ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬ್ಬಾ..! ನದಿಯಿಂದ ಇದ್ದಕ್ಕಿದ್ದಂತೆ ಹೊರಬಂತು 500 ವರ್ಷಗಳ ಹಳೆಯ ವಿಷ್ಣು ದೇವಾಲಯ

|
Google Oneindia Kannada News

ಒಡಿಶಾ, ಜೂನ್ 13: ಒಡಿಶಾದ ನಯಾಗಢ ಜಿಲ್ಲೆಯ ಭಾಪುರ್ ಬ್ಲಾಕ್‌ನಲ್ಲಿ, ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್‌ನ ಪುರಾತತ್ವ ತಜ್ಞರ ತಂಡವು ಪದ್ಮಾವತಿ ನದಿಯೊಳಗಿನ 500 ವರ್ಷಗಳಷ್ಟು ಹಳೆಯದಾದ ವಿಷ್ಣುವಿನ ದೇವಾಲಯವನ್ನು ಕಂಡುಹಿಡಿದಿದೆ.

Recommended Video

ಪರೋಟ ಮೇಲೆ ಮಾತ್ರ 18% GST , ರೂಟ್ಟಿ ಮೇಲೆ 5% ಮಾತ್ರ | Oneindia Kannada

ದೇವಾಲಯದ ಮೇಲ್ಭಾಗವು ಇದ್ದಕ್ಕಿದ್ದಂತೆ ನದಿಯ ಒಳಗಿನಿಂದ ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ ಜನರು ಆಶ್ಚರ್ಯ ಚಕಿತರಾದರು. ಇದನ್ನು ಸಂಶೋಧಿಸಿದ ಪುರಾತತ್ವ ಇಲಾಖೆಯ ತಂಡದ ಪ್ರಕಾರ, ಈ ದೇವಾಲಯವು ಸುಮಾರು 500 ವರ್ಷಗಳಷ್ಟು ಹಳೆಯದಾಗಿದ್ದು, 15 ಅಥವಾ 16 ನೇ ಶತಮಾನದಲ್ಲಿ ನಿರ್ಮಿಸಿರಬೇಕು ಎನ್ನಲಾಗಿದೆ. ಈ ದೇವಾಲಯವು ಕಂಡುಬಂದ ಸ್ಥಳದಲ್ಲಿ ಶತಮಾನಗಳ ಹಿಂದೆ ಅನೇಕ ಹಳ್ಳಿಗಳಿದ್ದವು.

ಸೈಕ್ಲೋನ್ ಕಾರ್ಯಾಚರಣೆಯಲ್ಲಿದ್ದ 49 NDRF ಸಿಬ್ಬಂದಿಗೆ ಕೊರೊನಾ ಸೈಕ್ಲೋನ್ ಕಾರ್ಯಾಚರಣೆಯಲ್ಲಿದ್ದ 49 NDRF ಸಿಬ್ಬಂದಿಗೆ ಕೊರೊನಾ

500 ವರ್ಷಗಳಷ್ಟು ಹಳೆಯ ದೇವಾಲಯ

500 ವರ್ಷಗಳಷ್ಟು ಹಳೆಯ ದೇವಾಲಯ

ಈ ದೇವಾಲಯವು 500 ವರ್ಷಗಳಷ್ಟು ಹಳೆಯದಾಗಿದೆ ನಯಾಗಢ ಬೈದೇಶ್ವರ ಬಳಿ, ಮಹಾನದ ಪದ್ಮಾವತಿ ನದಿಯ ನಡುವೆ ದೇವಾಲಯದ ಮೇಲ್ಬಾಗವನ್ನು ಸ್ಪಷ್ಟವಾಗಿ ಕಾಣಬಹುದು. ಈ ದೇವಾಲಯದ ಸುದ್ದಿ ಸದ್ಯ ಸುತ್ತೂರಿನ ಜನರಿಗೆ ಹಬ್ಬಿದ್ದು, ಜನರು ದೇವಾಲಯವನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಬರುತ್ತಿದ್ದಾರೆ.


