ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಗನವಾಡಿ ಕಾರ್ಯಕರ್ತೆಯರಿಗೆ ಒಡಿಶಾ ಸರ್ಕಾರದಿಂದ ಸಿಹಿಸುದ್ದಿ

|
Google Oneindia Kannada News

ಭುವನೇಶ್ವರ, ಜನವರಿ 09: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಿಹಿಸುದ್ದಿಯನ್ನು ನೀಡಿದ್ದಾರೆ. ಒಡಿಶಾ ಮುಖ್ಯಮಂತ್ರಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಆರ್ಥಿಕ ಪ್ರೋತ್ಸಾಹಧನವನ್ನು ಹೆಚ್ಚಳ ಮಾಡಿ ಘೋಷಣೆ ಮಾಡಿದ್ದಾರೆ. ಹಾಗೆಯೇ ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಸಹಿತ ವೈದ್ಯಕೀಯ ರಜೆಯನ್ನು ಕೂಡಾ ಘೋಷಣೆ ಮಾಡಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ಆರ್ಥಿಕ ಪ್ರೋತ್ಸಾಹಧನವನ್ನು 20,000 ರೂ.ಗಳಿಂದ 40,000 ರೂ.ಗೆ ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ (ಸಿಎಂಒ) ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಇನ್ನು ಸಣ್ಣ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕ್ರಮವಾಗಿ 30,000 ಮತ್ತು 20,000 ರೂಪಾಯಿಗೆ ಸಹಾಯ ಧನ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ರಾಜ್ಯದ ಸಣ್ಣ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕ್ರಮವಾಗಿ 15,000 ಮತ್ತು 10,000 ಆರ್ಥಿಕ ಪ್ರೋತ್ಸಾಹಧನ ನೀಡಲಾಗುತ್ತಿತ್ತು.

 ಕಾಫಿ ಕೊಯ್ಲುಗಾಗಿ ಕೇರಳದತ್ತ ಮುಖ ಮಾಡಿದ ಕರ್ನಾಟಕದ ಕಾರ್ಮಿಕರು! ಕಾಫಿ ಕೊಯ್ಲುಗಾಗಿ ಕೇರಳದತ್ತ ಮುಖ ಮಾಡಿದ ಕರ್ನಾಟಕದ ಕಾರ್ಮಿಕರು!

ಸಾಮಾಜಿಕ ಭದ್ರತೆಯ ಹಿನ್ನೆಲೆಯಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು, ಸಣ್ಣ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 62 ವರ್ಷ ಆದ ಬಳಿಕ ಒಡಿಶಾ ರಾಜ್ಯ ಸರ್ಕಾರವು ಪ್ರೋತ್ಸಾಹಧನವನ್ನು ನೀಡುತ್ತಿದೆ. ಇನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಜನವರಿ 1, 2019 ರಿಂದ ಪೂರ್ವಾನ್ವಯವಾಗುವಂತೆ ಆರ್ಥಿಕ ಪ್ರೋತ್ಸಾಹವನ್ನು ನೀಡಲಾಗುವುದು ಎಂದು ಸಿಎಂಒ ಹೇಳಿಕೆಯಲ್ಲಿ ಸೇರ್ಪಡೆ ಮಾಡಲಾಗಿದೆ.
ಇನ್ನು ಒಡಿಶಾ ಸರ್ಕಾರದ ಈ ಕ್ರಮದಿಂದಾಗಿ ಒಟ್ಟು 1.3 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಪ್ರಯೋಜನ ಪಡೆಯಲಿದ್ದಾರೆ. 2019ರ ಜನವರಿಯಿಂದ ಇಲ್ಲಿಯವರೆಗೆ 1,991 ಅಂಗನವಾಡಿ ಕಾರ್ಯಕರ್ತೆಯರು, ಸಣ್ಣ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಈ ಪ್ರಯೋಜನವನ್ನು ಪಡೆಯಲಿದ್ದಾರೆ.

Odisha CM Raises Financial Incentive For Anganwadi Workers, Helpers: Announces Paid Medical Leave

ಅಂಗನವಾಡಿ ಕಾರ್ಯಕರ್ತರಿಗೆ ವೇತನ ಸಹಿತ ವೈದ್ಯಕೀಯ ರಜೆ

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶನಿವಾರ ರಾಜ್ಯದಲ್ಲಿ "ಮಿಷನ್ ಶಕ್ತಿ" ಅಡಿಯಲ್ಲಿ ಪಂಚಾಯತ್ ಮಟ್ಟದಲ್ಲಿ ಕೆಲಸ ಮಾಡುವ 50,000 ಸಮುದಾಯ ಸಹಾಯಕ ಸಿಬ್ಬಂದಿಗೆ ಆರ್ಥಿಕ ಪ್ಯಾಕೇಜ್‌ ಅನ್ನು ಘೋಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲೇ ವೇತನ ಸಹಿತ ವೈದ್ಯಕೀಯ ರಜೆ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಸೇವೆಯಿಂದ ನಿವೃತ್ತರಾದವರಿಗೆ ಒಂದು ಬಾರಿಯ ಪ್ರೋತ್ಸಾಹಧನವನ್ನು ದ್ವಿಗುಣಗೊಳಿಸುವುದಾಗಿಯೂ ಘೋಷಿಸಿದರು. "ಎಲ್ಲಾ ಸಮುದಾಯದ ಬೆಂಬಲ ಸಿಬ್ಬಂದಿ ವಾರ್ಷಿಕ 1,000 ರೂ.ಗಳ ಏಕರೂಪದ ಭತ್ಯೆಯನ್ನು ಪಡೆಯುತ್ತಾರೆ. ಇನ್ನು ಆದ್ಯತೆಯ ಮೇರೆಗೆ ಸ್ಮಾರ್ಟ್‌ಫೋನ್ ಖರೀದಿಸಲು 5,000 ರೂ.ಗಳ ಒಂದು ಬಾರಿ ಆರ್ಥಿಕ ಸಹಾಯವನ್ನು ನೀಡಲಾಗುವುದು," ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ಹೇಳಿಕೆ ತಿಳಿಸಿದೆ (ಒನ್‌ಇಂಡಿಯಾ ಸುದ್ದಿ)

Recommended Video

Rishabh Pant ಬಾಯಲ್ಲಿ ಬ್ಯಾಟ್ ಬೀಸುವುದನ್ನು ಬಿಡ್ಬೇಕು!!! ಬೇಕಿತ್ತಾ ಪಂತ್... | Oneindia Kannada

English summary
Odisha CM Raises Financial Incentive For Anganwadi Workers, Helpers: Announces Paid Medical Leave.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X