ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಡಿಶಾ ಪ್ರವಾಹ: 1,757 ಗ್ರಾಮಗಳ 4.67 ಲಕ್ಷ ಮಂದಿ ನಿರಾಶ್ರಿತರು!

|
Google Oneindia Kannada News

ಭುವನೇಶ್ವರ, ಆಗಸ್ಟ್‌ 18: ಒಡಿಶಾದ 10 ಜಿಲ್ಲೆಗಳ 1,757 ಗ್ರಾಮಗಳಲ್ಲಿ 4.67 ಲಕ್ಷಕ್ಕೂ ಹೆಚ್ಚು ಜನರು ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿಯಿಂದ ಸಂತ್ರಸ್ತರಾಗಿದ್ದಾರೆ ಎಂದು ವಿಶೇಷ ಪರಿಹಾರ ಆಯುಕ್ತ ಪ್ರದೀಪ್ ಕುಮಾರ್ ಜೆನಾ ಮಾಹಿತಿ ನೀಡಿದ್ದಾರೆ.

ಭಾರೀ ಮಳೆಯಿಂದ ನಂತರ ಉಂಟಾದ ಪ್ರವಾಹದಿಂದಾಗಿ 425 ಹಳ್ಳಿಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಜನರು ಅಕ್ಷರಶಃ ನಿರ್ಗತಿಕರಾಗಿದ್ದಾರೆ. 10 ಜಿಲ್ಲೆಗಳಲ್ಲಿ ಒಟ್ಟು 4.67 ಲಕ್ಷ ಜನರು ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. ಬುಧವಾರ ಸಂಜೆ ವೇಳೆಗೆ 60,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜೆನಾ ಹೇಳಿದರು.

ಒಡಿಶಾ ಮಳೆ: ಎದೆಯ ಆಳದ ನೀರಿನಲ್ಲಿ ಶವ ಹೊತ್ತೋಯ್ದ ಸಂಬಂಧಿಕರುಒಡಿಶಾ ಮಳೆ: ಎದೆಯ ಆಳದ ನೀರಿನಲ್ಲಿ ಶವ ಹೊತ್ತೋಯ್ದ ಸಂಬಂಧಿಕರು

ಒಡಿಶಾ ರಾಜ್ಯದಲ್ಲಿ ಆಡಳಿತವು ಜಾಗರೂಕವಾಗಿದೆ. ಅಗತ್ಯವಿದ್ದರೆ, ನಾವು ಹೆಚ್ಚಿನ ಜನರನ್ನು ಸ್ಥಳಾಂತರಿಸುತ್ತೇವೆ. ಸ್ಥಳಾಂತರಿಸಲ್ಪಟ್ಟವರಿಗೆ ಆಹಾರ ಮತ್ತು ನೀರನ್ನು ಒದಗಿಸಲಾಗುತ್ತಿದೆ. ಹಿರಾಕುಡ್ ಜಲಾಶಯದಿಂದ 40 ಗೇಟ್‌ಗಳ ಮೂಲಕ ಪ್ರವಾಹದ ನೀರನ್ನು ಹೊರಬಿಡಲಾಗುತ್ತಿದ್ದು, ಅಣೆಕಟ್ಟಿನ ಪ್ರವಾಹದ ಒಳಹರಿವು 6.69 ಲಕ್ಷ ಕ್ಯೂಸೆಕ್‌ನಿಂದ 5.80 ಲಕ್ಷ ಕ್ಯೂಸೆಕ್‌ಗೆ ಇಳಿಕೆಯಾಗಿದೆ ಎಂದು ಹಿರಾಕುಡ್ ಅಣೆಕಟ್ಟಿನ ಪ್ರವಾಹದ ನೀರಿನ ಮಟ್ಟದ ಸ್ಥಿತಿಯ ಬಗ್ಗೆ ಜೆನಾ ಅವರು ತಿಳಿಸಿದರು.

ಕಟಕ್, ಜಗತ್‌ಸಿಂಗ್‌ಪುರ, ಕೇಂದ್ರಪದ ಮತ್ತು ಪುರಿ ಜಿಲ್ಲೆಗಳ ತಗ್ಗು ಪ್ರದೇಶಗಳ ಮೂಲಕ ಗರಿಷ್ಠ ಪ್ರವಾಹ ಹಾದು ಹೋಗುವುದರಿಂದ ಮತ್ತು ನಾಳೆಯಿಂದ ನೀರಿನ ಮಟ್ಟ ಕಡಿಮೆಯಾಗುವ ಸಾಧ್ಯತೆಯಿರುವುದರಿಂದ ಗುರುವಾರ ರಾತ್ರಿ ನಿರ್ಣಾಯಕವಾಗಿದೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 11 ತಂಡಗಳು, ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ಒಡಿಆರ್‌ಎಫ್) 12 ತಂಡಗಳು ಮತ್ತು ಒಡಿಶಾ ಅಗ್ನಿಶಾಮಕ ಸೇವೆಗಳ 52 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಜೆನಾ ಮಾಹಿತಿ ನೀಡಿದರು.

