ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ನಿ-IV ಕ್ಷಿಪಣಿ ಯಶಸ್ವಿ ಪ್ರಯೋಗ, ಸೇನೆಗೆ ಮತ್ತಷ್ಟು ಬಲ

|
Google Oneindia Kannada News

ಭುವನೇಶ್ವರ್ (ಒಡಿಶಾ), ಡಿಸೆಂಬರ್ 23: ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ದೂರ ವ್ಯಾಪ್ತಿ ಅಗ್ನಿ-IV ಕ್ಷಿಪಣಿಯನ್ನು ಭಾನುವಾರ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಯಿತು. ಇದು ನಾಲ್ಕು ಸಾವಿರ ಕಿ.ಮೀ. ದೂರದ ಗುರಿಯನ್ನು ಕೂಡ ತಲುಪಬಲ್ಲ ಸಾಮರ್ಥ್ಯ ಹೊಂದಿದೆ.

ನೆಲದಿಂದ ನೆಲಕ್ಕೆ ಚಿಮ್ಮಬಲ್ಲ ಈ ಕ್ಷಿಪಣಿಯನ್ನು ಡಾ.ಅಬ್ದುಲ್ ಕಲಾಂ ದ್ವೀಪದಿಂದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ಪರೀಕ್ಷೆ ಮಾಡಲಾಯಿತು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಈ ಪರೀಕ್ಷೆ 'ಸಂಪೂರ್ಣ ಯಶಸ್ವಿಯಾಗಿದೆ', ಪ್ರಯೋಗಾರ್ಥ ಪರೀಕ್ಷೆಯಲ್ಲಿ ಇದರ ಉದ್ದೇಶಗಳೆಲ್ಲವೂ ಈಡೇರಿದೆ ಎನ್ನಲಾಗಿದೆ.

ಸುಖೋಯ್‌ ಯುದ್ಧ ವಿಮಾನದಿಂದ ಬ್ರಹ್ಮೋಸ್‌ ಕ್ಷಿ‍‍ಪಣಿ ಯಶಸ್ವಿ ಉಡಾವಣೆಸುಖೋಯ್‌ ಯುದ್ಧ ವಿಮಾನದಿಂದ ಬ್ರಹ್ಮೋಸ್‌ ಕ್ಷಿ‍‍ಪಣಿ ಯಶಸ್ವಿ ಉಡಾವಣೆ

ಎಲ್ಲ ರಾಡಾರ್ ಗಳು, ಟ್ರಾಕಿಂಗ್ ವ್ಯವಸ್ಥೆಗಳು ಹಾಗೂ ರೇಂಜಿಂಗ್ ಸ್ಟೇಷನ್ ಗಳು ಮೊಬೈಲ್ ಲಾಂಚರ್ ಮೂಲಕ ಹಾರಿಸಲಾದ ಕ್ಷಿಪಣಿಯ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಿವೆ. ಒಡಿಶಾದ ಕಡಲ ತೀರದಾದ್ಯಂತ ರಾಡಾರ್ಸ್ ಹಾಗೂ ಎಲೆಕ್ಟ್ರೋ ಆಪ್ಟಿಕಲ್ ಸಿಸ್ಟಮ್ಸ್ ಇಡಲಾಗಿತ್ತು. ಕ್ಷಿಪಣಿಗೆ ನಿಗದಿ ಪಡಿಸಿದ ಎಲ್ಲ ಮಾನದಂಡಗಳನ್ನು ಅದು ಪೂರೈಸುತ್ತದೆಯೇ ಎಂದು ಗುರುತಿಸಲು ಇಂಥ ವ್ಯವಸ್ಥೆ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

Agni

ಅಂತಿಮ ಘಟನಾವಳಿಗಳಿಗೆ ಸಾಕ್ಷಿಯಾಗಿ ಎರಡು ನೌಕಾಸೇನೆ ಹಡಗುಗಳನ್ನು ಲಂಗರು ಹಾಕಿ ನಿಲ್ಲಿಸಲಾಗಿತ್ತು. ಇದು ಅಗ್ನಿ IVರ ಏಳನೇ ಪ್ರಯೋಗ. ಕಳೆದ ಬಾರಿಯ ಪರೀಕ್ಷೆ ಜನವರಿಯಲ್ಲಿ ಆಗಿತ್ತು. ಆಗಲೂ ಯಶಸ್ವಿ ಆಗಿತ್ತು. ಸ್ವದೇಶಿ ನಿರ್ಮಿತ ಅಗ್ನಿ IV ಕ್ಷಿಪಣಿಯು ಅತ್ಯಾಧುನಿಕವಾದ, ನಾಲ್ಕು ಸಾವಿರ ಕಿ.ಮೀ. ದೂರದ ಗುರಿ ತಲುಪಬಲ್ಲ ಎರಡು ಹಂತದ ಕ್ಷಿಪಣಿ.

ಅಣ್ವಸ್ತ್ರ ಹೊತ್ತೊಯ್ಯಬಲ್ಲ ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿಅಣ್ವಸ್ತ್ರ ಹೊತ್ತೊಯ್ಯಬಲ್ಲ ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿ

ಇದು ಇಪ್ಪತ್ತು ಮೀಟರ್ ಉದ್ದದ ಹಾಗೂ ಹದಿನೇಳು ಟನ್ ತೂಕ ತೂಕದ್ದಾಗಿದೆ. ಅಗ್ನಿ IV ಕ್ಷಿಪಣಿಯು ಅತ್ಯಾಧುನಿಕ ಏವಿಯಾನಿಕ್ಸ್ ಹೊಂದಿದ, ಐದನೇ ತಲೆಮಾರಿನ ಕಂಪ್ಯೂಟರ್ ಮತ್ತು ವಿತರಣೆಯ ರಚನೆ ಒಳಗೊಂಡಿದೆ. ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಅಗ್ನಿ I, II ಹಾಗೂ III ಮತ್ತು ಪೃಥ್ವಿ ಕ್ಷಿಪಣಿ ಸೇನೆಗೆ ಹೆಚ್ಚಿನ ಬಲ ತಂದಿವೆ.

English summary
India on Sunday successfully test-fired its nuclear-capable long-range ballistic missile Agni-IV, with a strike range of 4,000 km, as part of a user trial by the Army.The strategic surface-to-surface missile was flight tested from launch complex-4 of the Integrated Test Range (ITR) at Dr Abdul Kalam Island, earlier known as Wheeler Island, at about 8.35 am, the defence sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X