ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಡಿಶಾ:ಕೊವಿಡ್ 19 ಆರ್‌ಟಿ ಪಿಸಿಆರ್ ಪರೀಕ್ಷೆಗೆ 400 ರೂ. ಶುಲ್ಕ ನಿಗದಿ

|
Google Oneindia Kannada News

ಭುವನೇಶ್ವರ, ಡಿಸೆಂಬರ್ 02: ಕೊವಿಡ್ 19 ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಡಿಶಾ ಸರ್ಕಾರ 400 ರೂ ಗರಿಷ್ಠ ಶುಲ್ಕ ನಿಗಡಿ ಮಾಡಿದೆ.

ಒಡಿಶಾದಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸುವ ಐಸಿಎಂಆರ್ ಅನುಮೋದಿತ ನಾಲ್ಕು ಪ್ರಯೋಗಾಲಯಗಳಿವೆ. ಸರ್ಕಾರಿ ಪ್ರಯೋಗಾಲಯಗಳಲ್ಲಿ ಉಚಿತವಾಗಿ ಕೊವಿಡ್ 19 ಪರೀಕ್ಷೆ ನಡೆಸಲಾಗುತ್ತಿದೆ. ರಾಪಿಡ್ ಆಂಟಿಜೆನ್ ಪರೀಕ್ಷೆಗೆ ಶುಲ್ಕವನ್ನೂ ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿದೆ. ಖಾಸಗಿ ಪ್ರಯೋಗಾಲಯಗಳಲ್ಲಿ ರಾಪಿಡ್ ಆಂಟಿಜೆನ್ ಪರೀಕ್ಷೆಗೆ 450 ರೂ. ಪಡೆಯಲಾಗುತ್ತಿದೆ.

ಒಡಿಶಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ರಾಜ್ಯದಲ್ಲಿ ಖಾಸಗಿ ಪ್ರಯೋಗಗಳಲ್ಲಿ ಆರ್‌ಟಿ ಪಿಸಿಆರ್ ಪರೀಕ್ಷೆಗೆ ಒಳಗಾಗುವವರು ಜಿಎಸ್‌ಟಿ ಸಹಿತ 400 ರೂ ಪಾವತಿಸಬಹುದಾಗಿದೆ.

Odisha Caps Price Of Covid RT-PCR Test By Private Labs At Rs 400

ಖಾಸಗಿ ಪ್ರಯೋಗಾಲಯಗಳಲ್ಲಿ ಆರ್‌ಟಿ ಪಿಸಿಆರ್ ಪರೀಕ್ಷೆಗೆ ಇತ್ತೀಚೆಗಷ್ಟೇ ಉತ್ತರ ಪ್ರದೇಶ ಸರ್ಕಾರ 700 ಮಿತಿ ನಿಗದಿಪಡಿಸಿದೆ. ದೆಹಲಿ, ಗುಜರಾತ್, ರಾಜಸ್ಥಾನದಲ್ಲಿ 800 ರೂ. ನಿಗದಿಯಾಗಿದೆ.

ಪರೀಕ್ಷೆಗೆ ಬಳಸುವ ಕಿಟ್ ಮತ್ತು ಇತರೆ ಸಲಕರಣೆಗಳಿಗೆ ತಗುಲುವ ವೆಚ್ಚ ಕಡಿಮೆಯಾಗಿರುವುದರಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ , ಹಿಂದೆ 1200 ರೂ ಇದ್ದ ಆರ್‌ಟಿ ಪಿಸಿಆರ್ ಕಿಟ್ ಈಗ 46 ರೂಗೆ ಲಭ್ಯವಿದೆ.

ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊವಿಡ್-19 ಮೂರನೇ ಅಲೆಯ ಭೀತಿಯಲ್ಲಿ ಜನರು ಬದುಕುತ್ತಿರುವ ಹಿನ್ನೆಲೆ ಸೋಂಕು ತಪಾಸಣೆಗೆ ಸರ್ಕಾರವು ಒತ್ತು ನೀಡಿದೆ.

ಕೊರೊನಾವೈರಸ್ ಸೋಂಕು ಪತ್ತೆಗೆ ನಡೆಸುವ ಆರ್ ಟಿ- ಪಿಸಿಆರ್ ಪರೀಕ್ಷೆಗೆ ಒಂದು ನಿರ್ದಿಷ್ಟ ದರವನ್ನು ಸರ್ಕಾರವೇ ನಿಗದಿಗೊಳಿಸಿದೆ.ನವದೆಹಲಿಯಾದ್ಯಂತ ಖಾಸಗಿ ಪ್ರಯೋಗಾಲಯಗಳಲ್ಲಿಯೂ ಕೂಡಾ ಕೊವಿಡ್-19 ಸೋಂಕು ತಪಾಸಣೆಗೆ ಕೇವಲ 800 ರೂಪಾಯಿ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

Recommended Video

ತಮಿಳುನಾಡು ಚುನಾವಣೆಗೆ ಅಖಾಡ Ready !! | Oneindia Kannada

ಸರ್ಕಾರದ ವತಿಯಿಂದ ನಡೆಸುವ ಕೊರೊನಾವೈರಸ್ ಸೋಂಕಿನ ಪರೀಕ್ಷೆಗೆ ಯಾವುದೇ ರೀತಿ ಹಣ ಪಾವತಿಸಬೇಕಾಗಿಲ್ಲ. ಆದರೆ ಸೋಂಕು ತಪಾಸಣೆ ವೇಗವನ್ನು ಹೆಚ್ಚಿಸುವ ಉದ್ದೇಶದಿಂದ ಖಾಸಗಿ ಲ್ಯಾಬ್ ಗಳಲ್ಲೂ ಕೊವಿಡ್-19 ಸೋಂಕು ತಪಾಸಣೆಗೆ ಅನುಮತಿ ನೀಡಲಾಗಿದೆ.
ಇದರ ಜೊತೆಗೆ ಸೋಂಕು ತಪಾಸಣೆಗೆ ನಿರ್ದಿಷ್ಟ ದರವನ್ನು ನಿಗದಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಹಿತಿ ನೀಡಿದ್ದರು.

English summary
The Odisha government on Wednesday further reduced the maximum price for the RT-PCR COVID-19 tests by private laboratories to Rs 400 from Rs 1,200.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X