ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುರಿ ಜಗನ್ನಾಥ ದೇವಾಲಯ ಪುನರಾರಂಭ: ಭಕ್ತಾದಿಗಳು ಕೋವಿಡ್ ನೆಗೆಟಿವ್ ರಿಪೋರ್ಟ್ ತೋರಿಸ್ಬೇಕು!

|
Google Oneindia Kannada News

ಪುರಿ, ಜನವರಿ 03: ಒಡಿಶಾದ ಪುರಿಯಲ್ಲಿ ಜಗನ್ನಾಥ ಸ್ವಾಮಿಯ ದರ್ಶನಕ್ಕೆ ಎಲ್ಲಾ ರಾಜ್ಯದ ಭಕ್ತರಿಗೆ ಅವಕಾಶ ನೀಡಲಾಗಿದೆ. ಆದರೆ ಭಕ್ತಾದಿಗಳು ಕೋವಿಡ್ ನೆಗೆಟಿವ್ ವರದಿಯನ್ನು ದೇವಾಲಯ ಪ್ರವೇಶಕ್ಕೂ ಮುನ್ನ ತೋರಿಸಬೇಕಾಗಿದೆ.

ಕಟ್ಟುನಿಟ್ಟಾದ ಕೋವಿಡ್ ಮಾರ್ಗಸೂಚಿಗಳೊಂದಿಗೆ ಹೊಸ ವರ್ಷದ ದಿನ ಜನವರಿ 1 ಮತ್ತು 2ರಂದು ದೇವಾಲಯವನ್ನು ಮುಚ್ಚಲಾಗಿತ್ತು. ಆದರೆ ಇಂದಿನಿಂದ ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ರಾಜ್ಯದ ಇತರ ಭಾಗಗಳ ಜನರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ.

ಕೊರೊನಾ ಲಸಿಕೆ ಪಡೆದಿದ್ದ ವೈದ್ಯನ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು ಕೊರೊನಾ ಲಸಿಕೆ ಪಡೆದಿದ್ದ ವೈದ್ಯನ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ದೇವಾಲಯಕ್ಕೆ ಭೇಟಿ ನೀಡುವವರಿಗೆ ಅಧಿಕಾರಿಗಳು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. ಭಕ್ತರು ಕಡ್ಡಾಯವಾಗಿ ಮಾಸ್ಕ್‌ಗಳನ್ನು ಧರಿಸಬೇಕು, ಕೈಗಳನ್ನು ಸ್ವಚ್ಛಗೊಳಿಸಬೇಕು ಮತ್ತು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಬೇಕು.

Jagannath Temple Reopens For Everyone: Devotees Must To Carry Covid Negative Report

'' ಕೋವಿಡ್-19 ನೆಗೆಟಿವ್ ವರದಿ ಹೊಂದಿರುವವರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶವಿದೆ. ಇದು ಭಾರತದ ಎಲ್ಲಾ ದೇವಾಲಯಗಳಿಗೆ ಅನ್ವಯಿಸುತ್ತದೆ. ಭಕ್ತಾಧಿಗಳು ಕೋವಿಡ್ -19 ವರದಿಯ ಜೊತೆಗೆ, ಆಧಾರ್ ಕಾರ್ಡ್‌ಗಳನ್ನು ದೇವಾಲಯಕ್ಕೆ ಕೊಂಡೊಯ್ಯಬೇಕಾಗುತ್ತದೆ. ಪ್ರವೇಶ ದ್ವಾರದಲ್ಲಿ ಭಕ್ತಾದಿಗಳ ಉಷ್ಣ ತಾಪಮಾನವನ್ನು ಪರಿಶೀಲಿಸಲಾಗುತ್ತಿದೆ'' ಎಂದು ಕೊಲ್ಕತ್ತಾದ ರಿಯಾ ಶಾ ಹೇಳಿದ್ದಾರೆ.

ಇನ್ನೂ ಜನರನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಭದ್ರತೆ ಕೈಗೊಳ್ಳಲಾಗಿದೆ ಎಂದು ಪುರಿಯ ಪೊಲೀಸ್ ವರಿಷ್ಠಾಧಿಕಾರಿ ಡಾ. ಕನ್ವರ್ ವಿಶಾಲ್ ಸಿಂಗ್ ಹೇಳಿದ್ದಾರೆ. ಭಕ್ತಾಧಿಗಳು ತಮ್ಮ ನೆಗೆಟಿವ್ ರಿಪೋರ್ಟ್ ತರಲು ವಿಫಲವಾದ ಕಾರಣ ಸಾವಿರಾರು ಜನರನ್ನು ಅಧಿಕಾರಿಗಳು ಹಿಂದಿರುಗಿಸಿದರು. ಪುರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರವಾಸಿಗರಿಗೆ ಅವಕಾಶವಿಲ್ಲದ ಕಾರಣ ಅನೇಕ ಭಕ್ತರು ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆಗಾಗಿ ಭುವನೇಶ್ವರಕ್ಕೆ ಹೋಗುತ್ತಿದ್ದಾರೆ.

English summary
Jagannath Temple in Odisha's Puri opened for everyone today, but with strict Covid guidelines. Devotees Must To Carry Covid Negative Report
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X