ಪುರಾತತ್ವ ತಜ್ಞರ ಪ್ರಕಾರ ಈ ದೇವಾಲಯದ ವಿನ್ಯಾಸವು ಸುಮಾರು 500 ವರ್ಷಗಳಷ್ಟು ಹಳೆಯದಾದ ಪುರಾಣ ದೇವಾಲಯ ಎಂದು ಅಂದಾಜಿಸಲಾಗಿದೆ. ಈ ದೇವಾಲಯವು ಗೋಪಿನಾಥ್ (ಭಗವಾನ್ ವಿಷ್ಣು) ಗೆ ಸೇರಿತ್ತು. ಆದರೆ ಹಲವು ವರ್ಷಗಳ ಹಿಂದೆ ಗ್ರಾಮಸ್ಥರು ದೇವಾಲಯದಿಂದ ಪ್ರತಿಮೆಯನ್ನು ತೆಗೆದುಕೊಂಡು ಅವರೊಂದಿಗೆ ತೆರಳಿದ್ದಾರೆ ಎನ್ನಲಾಗಿದೆ.

60 ಅಡಿ ಭೂಗತವಾಗಿದೆ ವಿಷ್ಣು ದೇವಾಲಯ

60 ಅಡಿ ಭೂಗತವಾಗಿದೆ ವಿಷ್ಣು ದೇವಾಲಯ

ಪುರಾತತ್ವ ಶಾಸ್ತ್ರಜ್ಞ ದೀಪಕ್ ಕುಮಾರ್ ನಾಯಕ್ ಅವರ ಪ್ರಕಾರ, ಅವರ ತಂಡವು ಈಗ ಪದ್ಮಾವತಿ ನದಿ ಇರುವಲ್ಲಿ, ಈ ಹಿಂದೆ ಅನೇಕ ಗ್ರಾಮಗಳು ಮತ್ತು ಅನೇಕ ದೇವಾಲಯಗಳಿವೆ ಎಂದು ತಿಳಿದುಬಂದಿದೆ. ಪತ್ತೆಯಾದ ದೇವಾಲಯವು ಸುಮಾರು 60 ಅಡಿಗಳಷ್ಟು ಭೂಗತವಾಗಿದ್ದು, ದೇವಾಲಯದ ವಿನ್ಯಾಸವನ್ನು ನೋಡಿದರೆ, ಇದನ್ನು 15 ಅಥವಾ 16 ನೇ ಶತಮಾನದಲ್ಲಿ ನಿರ್ಮಿಸಿರಬೇಕು ಎಂದು ತೋರುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಈ ದೇವಾಲಯ ಕಂಡುಬರುವ ಸ್ಥಳವನ್ನು ಸತ್ಪಟಾನ ಎಂದು ಕರೆಯಲಾಗುತ್ತದೆ.

ಒಡಿಶಾದಲ್ಲಿ ತರಬೇತಿ ಏರ್ ಕ್ರಾಫ್ಟ್ ಅಪಘಾತ, ಇಬ್ಬರು ಸಾವುಒಡಿಶಾದಲ್ಲಿ ತರಬೇತಿ ಏರ್ ಕ್ರಾಫ್ಟ್ ಅಪಘಾತ, ಇಬ್ಬರು ಸಾವು

