• search
 • Live TV
ಭುವನೇಶ್ವರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಗನ್ನಾಥ ರಥ ಯಾತ್ರೆ 2020: ದೇವಸ್ನಾನ ಪೂರ್ಣಿಮೆಯ ವಿಶೇಷತೆಯೇನು?

|

ಭುವನೇಶ್ವರ, ಜೂನ್ 5: ಭಕ್ತರು ಕಾತುರದಿಂದ ಕಾಯುತ್ತಿರುವ ಜಗನ್ನಾಥ ದೇವರ ಸ್ನಾನ ಯಾತ್ರೆ ಒಡಿಶಾದಲ್ಲಿ ಇಂದಿನಿಂದ ಆರಂಭಗೊಂಡಿದೆ.

   ಫೊರ್ಬ್ಸ್ ವಿಶ್ವದ ಅತ್ಯಂತ ಶ್ರೀಮಂತ ತಾರೆಯರ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಏಕೈಕ ಭಾರತೀಯ | Oneindia Kannada

   ಸ್ನಾನ ಯಾತ್ರೆಯು ಪೂರ್ಣ ಹುಣ್ಣಿಮೆಯ ದಿನ ಪ್ರತಿವರ್ಷವೂ ನಡೆಯುತ್ತದೆ. ಈ ವರ್ಷ ದೇವಸ್ತಾನ ಪೂರ್ಣಮಾ ಅಥವಾ ಸ್ನಾನಯಾತ್ರೆ ಜೂನ್ 5 ರಂದು ಆಚರಿಸಲಾಗುತ್ತಿದೆ.

   ದೇವಸ್ಥಾನ ತೆರೆದರೂ ಪಾಲಿಸಲೇಬೇಕಿದೆ ಈ ನಿಯಮಗಳನ್ನು

   ಕೊರೊನಾ ವೈರಸ್ ಭಯದಿಂದಾಗಿ ಭಕ್ತರಿಗೆ ಜಗನ್ನಾಥ ದೇವಸ್ಥಾನದ ಹತ್ತಿರ ಹೋಗಲು ಅನುಮತಿ ನೀಡುತ್ತಿಲ್ಲ. ಕೇವಲ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಭದ್ರತಾ ಸಿಬ್ಬಂದಿ ಸೇರಿ ಈ ರಥ ಯಾತ್ರೆ ಮುನ್ನಡೆಸುತ್ತಿದ್ದಾರೆ. ಟಿವಿಯಲ್ಲಿ ರಥಯಾತ್ರೆ ಲೈವ್ ತೋರಿಸಲಾಗುತ್ತಿದೆ.

   ದೇವಸ್ನಾನ ಪೂರ್ಣಿಮಾ ಅಥವಾ ಸ್ನಾನ ಯಾತ್ರೆಯನ್ನು ಪುರಿಯಲ್ಲಿ ನಡೆಯುವ ಜಗನ್ನಾಥ ಯಾತ್ರೆಗೂ ಮುನ್ನ ನಡೆಸಲಾಗುತ್ತದೆ. ಭಕ್ತರು ನದಿಯನ್ನು ಮಿಂದೇಳುತ್ತಾರೆ.

   ಸ್ನಾನಯಾತ್ರೆಗೂ ಮುನ್ನ ನಡೆಯುವುದೇನು?

   ಸ್ನಾನಯಾತ್ರೆಗೂ ಮುನ್ನ ನಡೆಯುವುದೇನು?

   ಸ್ನಾನಯಾತ್ರೆ ಆರಂಭಕ್ಕೂ ಮುನ್ನದಿನ ಜಗನ್ನಾಥ, ಬಾಲಭದ್ರ, ಸುಭದ್ರಾದೇವಿ , ಸುದರ್ಶನ ಚಿತ್ರಗಳನ್ನು ದೇವಸ್ಥಾನದಿಂದ ತೆಗೆದುಕೊಂಡು ಬರಲಾಗುತ್ತದೆ. ಅಲ್ಲಿಂದ ನದಿಯವರೆಗೆ 'ಪಹಂಡಿ' ಮೆರವಣಿಗೆ ನಡೆಯಲಿದೆ. ಪ್ರತಿಯೊಬ್ಬರು ದೇವಸ್ಥಾನದಲ್ಲಿಯೇಏ ಇರಬೇಕು ಕೆಲವರಿಗೆ ಮಾತ್ರ ನೀಡಿನಲ್ಲಿ ಇಳಿಯಲು ಅವಕಾಶ ಮಾಡಿಕೊಡಲಾಗುತ್ತದೆ.

