ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಶಿಷ್ಟ ಜಾತಿ,ಪಂಗಡದ ವಿದ್ಯಾರ್ಥಿ ವೇತನಕ್ಕಾಗಿ 101 ಕೋಟಿ ರೂ ಬಿಡುಗಡೆ ಮಾಡಿದ ಒಡಿಶಾ ಸರ್ಕಾರ

|
Google Oneindia Kannada News

ಭುವನೇಶ್ವರ, ಮಾರ್ಚ್ 03: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿವೇತನಕ್ಕಾಗಿ ಒಡಿಶಾ ಸರ್ಕಾರವು 101 ಕೋಟಿ ರೂ. ಬಿಡುಗಡೆ ಮಾಡಿದೆ.

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಈ ಕುರಿತು ಮಾಹಿತಿ ನೀಡಿದ್ದಾರೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಪ್ರತಿ ವಿದ್ಯಾರ್ಥಿಗಳಿಗೆ 50 ಸಾವಿರ ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತದೆ ಎಂದರು.

ವಿದ್ಯಾರ್ಥಿವೇತನ ನೇರವಾಗಿ ಬ್ಯಾಂಕ್‌ನಲ್ಲಿರುವ ವಿದ್ಯಾರ್ಥಿಗಳ ಖಾತೆಗೆ ಜಮಾ ಆಗುತ್ತದೆ. ಎಸ್ಸಿ,ಎಸ್ಟಿ ವಿದ್ಯಾರ್ಥಿಗಳು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರಿಗೆ ಅಗತ್ಯ ನೆರವು ಒದಗಿಸುವುದು ಸರ್ಕಾರದ ಕರ್ತವ್ಯ.

Naveen Patnaik

ಶಿಕ್ಷಣ ಸುಧಾರಣೆಯು ಒಡಿಶಾ ಸರ್ಕಾರದ ಗುರಿಯಾಗಿದೆ, ಸರ್ಕಾರ ಯಾವಾಗಲೂ ಶಿಕ್ಷಣದತ್ತ ಗಮನಹರಿಸಿದೆ. ಈ ಕಾರಣದಿಂದಾಗಿ ಎಸ್‌ಸಿ,ಎಸ್‌ಟಿ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರುತ್ತಿದ್ದಾರೆ ಎಂದು ಹಮ್ಮೆಯ ಮಾತುಗಳನ್ನಾಡಿದ್ದಾರೆ.

ವಿದ್ಯಾರ್ಥಿ ವೇತನ ನಿಲ್ಲಿಸದಂತೆ ಸಿಎಂ ಯಡಿಯೂರಪ್ಪ ಸೂಚನೆವಿದ್ಯಾರ್ಥಿ ವೇತನ ನಿಲ್ಲಿಸದಂತೆ ಸಿಎಂ ಯಡಿಯೂರಪ್ಪ ಸೂಚನೆ

ನಮ್ಮ ಸರ್ಕಾರವು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಿದೆ ಎಂದರು. ನವೀನ್ ಪಟ್ನಾಯಕ್ ಅವರು ಮೂರು ಆಕಾಂಕ್ಷ ಹಾಸ್ಟೆಲ್ ಸೇರಿದಂತೆ ಇತರೆ 68 ಹಾಸ್ಟೆಲ್‌ಗಳ ಉದ್ಘಾಟನೆ ಮಾಡಿದ್ದಾರೆ.

ಹಾಗೆಯೇ 5.75 ಲಕ್ಷ ವಿದ್ಯಾರ್ಥಿಗಳು ವಾಸಿಸುವ 'ಮೈ ಹಾಸ್ಟೆಲ್' ಉದ್ಘಾಟಿಸಿದ್ದಾರೆ. ಸರ್ಕಾರದ ಈ ಯೋಜನೆಯಿಂದ 1.5 ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಹಾಗೆಯೇ ಸರ್ಕಾರದಿಂದ 5.75 ಲಕ್ಷ ಎಸ್‌ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತಿದೆ ಎಂದರು.

English summary
Odisha chief minister Naveen Patnaik sanctioned Rs 101 crore for providing scholarship to 50,000 scheduled caste and scheduled tribes students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X