ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳಾ ಸ್ವಸಹಾಯ ಗುಂಪುಗಳಿಗಾಗಿಯೇ ಪ್ರತ್ಯೇಕ ಇಲಾಖೆ

|
Google Oneindia Kannada News

ಭುವನೇಶ್ವರ, ಮಾರ್ಚ್ 8: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಒಡಿಶಾ ಸರ್ಕಾರವು 'ಮಿಷನ್ ಶಕ್ತಿ ಇಲಾಖೆ' ಎಂಬ ರಾಜ್ಯದಲ್ಲಿನ ಮಹಿಳಾ ಸ್ವಸಹಾಯ ಗುಂಪುಗಳ (ಎಸ್‌ಎಚ್‌ಜಿ) ಸಶಕ್ತೀಕರಣಕ್ಕಾಗಿ ಹೊಸ ಇಲಾಖೆಯನ್ನು ಸ್ಥಾಪಿಸಲು ನಿರ್ಧರಿಸಿದೆ.

ಮಿಷನ್ ಶಕ್ತಿ ನಿರ್ದೇಶನಾಲಯ ಮತ್ತು ಒಡಿಶಾ ಜೀವನೋಪಾಯ ಯೋಜನೆಗಳನ್ನು (ಒಎಲ್‌ಎಂ) ಮಿಷನ್ ಶಕ್ತಿ ಇಲಾಖೆ ಅಡಿ ತರಬೇಕೆಂಬ ಸಾಮಾನ್ಯ ಆಡಳಿತ ಮತ್ತು ಸಾರ್ವಜನಿಕ ಅಹವಾಲು ಇಲಾಖೆ ಮುಂದಿರಿಸಿದ್ದ ಪ್ರಸ್ತಾಪವನ್ನು ಮುಖ್ಯಮಂತ್ರಿ ನವಿನ್ ಪಟ್ನಾಯಕ್ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿದೆ. ಮಹಿಳಾ ಸ್ವಸಹಾಯ ಗುಂಪುಗಳಿಗಾಗಿ ಪ್ರತ್ಯೇಕ ಇಲಾಖೆಯೊಂದನ್ನು ಸೃಷ್ಟಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು 2020ರ ಮಾರ್ಚ್ 8ರಂದು ಮುಖ್ಯಮಂತ್ರಿ ಪ್ರಕಟಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Odisha Government Announces Mission Shakti A Separate Department To Strengthen SHGs

'ಇಲಾಖೆಗಳು ಮತ್ತು ಸಂಸ್ಥೆಗಳು ಈಗಾಗಲೇ ತೆಗೆದುಕೊಂಡಿರುವ ಎಸ್‌ಎಚ್‌ಜಿ ಕಾರ್ಯಕ್ರಮಗಳನ್ನು ಬಲಪಡಿಸುವಲ್ಲಿ ಹೊಸ ಇಲಾಖೆ ಸಹಾಯ ಮಾಡಲಿದೆ. ಜತೆಗೆ ಎಲ್ಲ ಯೋಜನೆಗಳನ್ನು ಒಂದು ವೇದಿಕೆಯಡಿ ತರುವ ಮೂಲಕ ಹೆಚ್ಚಿನ ಗಮನ ಹರಿಸಲು, ಹೊಂದಾಣಿಕೆ ಹಾಗೂ ಚಟುವಟಿಕೆಗಳ ಪುನರಾವರ್ತನೆ ತಪ್ಪಿಸಲು ನೆರವು ನೀಡಲಿದೆ' ಎಂದು ರಾಜ್ಯ ಸಂಪುಟ ಸಭೆಯ ಬಳಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ವಸಹಾಯ ಗುಂಪುಗಳು ಮತ್ತು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಅವುಗಳ ಸಂಘಟನೆಗಳೊಂದಿಗೆ ಇಲಾಖೆ ಕೆಲಸ ಮಾಡಲಿದೆ ಎಂದು ಅಧಿಕಾರಿ ಹೇಳಿದ್ದಾರೆ. ಮಿಷನ್ ಶಕ್ತಿಯು 2001ರಿಂದ ನಡೆಯುತ್ತಿರುವ ಎಸ್‌ಎಚ್‌ಜಿ ಚಳವಳನ್ನು ಒಂದೆಡೆ ಸಂಘಟಿಸಲಿದೆ.

