ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಡಿಶಾ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ

|
Google Oneindia Kannada News

ನವದೆಹಲಿ, ಮೇ 23: ದೇಶದಾದ್ಯಂತ ಲೋಕಸಭೆ ಚುನಾವಣೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ಅದರ ಜೊತೆ ಜೊತೆಗೆ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಸಹ ಇಂದೇ ಪ್ರಕಟವಾಗುತ್ತಿದೆ.

ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಸಿಕ್ಕಿಂ, ಒಡಿಶಾ ರಾಜ್ಯಗಳ ವಿಧಾನಸಭೆ ಚುನಾವಣೆಯು ಲೋಕಸಭೆ ಚುನಾವಣೆಯ ಜೊತೆಗೇ ನಡೆದಿದ್ದು, ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಇಂದು ಹೊರಬೀಳುತ್ತಿದೆ.

ಲೋಕಸಭೆ ಚುನಾವಣೆ 2019 ಫಲಿತಾಂಶ LIVE : ಅಮೇಥಿಯಲ್ಲಿ ರಾಹುಲ್ ಹಿನ್ನಡೆಲೋಕಸಭೆ ಚುನಾವಣೆ 2019 ಫಲಿತಾಂಶ LIVE : ಅಮೇಥಿಯಲ್ಲಿ ರಾಹುಲ್ ಹಿನ್ನಡೆ

ಒಡಿಶಾ ರಾಜ್ಯದ ವಿಧಾನಸಭೆ ಚುನಾವಣೆ ಫಲಿತಾಂಶವನ್ನು ಇಲ್ಲಿ ನೀಡಲಾಗುತ್ತಿದ್ದು, ಒಡಿಸ್ಸಾದಲ್ಲಿ 147 ಕ್ಷೇತ್ರಗಳು ಇದ್ದು, ಬಿಜು ಜನತಾದಳ (ಬಿಜೆಡಿ), ಬಿಜೆಪಿ, ಕಾಂಗ್ರೆಸ್, ಬಿಎಸ್‌ಪಿ, ಆಮ್‌ಆದ್ಮಿ ಪಕ್ಷ ಮತ್ತು ಸಮತಾ ಕ್ರಾಂತಿ ದಳ ಪಕ್ಷಗಳು ಗದ್ದುಗೆಗಾಗಿ ಗುದ್ದಾಟ ನಡೆಸಿವೆ.

Odisha assembly election results 2019

ಒಡಿಶಾದಲ್ಲಿ ಪ್ರಸ್ತುತ ಬಿಜೆಡಿ ಸರ್ಕಾರವಿದ್ದು ನವೀನ್ ಪಟ್ನಾಯಕ್ ಮುಖ್ಯಮಂತ್ರಿ ಆಗಿದ್ದಾರೆ. ಒಡಿಸ್ಸಾದಲ್ಲಿ ವಿಧಾನಸಭೆ ಚುನಾವಣೆಯು ಏಪ್ರಿಲ್ 11, 18, 23, 29 ರಂದು ನಾಲ್ಕು ಹಂತದಲ್ಲಿ ನಡೆಯಿತು, ಇಂದು ಫಲಿತಾಂಶ ಹೊರಬೀಳುತ್ತಿದೆ.

ಒಡಿಶಾದಲ್ಲಿ ಬಿಜೆಪಿ 25, ಬಿಜೆಪಿ 11 ಮತ್ತು ಕಾಂಗ್ರೆಸ್ ಪಕ್ಷವು ಕೇವಲ ಒಂದು ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ.

ಒಡಿಶಾದಲ್ಲಿ 11 ಗಂಟೆ ವೇಳೆಗೆ ಬಿಜೆಡಿ 74 ಕ್ಷೇತ್ರದಲ್ಲಿ, ಬಿಜೆಪಿ 23, ಕಾಂಗ್ರೆಸ್ ಒಂದು ಮತ್ತು ಸಿಪಿಐ(ಎಂ) ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.

English summary
Odisha state assembly election results 2019 updates in Kannada. Odissa has 147 assembly constituencies, BJD, BJP, congress, BSP, AAP, Samatha Kranthi Dal is fighting each other.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X