ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷಾಂತರ: ಬಿಜೆಡಿ ತೊರೆದು ಬಿಜೆಪಿ ಸೇರಿದ ಸಂಸದ ಬಲಭದ್ರ

|
Google Oneindia Kannada News

ನವದೆಹಲಿ, ಮಾರ್ಚ್ 16: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳಿಂದಲೂ ಬಿಜು ಜನತಾ ದಳ(ಬಿಜೆಡಿ) ಅಂತರ ಕಾಯ್ದುಕೊಂಡಿದೆ. ಆದರೆ, ಬಿಜೆಡಿಯ ಹಾಲಿ ಸಂಸದ, ಹಿರಿಯ ನಾಯಕ ಬಲಭದ್ರ ಮಾಂಝಿ ಅವರು ಬಿಜೆಡಿ ತೊರೆದು ಭಾರತೀಯ ಜನತಾ ಪಕ್ಷ(ಬಿಜೆಪಿ)ವನ್ನು ಅಧಿಕೃತವಾಗಿ ಸೇರಿಕೊಂಡಿದ್ದಾರೆ.

ಮಧ್ಯ ಪ್ರದೇಶ, ಒಡಿಶಾ ಉಪಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗ ಮಧ್ಯ ಪ್ರದೇಶ, ಒಡಿಶಾ ಉಪಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗ

ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಜುವಲ್ ಓರಮ್ ಅವರ ಸಮ್ಮುಖದಲ್ಲಿ ಬಲಭದ್ರ ಅವರು ಬಿಜೆಪಿ ಸೇರಿದರು. ನಬರಂಗ್ ಪುರ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಬಲಭದ್ರ ಅವರ ಸೇರ್ಪಡೆಯಿಂದ ಬುಡಕಟ್ಟು ಜನಾಂಗದ ಮತಗಳನ್ನು ಸೆಳೆಯಬಹುದು ಎಂಬ ನಿರೀಕ್ಷೆಯಲ್ಲಿ ಬಿಜೆಪಿಯಿದೆ.

2014ರಲ್ಲಿ ಕಾಂಗ್ರೆಸ್ಸಿನ ಪ್ರದೀಪ್ ಕುಮಾರ್ ಮಾಂಝಿ ಅವರನ್ನು ಸೋಲಿಸಿ ಬಲಭದ್ರ ಅವರು ಸಂಸದರಾಗಿ ಆಯ್ಕೆಯಾಗಿದ್ದರು. ಸುಂದರ್ ಘರ್ ಕ್ಷೇತ್ರದಲ್ಲಿ ಬಿಜೆಡಿ ಅಭ್ಯರ್ಥಿ ದಿಲೀಪ್ ಕುಮಾರ್ ಟಿರ್ಕೆ ಅವರನ್ನು ಸೋಲಿಸಿ, ಬಿಜೆಪಿಗೆ ಏಕೈಕ ಸ್ಥಾನ ಗೆಲ್ಲಿಸಿ ಕೊಟ್ಟಿದ್ದ ಜುಯಲ್ ಓರಾಮ್ ಹಾಗೂ ಬಲಭದ್ರ ಅವರ ಮೇಲೆ ಬಿಜೆಪಿ ಈ ಬಾರಿ ವಿಶ್ವಾಸ ಇಟ್ಟುಕೊಂಡಿದೆ,

ಮಹಾಘಟಬಂಧನಕ್ಕೆ ಬಿಜೆಡಿ ಬೆಂಬಲವಿಲ್ಲ: ನವೀನ್ ಪಟ್ನಾಯಕ್ ಮಹಾಘಟಬಂಧನಕ್ಕೆ ಬಿಜೆಡಿ ಬೆಂಬಲವಿಲ್ಲ: ನವೀನ್ ಪಟ್ನಾಯಕ್

Lok Sabha elections 2019: BJD MP Balabhadra Majhi joins BJP

ಒಡಿಶಾದಲ್ಲಿ ಒಟ್ಟು 21(543) ಲೋಕಸಭಾ ಕ್ಷೇತ್ರಗಳಿದ್ದು, ಅವುಗಳಲ್ಲಿ 20 ಕ್ಷೇತ್ರಗಳನ್ನು 2014 ರಲ್ಲಿ ಬಿಜು ಜನತಾದಳವೇ ಗೆದ್ದು ದಾಖಲೆ ಬರೆದಿತ್ತು. ಅಕಸ್ಮಾತ್ ಈ ಪಕ್ಷ ಯಾವುದೇ ಒಂದು ಮೈತ್ರಿಕೂಟದ ಭಾಗವಾದರೂ ಅವರಿಗೆ ಲಾಭ ಖಂಡಿತ ಎಂಬ ಎಣಿಕೆಯಿದೆ.

English summary
Odisha MP Balabhadra Majhi, who quit the BJD earlier this week, joined the Bharatiya Janata Party on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X