ನೀಟ್, ಜೆಇಇ ಅಭ್ಯರ್ಥಿಗಳಿಗೆ ವಸತಿ, ಪ್ರಯಾಣ ಉಚಿತ: ಒಡಿಶಾ ಸರ್ಕಾರ ಘೋಷಣೆ
ಭುವನೇಶ್ವರ, ಆಗಸ್ಟ್ 29: ನೀಟ್, ಜೆಇಇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಒಡಿಶಾ ಸರ್ಕಾರ ವಸತಿ ಉಚಿತವಾಗಿ ನೀಡುತ್ತಿದ್ದು, ಪ್ರಯಾಣ ವೆಚ್ಚವನ್ನೂ ಭರಿಸುವುದಾಗಿ ತಿಳಿಸಿದೆ.
ರಾಜ್ಯದಲ್ಲಿರುವ 7 ರಾಜ್ಯಗಳಿಂದ 26 ಕೇಂದ್ರಗಳನ್ನು ತೆರೆಯಲಾಗಿದೆ. ಆ ಕೇಂದ್ರಕ್ಕೆ ಬರುವ ಎಲ್ಲಾ ಅಭ್ಯರ್ಥಿಗಳ ಪ್ರಯಾಣ ಹಾಗೂ ವಸತಿ ವಚ್ಚವನ್ನು ಸರ್ಕಾರ ತುಂಬಲಿದೆ.
ಹಾಗೆಯೇ ಅಂತರ ಜಿಲ್ಲೆ ಮಧ್ಯೆ ಪ್ರಯಾಣ ನಡೆಸುವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೂ ಉಚಿತ ಪ್ರಯಾಣ ಅವಕಾಶ ನೀಡಲಾಗಿದೆ.
ನೀಟ್, ಜೆಇಇ ಪರೀಕ್ಷೆ ವಿರೋಧಿಸಿ 6 ಬಿಜೆಪಿಯೇತರ ರಾಜ್ಯಗಳಿಂದ ಸುಪ್ರೀಂಕೋರ್ಟ್ ಗೆ ಅರ್ಜಿ
ಕೊರೊನಾ ಸೋಂಕಿ ಬಳಿಕ ಅತಿಯಾದ ಮಳೆ ಒಡಿಶಾವನ್ನು ನಲುಗಿಸಿತ್ತು. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಪರೀಕ್ಷೆಯನ್ನು ಮುಂದೂಡುವಂತೆ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಸುಮಾರು 37 ಸಾವಿರ ಮಂದಿ ಪರೀಕ್ಷೆಯನ್ನು ಬರೆಯುವ ನಿರೀಕ್ಷೆ ಇದೆ. ಯಾವುದೇ ವಿದ್ಯಾರ್ಥಿಗಳು ಪ್ರಯಾಣ ಹಾಗೂ ವಸತಿಗೆ ತೊಂದರೆಯಾಗುತ್ತಿದ್ದರೆ ಸರ್ಕಾರವೇ ಆ ಖರ್ಚನ್ನು ಭರಿಸಲಿದೆ.ಜೊತೆಗೆ ಕೊವಿಡ್ ನಿಯಮಗಳನ್ನು ಕೂಡ ಗಮನದಲ್ಲಿಟ್ಟುಕೊಳ್ಳಲಾಗುತ್ತದೆ.
ಸರ್ಕಾರಿ ಮತ್ತು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿಗೆ, ಪರೀಕ್ಷೆ ಸಂದರ್ಭದಲ್ಲಿ ಹಾಸ್ಟೆಲ್ಗಳನ್ನು ತೆರೆಯಲು ಸೂಚನೆ ನೀಡಲಾಗಿದೆ. ಶುಕ್ರವಾರ ಒಡಿಶಾ ಪಬ್ಲಿಕ್ ಸರ್ವೀಸ್ ಕಮಿಷನ್ ಸಿವಿಲ್ ಸರ್ವೀಸ್ ಪರೀಕ್ಷೆಯನ್ನು ನವೆಂಬರ್ಗೆ ಮುಂದೂಡಿ ಆದೇಶ ಹೊರಡಿಸಿದೆ. ದಿನಾಂಕವನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.