ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಡಿಶಾದಲ್ಲಿ ನಕ್ಸಲರಿಂದ ಕರ್ತವ್ಯನಿರತ ಮಹಿಳಾ ಚುನಾವಣಾಧಿಕಾರಿ ಹತ್ಯೆ

|
Google Oneindia Kannada News

ಒಡಿಶಾ, ಏ.18: ಒಡಿಶಾದಲ್ಲಿ ಕರ್ತವ್ಯನಿರತ ಚುನಾವಣಾಧಿಕಾರಿಯನ್ನು ನಕ್ಸಲರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ನಿಮ್ಮ ರಾಜಕೀಯ ಜ್ಞಾನವನ್ನು ಒರೆಗೆ ಹಚ್ಚುವ ರಸಪ್ರಶ್ನೆ

ಒಡಿಶಾಸ ಕಂದಮಾಲ್ ಜಿಲ್ಲೆಯ ಗೋಚಪಡಾದಲ್ಲಿ ಘಟನೆ ನಡೆದಿದೆ. ಸಂಜುಕ್ತಾ ಕಂದಮಾಲ್ ಹತ್ಯೆಗೀಡಾದ ಚುನಾವಣಾ ಅಧಿಕಾರಿ.

ಲೋಕಸಭೆ ಚುನಾವಣೆ LIVE:ಬೆಂಗಳೂರು ದಕ್ಷಿಣ ಅಭ್ಯರ್ಥಿ ತೇಜಸ್ವಿ ಸೂರ್ಯ ಮತ ಚಲಾವಣೆ ಲೋಕಸಭೆ ಚುನಾವಣೆ LIVE:ಬೆಂಗಳೂರು ದಕ್ಷಿಣ ಅಭ್ಯರ್ಥಿ ತೇಜಸ್ವಿ ಸೂರ್ಯ ಮತ ಚಲಾವಣೆ

ಅಧಿಕಾರಿ ಮನೆಯಿಂದ ಚುನಾವಣಾ ಮತಗಟ್ಟೆಗೆ ತೆರಳುತ್ತಿದ್ದ ವೇಳೆ ಅವರ ವಾಹನವನ್ನು ಅಡ್ಡಗಟ್ಟಿದ ಬಂದೂಕುದಾರಿ ನಕ್ಸಲರು ವಾಹನಕ್ಕೆ ಬೆಂಕಿ ಹಚ್ಚಿ ಅಧಿಕಾರಿಯನ್ನು ಹತ್ಯೆಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Maoists kills polling official in Odisha

ಕಳೆದ ವರ್ಷ ನವೆಂಬರ್​ 11 ರಂದು ನಡೆಸಲಾಗಿದ್ದ ದಾಳಿಯಲ್ಲಿ ಬಿಎಸ್​ಎಫ್​ನ ಓರ್ವ ಸಬ್​ ಇನ್ಸ್​ಪೆಕ್ಟೆರ್​ ಮೃತಪಟ್ಟಿದ್ದರೆ ಹಲವರು ಗಾಯಗೊಂಡಿದ್ದರು. ಅಲ್ಲದೆ ಏಪ್ರಿಲ್ 9 ರಂದು ಛತ್ತೀಸ್​ಗಢದಲ್ಲೂ ನಕ್ಸಲರು ಬಾಂಬ್ ದಾಳಿ ನಡೆಸುವ ಮೂಲಕ ದಾಂತೇವಾಡದ ಕ್ಷೇತ್ರದ ಬಿಜೆಪಿ ಶಾಸಕ ಭೀಮಾ ಮಾಂಡವಿ ಸೇರಿ 5 ಜನ ಪೊಲೀಸರನ್ನು ಹತ್ಯೆ ಮಾಡಿದ್ದರು.

ಮೋದಿ ಬೆಂಗಾವಲು ವಾಹನ ಪರಿಶೀಲನೆ; ಕರ್ನಾಟಕ ಕೇಡರ್ ಅಧಿಕಾರಿ ಸಸ್ಪೆಂಡ್ಮೋದಿ ಬೆಂಗಾವಲು ವಾಹನ ಪರಿಶೀಲನೆ; ಕರ್ನಾಟಕ ಕೇಡರ್ ಅಧಿಕಾರಿ ಸಸ್ಪೆಂಡ್

ಕರಪತ್ರ ಬ್ಯಾನರ್​ಗಳನ್ನು ಅಂಟಿಸಿ ಪ್ರತಿಭಟಿಸಿದ್ದಾರೆ. ಅಲ್ಲದೆ ಚುನಾವಣಾ ಅಧಿಸೂಚನೆ ಹೊರ ಬಿದ್ದ ನಂತರ ಈವರೆಗೆ ಒಡಿಶಾದಲ್ಲಿ ಸುಮಾರು 7ಕ್ಕೂ ಹೆಚ್ಚು ಬಾರಿ ಸುಧಾರಿತ ಸ್ಫೋಟಗಳನ್ನು ಬಳಸಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಕ್ಸಲ್​ ಪೀಡಿತ ಒಡಿಶಾ ರಾಜ್ಯದ 21 ಲೋಕಸಭಾ ಕ್ಷೇತ್ರಗಳ ಪೈಕಿ ಎರಡನೇ ಹಂತದಲ್ಲಿ ಅಸ್ಕಾ, ಬಾರಾಗಡ್, ಬೋಲಂಗೀರ್, ಸುದರ್​ಗಡ್​ ಹಾಗೂ ಕಂಧಮಲ್ ಸೇರಿದಂತೆ ಒಟ್ಟು 5 ಲೋಕಸಭಾ ಕ್ಷೇತ್ರಗಳಿಗೆ ಚುನಾವಣಾ ನಡೆಯುತ್ತಿದೆ.

English summary
Maoists kills polling official in Odisha torch vehicles ahead of 2nd phase of LS polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X