ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ್-ಜಾತಿ ವಿವಾಹದ ಪ್ರೋತ್ಸಾಹಧನ ಅರ್ಜಿ ಸಲ್ಲಿಕೆಗೆ ಹೊಸ ವೆಬ್ ಸೈಟ್

|
Google Oneindia Kannada News

ಭುವನೇಶ್ವರ್, ಅಕ್ಟೋಬರ್.30: ಅಂತರ್-ಜಾತಿ ವಿವಾಹಕ್ಕೆ ಪ್ರೋತ್ಸಾಹ ಧನ ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದೇ ಬೇಕಿಲ್ಲ. ನೀವು ಕುಳಿತಲ್ಲೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ 60 ದಿನಗಳಲ್ಲಿ ಸರ್ಕಾರದಿಂದ ಸಹಾಯಧನವು ನಿಮ್ಮ ಖಾತೆಗೆ ಜಮಾ ಆಗಲಿದೆ.

ಒಡಿಶಾದಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಸರ್ಕಾರವು ಇಂಥದೊಂದು ವಿನೂತನ ಸರ್ಕಾರಿ ವೆಬ್ ಸೈಟ್ ಗೆ ಚಾಲನೆ ನೀಡಿದೆ. ಅಂತರ್-ಜಾತಿ ವಿವಾಹಕ್ಕೆ ಪ್ರೋತ್ಸಾಹ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಸುಮಂಗಲ ವೆಬ್ ಸೈಟ್ ನ್ನು ಪ್ರಾರಂಭಿಸಲಾಗಿದೆ. ಇದರಿಂದ ಸಾಮಾಜಿಕ ಸಾಮರಸ್ಯ ಕಾಪಾಡುವುದಕ್ಕೆ ಸಾಧ್ಯವಾಗುತ್ತದೆ ಎನ್ನುವುದು ಸಿಎಂ ನವೀನ್ ಪಟ್ನಾಯಕ್ ಸರ್ಕಾರದ ನಂಬಿಕೆ ಎಂದು ವರದಿಯಾಗಿದೆ.

ಅಂತರ್ಜಾತಿ ವಿವಾಹ: ಎಸ್ ಸಿ ಯವಕರಿಗೆ 3 ಲಕ್ಷ, ಯುವತಿಯರಿಗೆ 5 ಲಕ್ಷ ಅಂತರ್ಜಾತಿ ವಿವಾಹ: ಎಸ್ ಸಿ ಯವಕರಿಗೆ 3 ಲಕ್ಷ, ಯುವತಿಯರಿಗೆ 5 ಲಕ್ಷ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇಲಾಖೆ ಹಾಗೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯು ಈ ವೆಬ್ ಸೈಟ್ ನ್ನು ಅಭಿವೃದ್ಧಿಪಡಿಸಿದೆ. ಕಳೆದ 2018ರಲ್ಲಿ ಅಂತರ್-ಜಾತಿ ವಿವಾಹಕ್ಕೆ ನೀಡುವ ಪ್ರೋತ್ಸಾಹ ಧನದ ಮೊತ್ತವನ್ನು 1 ಲಕ್ಷದಿಂದ 2.50 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿತ್ತು.

Odisha Government Launches Web Portal SUMANGAL To Promote Inter-Caste Marriages

ದಂಪತಿ ಬ್ಯಾಂಕ್ ಖಾತೆಗೆ ಹಣ ಜಮಾವಣೆ:

ಅಂತರ್-ಜಾತಿ ವಿವಾಹ ಮಾಡಿಕೊಂಡ ದಂಪತಿಯು ಸುಮಂಗಲ ವೆಬ್ ಸೈಟ್ ನಲ್ಲಿ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸಬೇಕು. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ದಂಪತಿಯ ಹೆಸರಿನಲ್ಲಿರುವ ಜಂಟಿ ಬ್ಯಾಂಕ್ ಖಾತೆಗೆ ಅರ್ಜಿ ಸಲ್ಲಿಸಿದ 60 ದಿನಗಳಲ್ಲೇ ಪ್ರೋತ್ಸಾಹ ಧನದ ಮೊತ್ತವು ಜಮಾವಣೆ ಆಗುತ್ತದೆ. ಆದರೆ ಮದುವೆಯಾಗಿ ಮೂರು ವರ್ಷಗಳ ನಂತರವಷ್ಟೇ ಈ ಹಣವನ್ನು ಬ್ಯಾಂಕ್ ನಿಂದ ಬಿಡಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗುತ್ತದೆ.