 ಪ್ರವಾಹ ಪರಿಸ್ಥಿತಿಯನ್ನು ಪರಿಶೀಲನೆ

ಪ್ರವಾಹ ಪರಿಸ್ಥಿತಿಯನ್ನು ಪರಿಶೀಲನೆ

ಏತನ್ಮಧ್ಯೆ, ಶಾಲಾ ಕಟ್ಟಡಗಳನ್ನು ಆಶ್ರಯ ಮತ್ತು ಪರಿಹಾರ ವಿತರಣೆಗೆ ಲಭ್ಯವಾಗುವಂತೆ ರಾಜ್ಯ ಸರ್ಕಾರವು ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮಂಗಳವಾರ ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಪ್ರವಾಹದಿಂದಾಗಿ ಸಾವುನೋವುಗಳನ್ನು ತಡೆಯಲು ಮತ್ತು ಜನಸಾಮಾನ್ಯರ ಜೀವನಕ್ಕೆ ಯಾವುದೇ ಅಡ್ಡಿಯಾಗದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

 ಜಿಲ್ಲಾಧಿಕಾರಿಗಳು ಎಚ್ಚರಿಕೆ ವಹಿಸಲು ಕರೆ

ಜಿಲ್ಲಾಧಿಕಾರಿಗಳು ಎಚ್ಚರಿಕೆ ವಹಿಸಲು ಕರೆ

ಸತತ ಮಳೆಯಿಂದ ಮಹಾನದಿ ಜಲಾನಯನ ಪ್ರದೇಶದ 10 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದ್ದು, ಈ 10 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಎಚ್ಚರಿಕೆ ವಹಿಸಿ ಪ್ರವಾಹ ಪರಿಸ್ಥಿತಿ ತಡೆಯಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಪ್ರವಾಹಪೀಡಿತ ಪ್ರದೇಶಗಳಲ್ಲಿನ ಜನರನ್ನು ಆದ್ಯತೆಯ ಆಧಾರದ ಮೇಲೆ ಸ್ಥಳಾಂತರಿಸಲು ಮತ್ತು ಅವರಿಗೆ ಅಗತ್ಯ ಪರಿಹಾರ ಮತ್ತು ಮೂಲ ಸೌಕರ್ಯಗಳನ್ನು ಒದಗಿಸುವಂತೆ ಹೇಳಿದರು. ರಾಜ್ಯದ ಇಲಾಖೆಗಳು ಜಿಲ್ಲೆಗಳಿಗೆ ತಕ್ಷಣ ನೆರವು ನೀಡುವಂತೆ ಪಟ್ನಾಯಕ್‌ ಸೂಚಿಸಿದರು.

 ಅಪಾಯ ಪೀಡಿತ ಪ್ರದೇಶಗಳಲ್ಲಿ ಜಾಗರೂಕರಾಗಿರಿ

ಅಪಾಯ ಪೀಡಿತ ಪ್ರದೇಶಗಳಲ್ಲಿ ಜಾಗರೂಕರಾಗಿರಿ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ಒಡಿಆರ್‌ಎಫ್) ಮತ್ತು ಅಗ್ನಿಶಾಮಕ ಸೇವಾ ಘಟಕಗಳನ್ನು ವಿವಿಧ ಅಪಾಯ ಪೀಡಿತ ಪ್ರದೇಶಗಳಲ್ಲಿ ಜಾಗರೂಕರಾಗಿರಲು ಮತ್ತು ಅಗತ್ಯವಿರುವಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗುವಂತೆ ಮುಖ್ಯಮಂತ್ರಿ ಪಟ್ನಾಯಕ್‌ ಅಧಿಕಾರಿಗಳಿಗೆ ಸೂಚಿಸಿದರು.

 ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ತಾಕೀತು

ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ತಾಕೀತು

ಪಟ್ನಾಯಕ್ ಅವರು ಆಸ್ಪತ್ರೆಗಳು, ನೀರು ಸರಬರಾಜು ಮತ್ತು ವಿದ್ಯುತ್ ಸರಬರಾಜು ವ್ಯವಸ್ಥೆಗಳಂತಹ ಜೀವನಾವಶ್ಯಕ ಸಂಸ್ಥೆಗಳು ನಿರಂತರ ಸೇವೆಗಳನ್ನು ಒದಗಿಸುವಂತೆ ನಿರ್ದೇಶಿಸಿದರು. ಪಂಚಾಯತ್ ರಾಜ್ ಮತ್ತು ಕುಡಿಯುವ ನೀರು ಇಲಾಖೆ ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಆರೋಗ್ಯ ಇಲಾಖೆ ಪೀಡಿತ ಪ್ರದೇಶಗಳಲ್ಲಿ ಜನರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲು ವಿಶೇಷ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

English summary
Over 4.67 lakh people in 1,757 villages in 10 districts of Odisha have been affected so far by the flood situation due to the heavy rainfall in the state, informed Special Relief Commissioner, Pradeep Kumar Jena on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X