ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ 23 ರಂದು ಬಾಗಿಲು ತೆರೆಯಲಿದೆ ಪುರಿ ಜಗನ್ನಾಥ ದೇವಾಲಯ

|
Google Oneindia Kannada News

ಪುರಿ, ಡಿಸೆಂಬರ್ 14: ಕೊರೊನಾ ಸೋಂಕಿನಿಂದಾಗಿ ಕಳೆದ 9 ತಿಂಗಳಿನಿಂದ ಬಾಗಿಲು ಮುಚ್ಚಿದ್ದ ಪುರಿ ಜಗನ್ನಾಥ ದೇವಾಲಯ ಡಿಸೆಂಬರ್ 23ರಂದು ತೆರೆಯಲಿದೆ.

ಶ್ರೀ ಜಗನ್ನಾಥ ದೇವಸ್ಥಾನ ಆಡಳಿತ ಮುಖ್ಯಸ್ಥ ಕ್ರಿಶನ್ ಕುಮಾರ್ ಮಾತನಾಡಿ, ಭಕ್ತರ ಧಾರ್ಮಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ದೇವಾಲಯವನ್ನು ಪುನಃ ತೆರೆಯುವ ನಿರ್ಧಾರ ಕೈಗೊಳ್ಳಲಾಗಿದೆ. ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ ಎಂದರು.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮತ್ತೆ ಹಿರಿಯರು, ಮಕ್ಕಳಿಗೂ ಅವಕಾಶತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮತ್ತೆ ಹಿರಿಯರು, ಮಕ್ಕಳಿಗೂ ಅವಕಾಶ

ಈಗಾಗಲೇ ದೇವಸ್ಥಾನ ತೆರೆಯುವ ಕುರಿತು ಸಭೆ ನಡೆದಿದ್ದು, ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಡಿಸೆಂಬರ್ 23ರಂದು ದೇವಾಲಯವನ್ನು ಮತ್ತೆ ತೆರೆಯಲು ನಿರ್ಧರಿಸಲಾಗಿದೆ.

 Lord Jagannath Temple Likely To Reopen On December 23

ಮತ್ತು ಪುರಿಯ ಜನರು ದೇವಾಲಯಕ್ಕೆ ಪ್ರವೇಶಿಸಲು ಮೊದಲು ಅವಕಾಶವನ್ನು ಪಡೆಯುತ್ತಾರೆ ಎಂದು ತಿಳಿಸಿದ್ದಾರೆ. ಅನುಮೋದನೆ ಬಳಿಕ ಪ್ರಮಾಣಿತ ಕಾರ್ಯಚರಣಾ ವಿಧಾನವನ್ನು ನೀಡಲಾಗುತ್ತದೆ.

ಪುರಿ ದೇವಸ್ಥಾನದ ಬಾಗಿಲು ತೆರೆದ ಐದು ದಿನಗಳಲ್ಲಿ ಪುರಿಯ ಜನತೆಗೆ ದೇವರ ದರ್ಶನ ಪಡೆಯಲು ಅವಕಾಶ ಮಾಡಿಕೊಡುವಂತೆ ಕೇಳಲಾಗುತ್ತಿದೆ ಎಂದರು.
ದೇವಸ್ಥಾನದ ಆಸುಪಾಸಿನಲ್ಲಿ ವಾಸಿಸುತ್ತಿದ್ದರೂ ಕೂಡ ದೇವಸ್ಥಾನಕ್ಕೆ ತೆರಳಲು ಜನರಿಗೆ ಅವಕಾಶವಿರಲಿಲ್ಲ ಹೀಗಾಗಿ ಮೊದಲ ಐದು ದಿನ ಪುರಿಯ ಭಕ್ತರು ದೇವರ ದರ್ಶನ ಪಡೆಯಬೇಕು.

ಹೊಸ ವರ್ಷವಾಗಿದ್ದರಿಂದ ಭಕ್ತರು ಅಧಿಕ ಸಂಖ್ಯೆಯಲ್ಲಿ ಬರುವ ಸಾಧ್ಯೆ ಇರುವುದರಿಂದ ಜನವರಿ 1 ಹಾಗೂ 2 ರಂದು ದೇವಸ್ಥಾನವನ್ನು ಮುಚ್ಚಲಾಗುತ್ತದೆ.

Recommended Video

Mandya:ಕುಮಾರಸ್ವಾಮಿ ಬಿಜೆಪಿಗೆ ಬಂದು ಸಿಎಂ ಆಗೋ ಭ್ರಮೆಯಲ್ಲಿ ಇದ್ದಾರೆ-ಸಚಿವ ನಾರಾಯಣಗೌಡ ಆಕ್ರೋಶ | Oneindia Kannada

ಜನವರಿ 3 ರಂದು ಎಂದಿನಂತೆ ದೇವಸ್ಥಾನದ ಬಾಗಿಲು ತೆರೆದಿರಲಿದೆ. 48 ಗಂಟೆಯೊಳಗಾಗಿ ಪಡೆದ ಕೊವಿಡ್ ನೆಗೆಟಿವ್ ವರದಿಯನ್ನು ಭಕ್ತರು ಹೊಂದಿರಬೇಕು. ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಮಾಡಿಸಲು ಅನುಮತಿ ಇದೆ. 5 ಸಾವಿರ ಭಕ್ತರಿಗೆ ಅವಕಾಶ ನೀಡಲಾಗುತ್ತಿದೆ. ಕ್ರಮೇಣವಾಗಿ ಭಕ್ತರ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ.

English summary
The Shree Jagannath Temple here is likely to throw open its gates to devotees before New Year after being closed for nine months due to COVID-19, the temple administration said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X