ್ಲ

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದವರ ಮೃತದೇಹವನ್ನು ನೋಡಲು ಕುಟುಂಬದವರಿಗೆ ಅವಕಾಶ ಮಾಡಿಕೊಡುತ್ತಿರಲಿಲ್ಲ, ಕೆಲವರು ದೂರದಿಂದಲೇ ನೋಡುತ್ತಿದ್ದರು, ಅಂತ್ಯಕ್ರಿಯೆಗೆ ಹೋಗುತ್ತಿರಲಿಲ್ಲ, ಇನ್ನೂ ಕೆಲವು ಪ್ರಕರಣಗಳಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬಗ್ಗೆ ಸುದ್ದಿ ನೀಡದೆಯೇ ಮಣ್ಣಾಗಿಸುತ್ತಿದ್ದರು.

Recommended Video

ಮಗ , ಮೊಮ್ಮಗನಿಂದ ಸರ್ಕಾರ ಲೂಟಿ? | Oneindia Kannada
ಮೃತಪಟ್ಟ ಮೇಲೆ ಕೊರೊನಾ ಪರೀಕ್ಷೆ ಏಕೆ?

ಮೃತಪಟ್ಟ ಮೇಲೆ ಕೊರೊನಾ ಪರೀಕ್ಷೆ ಏಕೆ?

ರೋಗಿಯು ಆಸ್ಪತ್ರೆಯಲ್ಲಿ ಮೃತಪಟ್ಟಮೇಲೆ ಮುಗಿಯಿತು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಯೇ ಅವರ ಅಂತ್ಯಕ್ರಿಯೆ ನಡೆಸಲಾಗುತ್ತದೆ, ಹಾಗಿದ್ದಾಗ ಅವರಿಗೆ ಕೊರೊನಾ ಸೋಂಕು ಇತ್ತೇ, ಇಲ್ಲವೇ ಎಂಬುದು ಮುಖ್ಯವಾಗುವುದಿಲ್ಲ ಎಂಬುದು ಆರೋಗ್ಯ ಇಲಾಖೆಯ ಅಭಿಪ್ರಾಯವಾಗಿದೆ.

English summary
Odisha Government has asked both State-run and private hospitals to avoid conducting coronavirus tests on the bodies of patients dying while undergoing treatment for non-COVID ailments, an official said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X