ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕು ಹೆಚ್ಚಳ: ಒಡಿಶಾದಲ್ಲಿ 14 ದಿನಗಳ ಲಾಕ್‌ಡೌನ್

|
Google Oneindia Kannada News

ಭುವನೇಶ್ವರ, ಮೇ 02: ಒಡಿಶಾದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ 14 ದಿನಗಳ ಲಾಕ್‌ಡೌನ್ ವಿಧಿಸಲಾಗಿದೆ.

ಕಳೆದ 24ಗಂಟೆಗಳಲ್ಲಿ ಒಡಿಶಾದಲ್ಲಿ 8,105 ಕೋವಿಡ್ ಪ್ರಕರಣ ಹಾಗೂ 14 ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ ಕೋವಿಡ್ ಸೋಂಕಿನಿಂದ 3,689 ಜನರು ಸಾವನ್ನಪ್ಪಿದ್ದು, 3,92,488 ಕೋವಿಡ್ 19 ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 1,95,57,457ಕ್ಕೆ ಏರಿಕೆಯಾಗಿದೆ.

ಭಾರತದಲ್ಲಿ ಒಂದೇ ದಿನ 3,92,488 ಮಂದಿಗೆ ಕೊರೊನಾವೈರಸ್ ಭಾರತದಲ್ಲಿ ಒಂದೇ ದಿನ 3,92,488 ಮಂದಿಗೆ ಕೊರೊನಾವೈರಸ್

ಮೇ 5ರಿಂದ 19ರವರೆಗೆ ಒಟ್ಟು 14 ದಿನಗಳ ಕಾಲ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿರಲಿದೆ. ಲಾಕ್ ಡೌನ್ ಸಂದರ್ಭದಲ್ಲಿ ಜನರು 500 ಮೀಟರ್ ವ್ಯಾಪ್ತಿಯೊಳಗೆ ಬೆಳಗ್ಗೆ 7ರಿಂದ 12ಗಂಟೆಯೊಳಗೆ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಿರುವುದಾಗಿ ಒಡಿಶಾ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಹೇಳಿದೆ. ಅಲ್ಲದೆ, ಲಾಕ್ ಡೌನ್ ಸಂದರ್ಭದಲ್ಲಿ ಆರೋಗ್ಯ ಸೇವೆ ಸೇರಿದಂತೆ ತುರ್ತು ಸೇವೆಗಳಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ತಿಳಿಸಿದೆ.

Odisha Govt Announces a 14 Day Lockdown From 5th To May 19

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಲೆಯ ಹರಡುವಿಕೆ ವೇಗ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 3,92,488 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

Karnataka By Elections Results 2021 Live Updates: ಬಸವಕಲ್ಯಾಣ ಬಿಜೆಪಿ ತೆಕ್ಕೆಗೆ, ಮಸ್ಕಿ ಕಾಂಗ್ರೆಸ್ ವಶಕ್ಕೆ Karnataka By Elections Results 2021 Live Updates: ಬಸವಕಲ್ಯಾಣ ಬಿಜೆಪಿ ತೆಕ್ಕೆಗೆ, ಮಸ್ಕಿ ಕಾಂಗ್ರೆಸ್ ವಶಕ್ಕೆ

ದೇಶದಲ್ಲಿ ಒಂದೇ ದಿನ 3689 ಮಂದಿ ಕೊವಿಡ್-19 ನಿಂದ ಪ್ರಾಣ ಬಿಟ್ಟಿದ್ದು, ಇದೇ ಅವಧಿಯಲ್ಲಿ 3,07,865 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಭಾನುವಾರದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು 1,95,57,457 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಕೊವಿಡ್-19 ಮಹಾಮಾರಿಗೆ ಈವರೆಗೂ 2,15,542 ಸೋಂಕಿತರು ಬಲಿಯಾಗಿದ್ದು, 1,59,92,271 ಮಂದಿ ಗುಣಮುಖರಾಗಿದ್ದಾರೆ. ಇದರ ಹೊರತಾಗಿ 33,49,644 ಸಕ್ರಿಯ ಪ್ರಕರಣಗಳಿವೆ.

English summary
The Odisha government on Sunday announced a 14-day lockdown in the state as cases continue to rise sharply. The lockdown will remain in force with effect from May 5 till May 19, 2021, an official order informed on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X