ಪ್ರವಾಹದಲ್ಲಿ ಏಳು ಗ್ರಾಮಗಳು ನಾಶವಾದವು

ಪ್ರವಾಹದಲ್ಲಿ ಏಳು ಗ್ರಾಮಗಳು ನಾಶವಾದವು

ಸ್ಥಳೀಯ ಜನರ ಪ್ರಕಾರ 18 ರಿಂದ 19 ನೇ ಶತಮಾನದಲ್ಲಿ ಇಲ್ಲಿ ಪದ್ಮಾವತಿ ಗ್ರಾಮವಿತ್ತು. ನಂತರ ಮಹಾನದಿಯಲ್ಲಿ ಆಗಾಗ್ಗೆ ಪ್ರವಾಹದಿಂದಾಗಿ ಈ ಗ್ರಾಮವು ಮಹಾನದಿಯಲ್ಲಿ ಲೀನವಾಯಿತು. ಜೊತೆಗೆ ಈ ಸ್ಥಳದಲ್ಲಿ ಒಟ್ಟಿಗೆ ಏಳು ಗ್ರಾಮಗಳು ಇದ್ದವು, ಈ ಕಾರಣದಿಂದಾಗಿ ಇಲ್ಲಿ ಸತ್ಪಟಾನ ಎಂಬ ಹೆಸರು ಇತ್ತು.

ಈ ದೇವಾಲಯದಲ್ಲಿ ಏಳು ಗ್ರಾಮಗಳ ಜನರು ಗೋಪಿನಾಥನನ್ನು ಪೂಜಿಸುತ್ತಿದ್ದರು. ಪುರಾತತ್ತ್ವಜ್ಞರ ಪ್ರಕಾರ, ಸುಮಾರು 150 ವರ್ಷಗಳ ಹಿಂದೆ ನದಿಯಲ್ಲಿ ತೀವ್ರ ಪ್ರವಾಹದಿಂದಾಗಿ, ಇಡೀ ಗ್ರಾಮವು ನೀರಿನೊಳಗೆ ಮುಳುಗಿತ್ತು. 19 ನೇ ಶತಮಾನದಲ್ಲಿ ಪ್ರವಾಹಕ್ಕೆ ಮುಂಚಿತವಾಗಿ ಗ್ರಾಮದ ಜನರು ದೇವಾಲಯದಿಂದ ವಿಗ್ರಹವನ್ನು ತೆಗೆದುಕೊಂಡು ಉನ್ನತ ಸ್ಥಳಕ್ಕೆ ಹೋದರು ಎಂದು ದೀಪಕ್ ಕುಮಾರ್ ಹೇಳುತ್ತಾರೆ. ಈಗ ಈ ದೇವಾಲಯ ಮತ್ತು ಇಡೀ ಗ್ರಾಮವು ನೀರಿನ ಅಡಿಯಲ್ಲಿದೆ.

ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಹುಡುಕಾಟ

ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಹುಡುಕಾಟ

ಸ್ಥಳೀಯ ಜನರ ಪ್ರಕಾರ, ಪದ್ಮಾವತಿ ಗ್ರಾಮದ ಸುತ್ತ 22 ದೇವಾಲಯಗಳಿದ್ದು, ನದಿ ತನ್ನ ನಿಲುವನ್ನು ಬದಲಾಯಿಸಿದಾಗಿನಿಂದ, ಇದು ನೀರಿನ ಅಡಿಯಲ್ಲಿ ಮುಳುಗಿದೆ. 150 ವರ್ಷಗಳಲ್ಲಿ ಮೊದಲ ಬಾರಿಗೆ ದೇವಾಲಯದ ಮುಖ್ಯಸ್ಥರು ನೀರೊಳಗಿನಿಂದ ದೇವಾಲಯವನ್ನು ನೋಡಿದ್ದಾರೆ. ಈ ಪ್ರಮುಖ ಆವಿಷ್ಕಾರದ ನಂತರ, ಪುರಾತತ್ತ್ವಜ್ಞರ ತಂಡಗಳು ನದಿಯ ಸುತ್ತ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಐತಿಹಾಸಿಕ ಪರಂಪರೆಯ ಕುರುಹುಗಳನ್ನು ಸಂಗ್ರಹಿಸಲು ಪ್ರಾರಂಭಿಸಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದೇವಾಲಯಗಳು ಕಾಣಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

English summary
An ancient temple, submerged for a long time in river Mahanadi, has resurfaced in Odisha’s Nayagarh district.The ancient temple is believed to be around 500 years old.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X