   ಸ್ನಾನ ಯಾತ್ರೆ

   ಸ್ನಾನ ಯಾತ್ರೆ

   ವರ್ಷಕ್ಕೊಮ್ಮ 'ಸುನಾ ಕುವಾ' ಬಂಗಾರದ ಬಾವಿಯಲ್ಲಿ ಸ್ನಾನ ಮಾಡಲಾಗುತ್ತಿದೆ. ದೇವಸ್ಥಾನದ ಅರ್ಚಕರು ನೀರಿಗೆ ಇಳಿಯುವಾಗ ಬಾಯಿ ಹಾಗೂ ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಳ್ಳುತ್ತಾರೆ. ಅವರ ಉಸಿರು ನೀರಿಗೆ ತಾಗಿ ನೀರು ಮಲಿನವಾಗಬಾರದು ಎಂದು. ಹಾಗೆಯೇ ಗಂಧ, ಚಂದನ ಕೆಲವು ಹೂವುಗಳಿಂದ ನೀರನ್ನು ಶುಚಿಗೊಳಿಸುತ್ತಾರೆ. ಬಳಿಕ ದೇವ ಜಗನ್ನಾಥ, ದೇವಿ ಸುಭದ್ರಾ ಹಾಗೂ ಬಾಲಭದ್ರ ದೇವರಿಗೆ ಗಣಪತಿ ರೀತಿ ಅಲಂಕಾರ ಮಾಡಲಾಗುತ್ತದೆ.

   ಸ್ನಾನ ಯಾತ್ರೆ ಮುಗಿದ ಮೇಲೆ 14 ದಿನ ದೇವಸ್ಥಾನ ಬಂದ್

   ಸ್ನಾನ ಯಾತ್ರೆ ಮುಗಿದ ಮೇಲೆ 14 ದಿನ ದೇವಸ್ಥಾನ ಬಂದ್

   ಸ್ನಾನಯಾತ್ರೆ ಮುಗಿದ ಬಳಿಕ 10 ದಿನ ದೇವಸ್ಥಾನವನ್ನು ಬಂದ್ ಮಾಡಲಾಗುತ್ತದೆ. ದಿನನಿತ್ಯದ ಪೂಜೆಯು ಕೂಡ ನಡೆಯುವುದಿಲ್ಲ. ಭಕ್ತರು ವಿಶೇಷ ದರ್ಶನ ಪಡೆಯಲಿದ್ದಾರೆ. ಈ ಸಂದರ್ಭದಲ್ಲಿ ಭಕ್ತರು ಕೇವಲ ಫಲಾಹಾರವನ್ನು ಮಾತ್ರ ಸ್ವೀಕರಿಸಬಹುದಾಗಿದೆ.

   ಅಲರ್ನಾತ್ ದೇವ

   ಅಲರ್ನಾತ್ ದೇವ

   ಸ್ನಾನ ಯಾತ್ರೆ ಮುಗಿದ ಬಳಿಕ ಅಲರ್ನಾತ್ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಬೇಕು ಬ್ರಹ್ಮಗಿರಿಯಲ್ಲಿದೆ ಪುರಿಯಿಂದ 25 ಕಿ.ಮೀ ದೂರದಲ್ಲಿದೆ. ಜಗನ್ನಾಥ ದೇವರು ಸ್ನಾನಯಾತ್ರೆ ಮುಗಿಸಿ ಅಲರ್ನಾತ್‌ಗೆ ಬರುತ್ತಾರೆ ಎನ್ನುವ ನಂಬಿಕೆ ಇನ್ನೂ ಉಳಿದಿದೆ.

   English summary
   The much-awaited Snana Yatra of Lord Jagannath has begun in Odisha today this year. The Snana Yatra is held on the full-moon day of the month of Jyestha. This year, Devasnana Purnima or Snana Yatra will be celebrated on Friday,June 5.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more