ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ, ರೈಲು ಸಂಚಾರ ನಿರ್ಬಂಧಿಸಿ: ಮೋದಿಗೆ ಒಡಿಶಾ ಸಿಎಂ ಮನವಿ

|
Google Oneindia Kannada News

ಭುವನೇಶ್ವರ, ಜೂನ್ 18: ವಿಮಾನ ಸಂಚಾರ ಹಾಗೂ ರೈಲು ಸಂಚಾರಕ್ಕೆ ನಿರ್ಬಂಧ ಮುಂದುವರಿಸಿ ಎಂದು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಪ್ರಧಾನಿ ಮೋದಿ ಬಳಿ ಮನವಿ ಮಾಡಿದ್ದಾರೆ.

Recommended Video

Sreesanth to make a comeback to Ranji cricket at the age of 37 | Oneindia Kannada

ನಿನ್ನೆ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ದರು. ಈ ವೇಳೆ ಜೂನ್ ತಿಂಗಳ ಅಂತ್ಯದವರೆಗೂ ನಮ್ಮ ರಾಜ್ಯದಲ್ಲಿ ವಿಮಾನ ಮತ್ತು ರೈಲು ಸಂಚಾರಕ್ಕೆ ತಡೆ ನೀಡಿ ಎಂದು ವಿನಂತಿಸಿಕೊಂಡಿದ್ದಾರೆ.

ಭಾರತದಲ್ಲಿ ಒಂದೇ ದಿನ 12,881 ಕೊರೊನಾ ಕೇಸ್, 334 ಮಂದಿ ಸಾವುಭಾರತದಲ್ಲಿ ಒಂದೇ ದಿನ 12,881 ಕೊರೊನಾ ಕೇಸ್, 334 ಮಂದಿ ಸಾವು

''ಜೂನ್ ತಿಂಗಳು ನಮ್ಮ ರಾಜ್ಯಕ್ಕೆ ಬಹಳ ಪ್ರಮುಖವಾದದು. ಸಾವಿರಾರು ವಲಸೆ ಕಾರ್ಮಿಕರು ರಾಜ್ಯಕ್ಕೆ ಹಿಂತಿರುಗಿದ್ದಾರೆ. ಮುಂಗಾರು ಬೇರೆ ಪ್ರವೇಶವಾಗಿದೆ. ಈ ವೇಳೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ, ಕೇಂದ್ರ ಸರ್ಕಾರ ರೈಲು ಮತ್ತು ವಿಮಾನ ಸಂಚಾರವನ್ನು ಈ ತಿಂಗಳ ಅಂತ್ಯದವರೆಗೂ ನಿರ್ಬಂಧಿಸಿದರೆ ಉತ್ತಮ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Odisha CM Naveen patnaik wants train, air travel to state restricted until June end

ಇನ್ನು ಈ ವೇಳೆ ಒಡಿಶಾದ ಅನೇಕ ಮಂದಿ ಗಾಲ್ಫ್ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಪ್ರಧಾನಿ ಅವರ ಗಮನ ತಂದರು. 'ಕಡಿಮೆ ವೇತನ ಪಡೆಯುವ ಹಲವು ಮಂದಿ ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಭಾರತಕ್ಕೆ ಕರೆತರುವ ವ್ಯವಸ್ಥೆ ಮಾಡಬೇಕು' ಎಂದು ಒತ್ತಾಯಿಸಿದರು.

ನೀಟ್, ಜೆಇಇ-ಮೇನ್, ಕ್ಲಾಟ್ ಮುಂತಾದ ರಾಷ್ಟ್ರೀಯ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಹಾಜರಾಗುವ ವೇಳೆ ಎದುರಾಗುವ ತೊಂದರೆಗಳ ಕುರಿತು ಪಟ್ನಾಯಕ್ ತಿಳಿಸಿಕೊಟ್ಟರು. "ರಾಜ್ಯಮಟ್ಟದ ಪ್ಲಸ್ -2 ಪರೀಕ್ಷೆಗಳು ಪೂರ್ಣಗೊಂಡ ನಂತರವೇ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಗಳನ್ನು ನಡೆಸಬೇಕು," ಕೇಂದ್ರಕ್ಕೆ ಮನವರಿಕೆ ಮಾಡಿದರು.

ಪ್ರಸ್ತುತ ಒಡಿಶಾದಲ್ಲಿ 4512 ಮಂದಿಗೆ ಕೊರೊನಾ ಸೋಂಕು ತಗುಲಿದೆ. 3047 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನೂ 1451 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ 14 ಜನರು ಕೊರೊನಾಗೆ ಬಲಿಯಾಗಿದ್ದಾರೆ.

English summary
Odisha chief minister naveen patnaik urged train and air travel to restricted until June end at PM Meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X