ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಮಾಣು ಸಾಮರ್ಥ್ಯದ ಪೃಥ್ವಿ-2 ಕ್ಷಿಪಣಿ ರಾತ್ರಿ ಪ್ರಯೋಗ ಯಶಸ್ವಿ

|
Google Oneindia Kannada News

ಭುವನೇಶ್ವರ್, ಅಕ್ಟೋಬರ್ 16: ಬ್ರಹ್ಮೋಸ್ ಸೂಪರ್ ಸಾನಿಕ್, ಶೌರ್ಯ ಕ್ಷಿಪಣಿ ಮತ್ತು ರುದ್ರಂ ಕ್ಷಿಪಣಿಗಳ ಯಶಸ್ವಿ ಪ್ರಯೋಗದ ಬೆನ್ನಲ್ಲೇ ಭಾರತವು ಮತ್ತೊಂದು ಯಶಸ್ವಿ ಕ್ಷಿಪಣಿ ಪರೀಕ್ಷೆಯನ್ನು ನಡೆಸಿದೆ.

ಪರಮಾಣು ಸಾಗಿಸುವ ಸಾಮರ್ಥ್ಯದ ಪೃಥ್ವಿ-2 ಕ್ಷಿಪಣಿಯನ್ನು ಒಡಿಶಾದ ಕರಾವಳಿಯಲ್ಲಿ ಸಶಸ್ತ್ರ ಪಡೆಗಳ ಬಳಕೆದಾರ ಪ್ರಯೋಗದ ಭಾಗವಾಗಿ ಶುಕ್ರವಾರ ಸಂಜೆ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಯಶಸ್ವಿಯಾಗಿದೆ. ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್ ಈ ಬಳಕೆದಾರ ಪ್ರಯೋಗ ನಡೆಸಿದೆ.

ಡಿಆರ್‌ಡಿಒನಿಂದ ವಿಕಿರಣ ನಿರೋಧಕ ಕ್ಷಿಪಣಿ 'ರುದ್ರಂ' ಯಶಸ್ವಿ ಪರೀಕ್ಷೆಡಿಆರ್‌ಡಿಒನಿಂದ ವಿಕಿರಣ ನಿರೋಧಕ ಕ್ಷಿಪಣಿ 'ರುದ್ರಂ' ಯಶಸ್ವಿ ಪರೀಕ್ಷೆ

ದ್ರವ್ಯ ಚಾಲಿತ ಪೃಥ್ವಿ-2 ಕ್ಷಿಪಣಿಯು 250 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಇದು 1 ಟನ್ ಯುದ್ಧ ಸಿಡಿತಲೆಯನ್ನು ಕೊಂಡೊಯ್ಯುವ ಸಾಮರ್ಥ್ಯ ಪಡೆದಿದೆ. 9 ಮೀಟರ್ ಎತ್ತರದ ಕ್ಷಿಪಣಿಯನ್ನು ಸಮಗ್ರ ಮಾರ್ಗದರ್ಶಿ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮದಡಿ ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಮೊದಲ ಕ್ಷಿಪಣಿಯಾಗಿದೆ. ಇದು ಭಾರತದ ಮೊದಲ ಸ್ವದೇಶಿ ನಿರ್ಮಿತ ಮೇಲ್ಮೈನಿಂದ ಮೇಲ್ಮೈಗೆ ಹಾರುವ ಯುದ್ಧ ಕ್ಷಿಪಣಿಯೂ ಹೌದು.

 Nuclear Capable Prithvi-2 Missile Successfully Conducted At Odisha

ಅಣ್ವಸ್ತ್ರ ಸಾಮರ್ಥ್ಯದ ಶೌರ್ಯ ಕ್ಷಿಪಣಿ ಪ್ರಯೋಗ ಯಶಸ್ವಿ ಅಣ್ವಸ್ತ್ರ ಸಾಮರ್ಥ್ಯದ ಶೌರ್ಯ ಕ್ಷಿಪಣಿ ಪ್ರಯೋಗ ಯಶಸ್ವಿ

ಕಳೆದ ಮೂರು ವಾರಗಳಲ್ಲಿ ಪೃಥ್ವಿ 2 ಕ್ಷಿಪಣಿಯ ಎರಡನೆಯ ರಾತ್ರಿ ಪ್ರಯೋಗ ಇದಾಗಿದೆ. ಸೆ. 27ರಂದು ಡಿಆರ್‌ಡಿಒ ಈ ಕ್ಷಿಪಣಿಯ ರಾತ್ರಿ ಪ್ರಯೋಗ ಕೈಗೊಂಡಿತ್ತು. ಕಳೆದ 40 ದಿನಗಳಲ್ಲಿ ಭಾರತದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ನಡೆಸಿದ 11ನೇ ಕ್ಷಿಪಣಿ ಪರೀಕ್ಷೆ ಇದಾಗಿದೆ. ನಿರ್ಭಯ್ ಕ್ರೂಸ್ ಕ್ಷಿಪಣಿಯ ಪ್ರಯೋಗವು ಸರಿಯಾಗಿ ನಡೆಯದ ಕಾರಣ ಅದನ್ನು ಡಿಆರ್‌ಡಿಒ ಸ್ಥಗಿತಗೊಳಿಸಿತ್ತು.

English summary
DRDO has successfully conducted another night trial of nuclear capable Prithvi-2 missile on Friday from Odisha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X