ಸರ್ಕಾರಿ ಸ್ವಾಮ್ಯದ ಒಎಂಸಿ ಲಿಮಿಟೆಡ್‌ಗೆ, 2020-21ನೇ ಹಣಕಾಸು ಸಾಲಿನಲ್ಲಿ ರಾಷ್ಟ್ರೀಯ ಇ-ಹರಾಜು ಮೂಲಕ ಮಾರಲು ಉದ್ದೇಶಿಸಿರುವ ತನ್ನ ಸಂಪೂರ್ಣ ಪ್ರಮಾಣದ ಬಾಕ್ಸೈಟ್ ಖನಿಜವನ್ನು ತನ್ನ ದೀರ್ಘಕಾಲದ ಸಂಪರ್ಕ ಪೂರೈಕೆದಾರ ವೇದಾಂತ ಲಿಮಿಟೆಡ್‌ಗೆ ಮಾರಾಟ ಮಾಡಲು ಉಕ್ಕು ಹಾಗೂ ಗಣಿ ಇಲಾಖೆಯು ಮುಂದಿರಿಸಿದ್ದ ಪ್ರಸ್ತಾಪವನ್ನು ರಾಜ್ಯ ಸಂಪುಟ ಅಂಗೀಕರಿಸಿದೆ. ಪ್ರತಿ ಮೆಟ್ರಿಕ್ ಟನ್‌ಗೆ 1000 ರೂ.ದಂತೆ ಮಾರಾಟ ದರ ವಿಧಿಸಲಾಗಿದೆ.

ಅಲ್ಲದೆ, ಒರಿಸ್ಸಾ ಹೈಕೋರ್ಟ್ ನಿಗದಿಪಡಿಸಿರುವಂತೆ ಒಎಂಸಿಯು ಭೇದಾತ್ಮಕ ದರವನ್ನು ಪಾವತಿಸುವ ಕ್ರಮವನ್ನು ತೆಗೆದುಕೊಳ್ಳಲಿದೆ. ಇದು 2020-21ನೇ ಹಣಕಾಸು ವರ್ಷದ ಒಂದು ಸಮಯದ ಮಾನದಂಡಕ್ಕೆ ಸೀಮಿತವಾಗಿರುವಂತೆ ನಡೆಯುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

ಬಾಲಸೋರ್ ಜಿಲ್ಲೆಯ ರೆಮುನಾ ತಾಲ್ಲೂಕು ವ್ಯಾಪ್ತಿಯಲ್ಲಿನ ಸಮಾಲ್ಪುರ ಗ್ರಾಮದಲ್ಲಿ 12.09 ದಶಮಾಂಶ ಹಾಗೂ ಬಂಪಡಾ ಗ್ರಾಮದಲ್ಲಿ 12.91 ದಶಮಾಂಶ ಅಳತೆಯ ಸರ್ಕಾರಿ ಭೂಮಿಯನ್ನು ಭುವನೇಶ್ವರದಲ್ಲಿ ಏಮ್ಸ್‌ನ ಉಪಗ್ರಹ ಕೇಂದ್ರ ಸ್ಥಾಪಿಸುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಉಚಿತವಾಗಿ ಭೋಗ್ಯಕ್ಕೆ ನೀಡಲು ಸರ್ಕಾರ ನಿರ್ಧರಿಸಿದೆ.

ರಾಜ್ಯ ಸಂಪುಟವು ಶನಿವಾರ ನಡೆಸಿದ ಸಂಪುಟ ಸಭೆಯಲ್ಲಿ ಒಟ್ಟು 16 ಪ್ರಸ್ತಾಪಗಳಿಗೆ ಅನುಮೋದನೆ ನೀಡಲಾಗಿದೆ.

English summary
The Odisha government has announced a separate department Mission Shakti to strengthen women Self Help Groups in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X