2017-18ನೇ ಸಾಲಿನಲ್ಲಿ 543 ದಂಪತಿ ಈ ಯೋಜನೆಯ ಉಪಯೋಗವನ್ನು ಪಡೆದುಕೊಂಡಿದ್ದಾರೆ. ಒಡಿಶಾ ಸರ್ಕಾರವು ಅಂತರ್-ಜಾತಿ ವಿವಾಹವಾದ ದಂಪತಿಗೆ ಪ್ರೋತ್ಸಾಹ ಧನ ನೀಡುವುದಕ್ಕಾಗಿ 2.65 ಕೋಟಿ ರೂಪಾಯಿ ಖರ್ಚು ಮಾಡಿದೆ.

ಈ ಯೋಜನೆ ಫಲಾನುಭವಿ ಆಗಬೇಕಿದ್ದಲ್ಲಿ ಹಿಂದೂ ವಿವಾಹ ಕಾಯ್ದೆ 1955ರ ಅಡಿಯಲ್ಲಿ ಮದುವೆ ಕುರಿತು ನೋಂದಣಿ ಮಾಡಿಕೊಳ್ಳುವುದು. ಈ ವೇಳೆ ಪತ್ನಿ ಹಿಂದುಳಿದ ಜಾತಿ ಅಥವಾ ಹಿಂದುಳಿದ ಜನಾಂಗಕ್ಕೆ ಸೇರಿದವರು ಆಗಿರಬೇಕು. ಒಂದು ವೇಳೆ ಪತ್ನಿಯು ಮೇಲ್ವರ್ಗಕ್ಕೆ ಸೇರಿದವರಾಗಿದ್ದಲ್ಲಿ ಪತಿಯು ಎಸ್ ಸಿ ಅಥವಾ ಎಸ್ ಟಿಗೆ ಸೇರಿದವರು ಆಗಿರಬೇಕು. ಒಟ್ಟಿನಲ್ಲಿ ದಂಪತಿ ಪೈಕಿ ಒಬ್ಬರು ಎಸ್ ಸಿ, ಎಸ್ ಟಿಗೆ ಸೇರಿದವರು ಆಗಿದ್ದಲ್ಲಿ ಮಾತ್ರ ಪ್ರೋತ್ಸಾಹ ಧನವನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿದೆ.

ಮೊದಲ ಬಾರಿ ಮದುವೆಯಾಗುವ ದಂಪತಿಗೆ ಮಾತ್ರ ಈ ಯೋಜನೆಯು ಅನ್ವಯವಾಗುತ್ತದೆ. ವಿಧವೆ ಮತ್ತು ಪತ್ನಿ ತೀರಿಕೊಂಡ ಪತಿಯು ಅಂತರ್-ಜಾತಿ ವಿವಾಹವಾದರು ಕೂಡಾ ಯೋಜನೆಯ ಫಲಾನುಭವಿ ಆಗಬಹುದು. ಈ ಪ್ರೋತ್ಸಾಹ ಧನವನ್ನು ಭೂಮಿ ಖರೀದಿ, ಹೊಸ ವ್ಯಾಪಾರ ಆರಂಭ ಸೇರಿದಂತೆ ಹಲವು ಉದ್ದೇಶಗಳಿಗೆ ಬಳಸಿಕೊಳ್ಳುವುದಕ್ಕೆ ಅವಕಾಶವಿದೆ.

ವಿದ್ಯಾರ್ಥಿ ವೇತನಕ್ಕೂ ಹೊಸ ವೆಬ್ ಸೈಟ್:

ಒಡಿಶಾ ಸರ್ಕಾರವು ಮತ್ತೊಂದು ವೆಬ್ ಸೈಟ್ ನ್ನು ಆರಂಭಿಸಿದ್ದು, ಇದು ವಿದ್ಯಾರ್ಥಿಗಳಿಗೆ ಸಹಾಯ ಧನ ಅರ್ಜಿ ಸಲ್ಲಿಸುವುದಕ್ಕೆ ನೆರವಾಗಲಿದೆ. ರಾಜ್ಯದ ಎಂಟು ಇಲಾಖೆಗಳು ನೀಡುವ 21 ಬಗೆಯ ವಿದ್ಯಾರ್ಥಿ ವೇತನವನ್ನು ಯಾವುದೇ ಸ್ಪರ್ಧೆಯಿಲ್ಲದೇ ಅರ್ಹ ವಿದ್ಯಾರ್ಥಿಗಳು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಹಿಂದುಳಿದ ಜನಾಂಗಕ್ಕೆ ಸೇರಿದ 11 ಲಕ್ಷ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

English summary
The Odisha Government Launched A Web Portal SUMNAGAL To Promote Inter-Caste Marriages, Raises Incentive To Rs 2.5 Lakh. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X